twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಕೇಸ್‌: ಹೋಟೆಲ್ ಉದ್ಯಮಿ ಗೌರವ್ ಆರ್ಯಗೆ ED ಇಲಾಖೆ ಸಮನ್ಸ್

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾ ಹೋಟೆಲ್ ಉದ್ಯಮಿ ಗೌರವ್ ಆರ್ಯಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

    Recommended Video

    Upendra Reaction On Sandalwood Drug Mafia | Filmibeat Kannada

    ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಆರೋಪವಿದ್ದು, ನಟಿ ರಿಯಾ ಚಕ್ರವರ್ತಿ ಸೇರಿದಂತೆ ಏಳು ಜನರ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಗೌರವ್ ಆರ್ಯಗೆ ಇಡಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ಅಷ್ಟಕ್ಕೂ, ಗೌರವ್ ಆರ್ಯಗೂ ಈ ಕೇಸ್‌ಗೂ ಏನು ಸಂಬಂಧ? ಮುಂದೆ ಓದಿ...

    ಗೋವಾ ಹೋಟೆಲ್ ಉದ್ಯಮಿಗೆ ಇಡಿ ಸಮನ್ಸ್

    ಗೋವಾ ಹೋಟೆಲ್ ಉದ್ಯಮಿಗೆ ಇಡಿ ಸಮನ್ಸ್

    ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂಬೈನ ಇಡಿ ಕಚೇರಿಗೆ ಭೇಟಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಗೋವಾದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಗೌರವ್ ಆರ್ಯಗೆ ಸಮನ್ಸ್ ನೀಡಿದೆ. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿವರಣೆ ಪಡೆಯಲಿದ್ದಾರೆ.

    ತಾಳ್ಮೆ ಕಳೆದುಕೊಂಡ ರಿಯಾ ಚಕ್ರವರ್ತಿ: ಕಾರಿನ ಗ್ಲಾಸ್ ಗೆ ಗುದ್ದಿ ಮಾಧ್ಯಮದ ವಿರುದ್ಧ ಆಕ್ರೋಶತಾಳ್ಮೆ ಕಳೆದುಕೊಂಡ ರಿಯಾ ಚಕ್ರವರ್ತಿ: ಕಾರಿನ ಗ್ಲಾಸ್ ಗೆ ಗುದ್ದಿ ಮಾಧ್ಯಮದ ವಿರುದ್ಧ ಆಕ್ರೋಶ

    ಡ್ರಗ್ಸ್ ಪ್ರಕರಣದಲ್ಲೂ ಗೌರವ್ ಲಿಂಕ್ ಇದೆ

    ಡ್ರಗ್ಸ್ ಪ್ರಕರಣದಲ್ಲೂ ಗೌರವ್ ಲಿಂಕ್ ಇದೆ

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಸಹ ಪ್ರಮುಖ ವಿಷಯವಾಗಿ ಚರ್ಚೆಯಾಗ್ತಿದೆ. ಡ್ರಗ್ಸ್ ಡೀಲರ್‌ಗಳ ಜೊತೆ ರಿಯಾ ಚಕ್ರವರ್ತಿ ಸಂಪರ್ಕ ಹೊಂದಿದ್ದರು. ಮತ್ತು ಸುಶಾಂತ್‌ಗೂ ಡ್ರಗ್ಸ್ ನೀಡುತ್ತಿದ್ದರು ಎಂಬ ಆರೋಪ ಇದೆ. ಡ್ರಗ್ಸ್ ಡೀಲರ್ ಜೊತೆ ರಿಯಾ ವಾಟ್ಸಾಪ್ ಸಂಭಾಷಣೆ ಬಹಿರಂಗವಾಗಿದೆ. ಈ ವೇಳೆ ಗೌರವ್ ಆರ್ಯ ಹೆಸರು ಸಹ ಚರ್ಚೆಯಾಗ್ತಿದೆ. ಈ ಹಿನ್ನೆಲೆಯಲ್ಲೂ ಗೌರವ್ ಈ ಕೇಸ್‌ಗೆ ಸಂಬಂಧಪಟ್ಟಿದ್ದಾರೆ.

    ಸಮನ್ಸ್ ಬಗ್ಗೆ ಗೌರವ್ ಹೇಳಿದ್ದೇನು?

    ಸಮನ್ಸ್ ಬಗ್ಗೆ ಗೌರವ್ ಹೇಳಿದ್ದೇನು?

    ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಇಲಾಖೆ ಸಮನ್ಸ್ ನೀಡಿರುವ ಬಗ್ಗೆ ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ಗೌರವ್ ಆರ್ಯ ''ಈ ಪ್ರಕರಣದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಭೇಟಿಯಾಗಲಿಲ್ಲ. ನಾನು ಅವಳನ್ನು (ರಿಯಾ) 2017 ರಲ್ಲಿ ಭೇಟಿಯಾಗಿದ್ದೆ'' ಎಂದು ತಿಳಿಸಿದ್ದಾರೆ.

    ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ, ಪಾದ ಮುಟ್ಟಿ ನಮಸ್ಕರಿಸಿದ್ದೆ: ರಿಯಾ ಚಕ್ರವರ್ತಿಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ, ಪಾದ ಮುಟ್ಟಿ ನಮಸ್ಕರಿಸಿದ್ದೆ: ರಿಯಾ ಚಕ್ರವರ್ತಿ

    ಎಫ್ ಐ ಆರ್ ದಾಖಲು

    ಎಫ್ ಐ ಆರ್ ದಾಖಲು

    ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆ, 1985ರ ಅಡಿಯಲ್ಲಿ ಗೌರವ್ ಆರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕೇಸ್‌ನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತನಿಖೆ ನಡೆಸುತ್ತಿದೆ. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 20, 22, 27 ಮತ್ತು 29ರ ಅಡಿಯಲ್ಲಿ ರಿಯಾ ಚಕ್ರವರ್ತಿ, ಸಹೋದರ ಶೋಯಿಕ್, ಜಯ ಸಹಾ, ರಜಪೂತ್ ಮಾಜಿ ವ್ಯವಸ್ಥಾಪಕ ಶ್ರುತಿ ಮೋದಿ ಮತ್ತು ಆರ್ಯ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಿತ್ತು.

    English summary
    Sushant case: ED officials have summoned Goa-based hotelier Gaurav Arya in an investigation related to a money laundering case.
    Monday, August 31, 2020, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X