For Quick Alerts
  ALLOW NOTIFICATIONS  
  For Daily Alerts

  ನಟ ಶಾರುಖ್ ಗೆ ED ಶಾಕ್..ರೋಸ್ ವ್ಯಾಲಿ ಗ್ರೂಪ್ ಗೆ ಸೇರಿದ 70.11 ಕೋಟಿ ಮೌಲ್ಯದ ಆಸ್ತಿ ವಶ

  |
  ಶಾರುಖ್ ಆಸ್ತಿಯನ್ನು ಜಪ್ತಿ ಮಾಡಲು ಇಲ್ಲಿದೆ ಕಾರಣ | SRK | Bollywood | Asset | Filmibeat kannada

  ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಒಡೆತನದ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರೋಸ್ ವ್ಯಾಲಿ ಗ್ರೂಪ್ ಗೆ ಸೇರಿದ 70.11 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ರಾಮನಗರ, ಮಹೀಶದಲ್, ಪುರ್ಬಾ ಮುದಿನಿಪುರದಲ್ಲಿ 24 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.

  ಮುಂಬೈನ ದಿಲ್ಕಾಪ್ ಚೇಂಬರ್ಸ್ ನ ಫ್ಲ್ಯಾಟ್ ಗಳು, ವಿಐಪಿ ರಸ್ತೆಯಲ್ಲಿ ಇರುವ ರೋಸ್ ವ್ಯಾಲಿ ಸಮೂಹದ ಹೋಟೆಲ್ ಹೊರತು ಪಡಿಸಿ ಕೋಲ್ಕತಾದ ನ್ಯೂ ಟೌನ್ ಪ್ರದೇಶದಲ್ಲಿ 1 ಎಕರೆ ಭೂಮಿ ಮತ್ತು ರೋಸ್ ವ್ಯಾಲಿ ಸಮೂಹದ 17.520 ಕೋಟಿ ರೂಪಾಯಿ ಮತ್ತು ಶಾರುಖ್ ಒಡೆತನದ ಐಪಿಎಲ್ ಕ್ರಿಕೆಟ್ ಟೀಂ ನೈಟ್ ರೈಡರ್ಸ್ ಗೆ ಸಂಬಂಧಿಸಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.

  'ನಾನು ಮುಸ್ಲಿಂ..ನನ್ನ ಪತ್ನಿ ಹಿಂದೂ..ನನ್ನ ಮಕ್ಕಳು ಹಿಂದೂಸ್ತಾನ್': ಶಾರುಖ್ ಖಾನ್'ನಾನು ಮುಸ್ಲಿಂ..ನನ್ನ ಪತ್ನಿ ಹಿಂದೂ..ನನ್ನ ಮಕ್ಕಳು ಹಿಂದೂಸ್ತಾನ್': ಶಾರುಖ್ ಖಾನ್

  ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ರೋಸ್ ವ್ಯಾಲಿ ಮತ್ತು ನೈಟ್ ರೈಡರ್ಸ್ ಹಾಗೂ ಸಂಬಂಧಿಸಿದ ಸಂಸ್ಥೆಗಳ ಮೇಲೆ ದಾಳಿ ಮಾಡಿ ಆಸ್ತಿ ಜಪ್ತಿ ಮಾಡಲಾಗಿದೆ.

  ರೋಸ್ ವ್ಯಾಲಿ ಹಣಕಾಸು ಹಗರಣವು ಪೂಂಜಿ ಯೋಜನೆಯ ಕುಸಿತದಿಂದ ಉಂಟಾದ ಒಂದು ಪ್ರಮುಖ ಆರ್ಥಿಕ ಹಗರಣವಾಗಿದೆ. ಪಶ್ಚಿಮ ಬಂಗಾಳ, ಆಸ್ಸಾಂ, ಬಿಹಾರ ಸೇರಿದಂತೆ ಭಾರತದಾದ್ಯಂತ ಸಾರ್ವಜನಿಕರಿಂದ 17,520 ಕೋಟಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ. ಸಾರ್ವಜನಿಕರಿಗೆ ಹೆಚ್ಚಿನ ಆದಾಯ ಮತ್ತು ಒಳ್ಳೆಯ ಬಡ್ಡಿ ನೀಡುವ ಸುಳ್ಳು ಭರವಸೆಯ ಆಮಿಷ ಒಡ್ಡಿ ಹಣ ಸಂಗ್ರಹ ಮಾಡಿದೆ. ಇದು ಬೆಳಕಿಗೆ ಬರುತ್ತಿದ್ದಂತೆ 10,850 ಕೋಟಿ ರೂಪಾಯಿ ಮರುಪಾವತಿ ಮಾಡಿದೆ. ಇನ್ನು ಉಳಿದ 6,670 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿರುವುದಾಗಿ ಇಡಿ ಮಾಹಿತಿಯಿಂದ ತಿಳಿದು ಬಂದಿದೆ.

  English summary
  Rose Valley scam: ED attaches 70.11 crore worth assets of St.Xaviers and Shah Rukh Khan's Kolkata knight Riders in Rose Valley scam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X