ಶಾರುಖ್ ಖಾನ್ ಜನ್ಮದಿನಕ್ಕೆ ಫ್ಯಾನ್ಸ್‌ಗೆ 'ಡಂಕಿ' ಟೀಸರ್ ಗಿಫ್ಟ್: ಮಿಂಚಿದ ವಿಕ್ಕಿ ಕೌಶಲ್, ತಾಪ್ಸಿ ಪನ್ನು!

ಈ ವರ್ಷ ಶಾರುಖ್‌ ಖಾನ್ ಅವರಿಗೆ ಹೆಚ್ಚು ಖುಷಿ, ದಾಖಲೆಗಳನ್ನು ನೀಡಿರುವ ವರ್ಷ. ವರ್ಷದ ಆರಂಭದಲ್ಲಿ ಬಂದ ಪಠಾಣ್, ಇತ್ತೀಚೆಗೆ ಬಂದ ಜವಾನ್ ಎರಡು ಸಿನಿಮಾಗಳು ಭರ್ಜರಿ ಹಿಟ್ ಆಗಿವೆ. ತಮಿಳು ಸಿನಿಮಾ ನಿರ್ದೇಶಕ ಅಟ್ಲಿ ಮತ್ತು ಶಾರುಖ್ ಖಾನ್‌ ಅವರ ಜವಾನ್ ಸಿನಿಮಾ ಹಲವು ದಾಖಲೆಗಳನ್ನೇ ಬರೆದಿದೆ. ಈ ಖುಷಿಯಲ್ಲಿರುವ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.

58ನೇ ವಸಂತಕ್ಕೆ ಕಾಲಿಟ್ಟಿರುವ ಬಾದ್‌ಷಾಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಕಿಂಗ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಈಗಾಗಲೇ ನೆಟ್‌ಫ್ಲಿಕ್ಸ್ ಜವಾನ್ ಸಿನಿಮಾ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದೆ. ಇದರ ಬಳಿಕ ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಡಂಕಿ' ಯ ಟೀಸರ್ ಬಿಡುಗಡೆಯಾಗಿದೆ. ರಾಜ್ ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಅವರ ಮೊದಲ ಸಿನಿಮಾದ ಝಲಕ್ ಬಿಡುಗಡೆಯಾಗಿದೆ.

Dunki teaser: Shah Rukh Khans Dunki teaser out, Vicky Kaushal, Taapsee Pannu shine

ಸ್ನೇಹಿತರೇ ಕುಟುಂಬ ಎನ್ನುವ ಶಾರುಖ್ ಖಾನ್!

ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ರಾಜ್‌ ಕುಮಾರ್ ಹಿರಾನಿ ಈ ಬಾರಿ ಶಾರುಖ್ ಖಾನ್ ಜೊತೆಗೆ ಪ್ರೀತಿ ಮತ್ತು ಸ್ನೇಹದ ಒಂದು ಸಾಹಸಗಾಥೆಯನ್ನು ಹೇಳಲು ಕೈಜೋಡಿಸಿದ್ದಾರೆ.

ಐವರು ಸ್ನೇಹಿತರು, ಅವರ ಕಥೆಗಳು, ವಿದೇಶದಲ್ಲಿ ನೆಲೆಸಬೇಕು ಎನ್ನುವ ಅವರ ಕನಸುಗಳ ಸುತ್ತ ಡಂಕಿ ಸಿನಿಮಾವನ್ನು ಹೆಣೆಯಲಾಗಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಹೆಣೆದಿರುವ ಡಂಕಿ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ತಾಪ್ಸಿ ಪನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ.

Dunki teaser: Shah Rukh Khans Dunki teaser out, Vicky Kaushal, Taapsee Pannu shine

ಚಿತ್ರದಲ್ಲಿ ಬೊಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಅಡಿಯಲ್ಲಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ.

ಟೀಸರ್‌ ಹಂಚಿಕೊಂಡಿರುವ ನಟ ಶಾರುಖ್ ಖಾನ್, "ತಮ್ಮ ಕನಸುಗಳು ಮತ್ತು ಆಸೆಗಳನ್ನು ಪೂರೈಸಲು ಪ್ರಯತ್ನಿಸುತ್ತಿರುವ ಸರಳ ಮತ್ತು ನೈಜ ಜನರ ಕಥೆ. ಸ್ನೇಹ, ಪ್ರೀತಿ ಮತ್ತು ಒಟ್ಟಿಗೆ ಇರುವುದು... ಮನೆ ಎಂಬ ಸಂಬಂಧದಲ್ಲಿ! ಹೃದಯಸ್ಪರ್ಶಿ ಕಥೆಗಾರನಿಂದ ಹೆಣೆದ ಹೃದಯಸ್ಪರ್ಶಿ ಕಥೆ. ಈ ಪ್ರಯಾಣದ ಭಾಗವಾಗಿರುವುದು ಒಂದು ಗೌರವ. ನೀವೆಲ್ಲರೂ ನಮ್ಮೊಂದಿಗೆ ಪ್ರಯಾಣಕ್ಕೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ. ಡಂಕಿ ಈ ಕ್ರಿಸ್ಮಸ್‌ನಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ" ಎಂದಿದ್ದಾರೆ.

ನವೆಂಬರ್ 2 ರಂದು ಡಂಕಿ ಡ್ರಾಪ್ 1 ಎಂದು ಟೀಸರ್ ಬಿಡುಗಡೆ ಮಾಡಿದ್ದು, ಒಂದು ನಿಮಿಷ ಮತ್ತು 47 ಸೆಕೆಂಡ್ ವೀಡಿಯೋದಲ್ಲಿ ಲಂಡನ್ ತಲುಪುವ ಆಸೆಯಲ್ಲಿರುವ ಸ್ನೇಹಿತರ ಭಾವನಾತ್ಮಕ ಪ್ರಯಾಣದ ನೋಟವನ್ನು ನೀಡುತ್ತದೆ. ಆರಂಭಿಕ ದೃಶ್ಯದಲ್ಲಿ ಮರುಭೂಮಿಯಲ್ಲಿ ನಡೆದುಕೊಂಡು ಹೊಗುವ ವಲಸಿಗರ ಗುಂಪನ್ನು ತೋರಿಸಲಾಗಿದೆ. ಇದು ಸ್ನೇಹ, ಪ್ರೀತಿ, ಆಸೆ, ವಲಸೆಗಳ ಭಾವನಾತ್ಮಕ ಪ್ರಯಾಣ ಎನ್ನಬಹುದು.

More from Filmibeat

English summary
Shah Rukh Khan's Dunki teaser out, Vicky Kaushal, Taapsee Pannu shine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X