ರಾನು ಮೊಂಡಲ್ 2.0: ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಇನ್ನೊಂದು ಪ್ರತಿಭೆ

ರೈಲ್ವೆ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರ ಹಾಡು ಹೇಳುವ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ರಾನು ಮೊಂಡಲ್ ಈಗ ಸೆಲೆಬ್ರಿಟಿ. ಬಾಲಿವುಡ್ ನಟ, ಸಂಗೀತ ನಿರ್ದೇಶಕ, ಗಾಯಕ ಆಗಿರುವ ಹಿಮೇಶ್ ರಶ್ಮಿಯಾ ಅವರು ರಾನು ಮೊಂಡಲ್ ಅವರ ಪ್ರತಿಭೆಯನ್ನ ಗುರುತಿಸಿ ತಮ್ಮ ಚಿತ್ರಗಳಲ್ಲಿ ಹಾಡಲು ಅವಕಾಶ ಕೊಟ್ಟಿದ್ದರು.

ಈ ಘಟನೆ ಆದ ಬಳಿಕ ರಾನು ಮೊಂಡಲ್ ಗೆ ಬೇಡಿಕೆ ಹೆಚ್ಚಿತ್ತು. ಹಿಮೇಶ್ ಅವರ ಚಿತ್ರಗಳಲ್ಲಿ ಸತತವಾಗಿ ಮೂರು ಹಾಡು ಹಾಡಿದ್ದರು. ಜೊತೆಗೆ ಇತರೆ ಸಿನಿಮಾಗಳಲ್ಲಿಯೂ ಹಾಡಲು ಅವಕಾಶ ಹುಡುಕಿಕೊಂಡು ಬರ್ತಿದೆ.

ದಿಕ್ಕುದೆಸೆ ಇಲ್ಲದೇ, ರೈಲ್ವೆ ಸ್ಟೇಷನ್ ನಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಮಹಿಳೆಯೊಬ್ಬರು, ಬಾಲಿವುಡ್ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೇಡಿಕೆ ಸೃಷ್ಟಿಸಿಕೊಳ್ಳುವುದು ಅಂದ್ರೆ ಅದೊಂದು ಅದೃಷ್ಟ.

Duplicate Ranu Mandal In Guwahati

ಇದೀಗ, ರಾನುಮೊಂಡಲ್ 2.0 ಸಿಕ್ಕಿದ್ದಾರೆ. ಹೌದು, 2.0 ಅಂದ್ರೆ ಮತ್ತೊಬ್ಬ ರಾನು ಮೊಂಡಲ್ ಸಿಕ್ಕಿದ್ದಾರೆ ಎಂದರ್ಥ. ನೋಡಲು ರಾನು ಮೊಂಡಲ್ ಅವರನ್ನೇ ಹೋಲುತ್ತಿರುವ ಈ ಮಹಿಳೆ ಗುಹಾವಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈಕೆಯ ಬಗ್ಗೆ ಹೆಚ್ಚೇನು ಮಾಹಿತಿ ತಿಳಿದುಬಂದಿಲ್ಲ. ಆದರೆ, ಈಕೆಯನ್ನ ನೋಡಿದ ಕೆಲವರು ವಿಡಿಯೋ ಮಾಡಿಕೊಂಡು, ಆಕೆಯಿಂದ ರಾನು ಮೊಂಡಲ್ ಹಾಡಿದ್ದ ತೇರಿ ಮೇರಿ ಹಾಡನ್ನು ಹಾಡಿಸಿದ್ದಾರೆ. ಬಳಿಕ, ರಾನು ಮೊಂಡಲ್ 2.0 ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೌಡ್ ಮಾಡಿದ್ದಾರೆ.

ಇದೀಗ, ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಬಹುಶಃ ರಾನು ಮೊಂಡಲ್ ಅವರಂತೆ ಈಕೆಗೂ ಅದೃಷ್ಟ ಸಿಕ್ಕಿದ್ರೂ ಸಿಗಬಹುದು.

English summary
Another women found in guwahati like ranu mondal. she is singing like ranu mondal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X