ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಇರಲಿಲ್ಲ: ಕಾಂಡೋಮ್ ಕಂಪನಿ ಟ್ವೀಟ್‌ ಭೇಷ್ ಎಂದ ನೆಟ್ಟಿಗರು!

By ಫಿಲ್ಮಿಬೀಟ್ ಡೆಸ್ಕ್

ಇಂದು ( ಜೂನ್ 27) ಬೆಳಗ್ಗೆಯಿಂದ ಆಲಿಯಾ ಭಟ್ ಪ್ರೆಗ್ನೆನ್ಸಿ ಬಗ್ಗೆ ಚರ್ಚೆಯಾಗುತ್ತಿದೆ. ಬೆಳ್ಳಂಬೆಳಗ್ಗೆ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ವಿಶಿಷ್ಠವಾಗಿ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆಲಿಯಾ ತಾಯಿಯಾಗುತ್ತಿರುವ ವಿಷಯವನ್ನು ಫೋಟೊ ಸಮೇತ ಶೇರ್ ಮಾಡಿದ್ದರು.

ಆಲಿಯಾ ಹಾಗೂ ರಣ್ಭೀರ್ ಕಪೂರ್ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಹೊರಬೀಳುತ್ತಿದ್ದಂತೆ ಬಾಲಿವುಡ್ ಮಂದಿಯೆಲ್ಲ ಶುಭಕೋರಿದ್ದರು. ಇದೇ ಬೆನ್ನಲೇ ಕಾಂಡೋಮ್ ಕಂಪನಿಯೊಂದು ವಿಶಿಷ್ಟವಾಗಿ ಶುಭಕೋರಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ, ಕಾಂಡೋಮ್ ಕಂಪನಿ ಮಾಡಿದ ಟ್ವೀಟ್‌ನಲ್ಲಿ ಏನಿದೆ? ಈ ಟ್ವೀಟ್ ನೋಡಿ ನೆಟ್ಟಿಗರು ಏನಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕಾಂಡೋಮ್ ಕಂಪನಿ ಟ್ವೀಟ್‌ಗೆ ನೆಟ್ಟಿಗರು ಫಿದಾ

ಆಲಿಯಾ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ತಮ್ಮ ಮನೆಗೆ ಹೊಸ ಸದಸ್ಯನ ಆಗಮನವಾಗುತ್ತಿದೆ ಎಂದು ಹೇಳಿದ ಕ್ಷಣದಿಂದ ಇಬ್ಬರ ಫ್ಯಾನ್ಸ್ ಖುಷಿಯಲ್ಲಿ ಹಿರಿ ಹಿರಿ ಹಿಗ್ಗಿದ್ದರು. ಇನ್ನೊಂದು ಕಡೆ ಸೆಲೆಬ್ರೆಟಿಗಳು ದಂಪತಿಗೆ ಶುಭ ಕೋರಿದ್ದರು. ಬೆಳಗ್ಗೆಯಿಂದ ಬಾಲಿವುಡ್‌ನ ಈ ಜೋಡಿ ಬಗ್ಗೆನೇ ಚರ್ಚೆಯಾಗುತ್ತಿತ್ತು.

ಇವರಿಬ್ಬರ ಖುಷಿಯಲ್ಲಿ ಕಾಂಡೋಮ್ ಕಂಪನಿ ಕೂಡ ಭಾಗಿಯಾಗಿದೆ. ದಂಪತಿಗೆ ಶುಭಾಶಗಳನ್ನು ತಿಳಿಸಿದೆ. ಇದೇ ವೇಳೆ ಡ್ಯುರೆಕ್ಸ್ ಕಾಂಡೋಮ್ ಕಂಪನಿ ಮಾಡಿದ ಟ್ವೀಟ್ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. " ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಖಂಡಿತವಾಗಿಯೂ ನಾವಿರಲಿಲ್ಲ." ಎಂದು ಕಾಂಡೋಮ್ ಕಂಪನಿ ಟ್ವೀಟ್ ಮಾಡಿದೆ. ಈ ಟ್ವೀಟ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ.

Durex Company Creative Tweet After Alia Bhatt And Ranbir Kapoor Announce Pregnancy

ಒಂದಲ್ಲ ಎರಡೆರಡು ಟ್ವೀಟ್

ಡ್ಯುರೆಕ್ಸ್ ಕಾಂಡೋಮ್ ಕಂಪನಿ ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ ಒಂದು ಟ್ವೀಟ್ ಮಾಡಿ ಶುಭಕೋರಿತ್ತು. ಬಳಿಕ ಸಂಜೆ ವೇಳೆಗೆ ಮತ್ತೊಂದು ಟ್ವೀಟ್ ಮಾಡಿ ಇನ್ನಷ್ಟು ಮೆಚ್ಚುಗೆ ಗಳಿಸಿದೆ. " ಪ್ರೀತಿಯ ರಣ್‌ಬೀರ್ ಮತ್ತು ಆಲಿಯಾ, ನಿಮ್ಮ ಮಧುರ ಕ್ಷಣದಲ್ಲಿ ನಾವಿಲ್ಲ ಎಂದರೆ FUN ಇರುವುದಿಲ್ಲ." ಎಂದು ಟ್ವೀಟ್ ಮಾಡಿದೆ.

ಈ ಎರಡೂ ಟ್ವೀಟ್‌ಗಳನ್ನು ನೋಡಿ ನೆಟ್ಟಿಗರು ಭೇಷ್ ಎಂದಿದ್ದಾರೆ. ಆಲಿಯಾ ಹಾಗೂ ರಣ್‌ಬೀರ್ ಅವರ ಈ ಖುಷಿಯ ಕ್ಷಣದಲ್ಲಿ ತಮ್ಮ ಪ್ರಾಡೆಕ್ಟ್ ಅನ್ನು ಪ್ರಚಾರ ಮಾಡಿದ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2 ತಿಂಗಳ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಆಲಿಯಾ

ಎರಡು ತಿಂಗಳ ಹಿಂದಷ್ಟೇ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಏಪ್ರಿಲ್ 14ರಂದು ಕೇವಲ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಎರಡು ತಿಂಗಳ ಬಳಿಕ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಫೂರ್ ಇಬ್ಬರೂ ಖುಷಿ ವಿಷಯ ಹೇಳಿದ್ದು, ಇಬ್ಬರ ಕುಟುಂಬಕ್ಕೂ ಖುಷಿ ಕೊಟ್ಟಿದೆ. ಆಲಿಯಾ ಹಾಗೂ ರಣ್‌ಬೀರ್ ಇಬ್ಬರೂ ಜೊತೆಯಾಗಿ ನಟಿಸಿದ 'ಬ್ರಹ್ಮಾಸ್ತ್ರ ಪಾರ್ಟ್ 1' ಸಿನಿಮಾ ಬಿಡುಗಡೆ ಸಿದ್ಧವಾಗಿದ್ದು, ಪ್ರಚಾರದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ.

More from Filmibeat

English summary
Durex Company Creative Tweet After Alia Bhatt And Ranbir Kapoor Announce Pregnancy, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X