ಡಂಕಿ vs ಸಲಾರ್: ತೆರೆಮರೆಯಲ್ಲಿ ನಡೆಯುತ್ತಿದೆ ದೊಡ್ಡ ಕದನ..! ಗೆಲ್ಲುವವರ್‍ಯಾರು?

ಈ ವಾರ ದೊಡ್ಡ ಬಾಕ್ಸ್ ಆಫೀಸ್ ಕದನಕ್ಕೆ ಇಳಿಯುತ್ತಿರುವ ಸಿನಿಮಾಗಳು ಶಾರುಖ್ ಖಾನ್‌ ನಟನೆಯ ಡಂಕಿ ಮತ್ತು ಪ್ರಭಾಸ್ ನಟನೆಯ ಸಲಾರ್. ಎರಡು ಸಿನಿಮಾಗಳು ಈಗಾಗಲೇ ಹಾಡು, ಟ್ರೈಲರ್, ಟೀಸರ್‌ಗಳ ಮೂಲಕ ಜನರಲ್ಲಿ ಕುತೂಹಲ ಮೂಡಿಸಿವೆ. ಆದರೆ, ಒಂದೊಂದು ಸಿನ ಹೆಚ್ಚು ಕಮ್ಮಿಯಾಗಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ನಡುವೆ ತೆರೆಮರೆಯಲ್ಲೂ ದೊಡ್ಡ ಕದನ ನಡೆಯುತ್ತಿದೆ.

ದೊಡ್ಡ ಬಾಕ್ಸ್ ಆಫೀಸ್ ಕದನ ಗುರುವಾರದಿಂದ ಆರಂಭವಾಗಲಿದೆ. ಇದು ಜನರ ಕಣ್ಣೀಗೆ ಕಾಣುತ್ತಿದೆ. ಆದರೆ, ಕಣದ ಕನದ ತೆರೆ ಮರೆಯಲ್ಲಿ ನಡೆಯುತ್ತಿದೆ. ಸಿನಿಮಾ ವಿತರಕರು ಮತ್ತು ಸಿನಿಮಾ ತಂಡಗಳ ನಡುವಿನ ಮಾತುಕತೆ, ಇನ್ನೊಂದು ಸಿನಿಮಾವನ್ನು ಸೋಲಿಸಿ ತಮ್ಮ ಸಿನಿಮಾಗೆ ಹೆಚ್ಚಿ ಸ್ಕ್ರೀನ್ ಕೊಡಿಸುವ ಕೆಲಸಕ್ಕೆ ವಿತರಕರು ಮುಂದಾಗುತ್ತಾರೆ. ಇದೇ ಕೆಲಸ ಈಗ ಡಂಕಿ ಮತ್ತು ಸಲಾರ್ ವಿಷಯದಲ್ಲಿ ನಡೆಯುತ್ತಿದೆ.

Dunki vs Salaar: Dunki distributors don’t want to share the screen with Salaar

ತೆರೆಮರೆಯಲ್ಲಿ ಡಂಕಿ ಮತ್ತು ಸಲಾರ್ ಕದನ..!

ಕ್ರಿಸ್ಮಸ್ ರಜೆ ಹಿನ್ನೆಲೆ ಎರಡು ದೊಡ್ಡ ಸಿನಿಮಾಗಳು ಥಿಯೇಟರ್‌ಗೆ ಕಾಲಿಡುತ್ತಿವೆ. ಹೆಚ್ಚು ಸ್ಕ್ರೀನ್ ಮತ್ತು ಹೆಚ್ಚು ಪ್ರದರ್ಶನವನ್ನು ಪಡೆಯಲು ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟು ಪ್ರಯತ್ನ ಪಡುತ್ತವೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಗುರುವಾರ, ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ. ಇದರ ಒಂದು ದಿನದ ನಂತರ, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ 'ಸಲಾರ್' ಜಾಗತಿಕವಾಗಿ ತೆರೆಗೆ ಬರಲಿದೆ.

ಹೀಗೆ ಎರಡೆರಡು ಸಿನಿಮಾಗಳು ಒಟ್ಟಿಗೆ ಬರುವ ಕಾರಣ ತುಂಬಾ ಗೊಂದ ಆಗುವುದು ಸಿಂಗಲ್ ಸ್ಕ್ರೀನ್ ಮಾಲೀಕರಿಗೆ. ಹೌದು, ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿ ಪ್ರಕಾರ, ಡಂಕಿ ಸಿನಿಮಾ ತಂಡ ಸಲಾರ್ ಜೊತೆಗೆ ಸ್ಕ್ರೀನ್ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.

ಡಂಕಿ ವಿತರಕರ ಷರತ್ತು!

ಸಿಂಗಲ್ ಸ್ಕ್ರೀನ್ ಮಾಲೀಕರಿಗೆ ಡಂಕಿ ವಿತರಕರ ಷರತ್ತು ಹೀಗಿದೆ. "ಒಂದೋ ನಮಗೆ ಎಲ್ಕು ಪ್ರದರ್ಶನಗಳನ್ನು ನೀಡಿ, ಅಥವಾ ಯಾವುದೇ ಪ್ರದರ್ಶನ ನೀಡಬೇಡಿ. ನೀವು ನಮಗೆ ಥಿಯೇಟರ್ ನೀಡದಿದ್ದರೆ, ಭವಿಷ್ಯದಲ್ಲಿ ಇತರ ಸಿನಿಮಾ ಬಿಡುಗಡೆಯಾದಾಗ ಏನು ಮಾಡಬೇಕೆಂದು ನಾವು ನೋಡುತ್ತೇವೆ" ಎಂದು ಹೇಳುತ್ತಿದೆ. ಡಂಕಿ ಸಿನಿಮಾವನ್ನು ಪೆನ್ ಮರುಧರ್ ವಿತರಿಸುತ್ತಿದ್ದರೆ, ಸಲಾರ್ ಅನ್ನು ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ ವಿತರಣೆ ಮಾಡುತ್ತಿದೆ.

Dunki vs Salaar: Dunki distributors don’t want to share the screen with Salaar

ಸಿನಿಮಾ ವಿತರಕರು ತಮ್ಮ ಸಿನಿಮಾಗೆ ಹೆಚ್ಚು ಸ್ಕ್ರಿನ್ ಸಿಗಲಿ ಎಂದು ಬಯಸುವುದು ಸಹಜ. ಅದರಲ್ಲೂ ಡಂಕಿ ತಂಡ ಈ ಷರತ್ತು ಹಾಕಲು ಕಾರಣ. ಸಿನಿಮಾ ಬಿಡುಗಡೆಯನ್ನು ಮೊದಲು ಘೋಷಿಸಿದ್ದವರು ಅವರೇ. ಆದ್ದರಿಂದ ಅವರು ಆದ್ಯತೆಗೆ ಅರ್ಹರು ಮತ್ತು ಅದರ ಜೊತೆಗೆ ಶಾರುಖ್ ಖಾನ್ ಮತ್ತೆ ಎರಡು ರೂ 500 ಕೋಟಿ ಚಿತ್ರಗಳೊಂದಿಗೆ ಥಿಯೇಟರ್‌ಗೆ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚು ಸ್ಕ್ರೀನ್ ನೀಡಬೇಕು ಎಂಬುದು ಅವರ ವಾದ.

ಒಳಗಿನ ಮೂಲಗಳ ಪ್ರಕಾರ, ಸಲಾರ್ ಒಂದು ದೊಡ್ಡ ಸಿನಿಮಾವಾಗಿದ್ದು, ಅವರಿಗೆ ಸಿಂಗಲ್ ಸ್ಕ್ರೀನ್‌ಗಳ ಪುಲ್ ಅಗತ್ಯವಿದೆ. "ಅವರು ನಾಲ್ಕು ಪ್ರದರ್ಶನಗಳಲ್ಲಿ ಪ್ರತಿ ಎರಡು ಪ್ರದರ್ಶನ ಸಿಕ್ಕರೂ ಸಾಕು ಎನ್ನುತ್ತಿದ್ದಾರೆ. ಆದರೆ, ಪ್ರೈಮ್ ಟೈಮ್ ಶೋ (6.30 PM ಮತ್ತು 9.30 PM) ಸಲಾರ್‌ಗೆ ನೀಡಬೇಕು. ಮಧ್ಯದ್ದು ಡಂಕಿಗೆ, ಉಳಿದ ಎರಡನ್ನು (12.30 PM ಮತ್ತು 3.30 PM)ಸಲಾರ್‌ಗೆ ನೀಡಬೇಕು ಎನ್ನುತ್ತಿದೆ. ಆದರೆ, ಈ ಸಿಂಗಲ್ ಸ್ಕ್ರೀನ್‌ಗಳು ಏನು ಮಾಡುವುದು ಎಂದು ಇನ್ನೂ ನಿರ್ಧರಿಸಿಲ್ಲ.

More from Filmibeat

English summary
Dunki distributors don’t want to share the screen with Salaar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X