For Quick Alerts
  ALLOW NOTIFICATIONS  
  For Daily Alerts

  JNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತ

  |

  ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲಿಸಿ ಕ್ಯಾಂಪಸ್ ಪ್ರವೇಶ ಮಾಡಿದ ನಂತರ ದೀಪಿಕಾ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದೀಪಿಕಾ ಜೆ ಎನ್ ಯು ಎಂಟ್ರಿ ಪರಿಣಾಮ ಚಪಾಕ್ ಸಿನಿಮಾದ ಮೇಲಾಗಿತ್ತು.

  ಸಿನಿಮಾ ಬಾಯ್ ಕಟ್ ಮಾಡುವಂತೆ ಅನೇಕರು ಟ್ವಿಟ್ಟರ್ ನಲ್ಲಿ ಅಭಿನಯಾನ ಮಾಡುತ್ತಿದ್ದರು. ಈಗ ಸಿನಿಮಾ ಆಯ್ತು, ದೀಪಿಕಾ ಕಾಣಿಸಿಕೊಂಡಿರುವ ಜಾಹೀರಾತುಗಳ ಮೇಲೆ ಪರಿಣಾಮ ಬೀರುತ್ತಿದೆ. ದೀಪಿಕಾ ಸಿನಿಮಾಗಳಿಗಿಂತ ಹೆಚ್ಚಾಗಿ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಜಾಹೀರಾತುಗಳಿಂದ ಅತೀ ಹೆಚ್ಚು ಹಣ ಪಡೆಯುವ ಟಾಪ್ ನಟಿಯರಲ್ಲಿ ದೀಪಿಕಾ ಒಬ್ಬರು. ದೀಪಿಕಾ ಜೊತೆ ಜಾಹೀರಾತು ಕಂಪೆನಿಗಳು ಕೋಟಿ ಕೋಟಿ ಒಪ್ಪಂದ ಮಾಡಿಕೊಂಡಿರುತ್ತಾರೆ. ಜೆ ಎನ್ ಯು ಎಂಟ್ರಿಯಿಂದ ಜಾಹೀರಾತು ಕಂಪೆನಿಗಳು ಎಚ್ಚೆತ್ತುಕೊಳ್ಳುತ್ತಿವೆ ಎಂದು ಹೇಳುತ್ತಿವೆ.

  'ಚಪಾಕ್' ಚಿತ್ರದ 920 ಟಿಕೆಟ್ ಪಡೆದ ಕಾಂಗ್ರೆಸ್ ನಾಯಕ'ಚಪಾಕ್' ಚಿತ್ರದ 920 ಟಿಕೆಟ್ ಪಡೆದ ಕಾಂಗ್ರೆಸ್ ನಾಯಕ

  ಈಗಾಗಲೆ ಟ್ವಿಟ್ಟರ್ ನಲ್ಲಿ ದೀಪಿಕಾ ವಿರುದ್ಧ "ಬಾಯ್ ಕಟ್ ಲಕ್ಸ್" ಅಭಿಯಾನ ಪ್ರಾರಂಭವಾಗಿದೆ. ಹ್ಯಾಶ್ ಟ್ಯಾಕ್ ಹಾಕಿ ಬಾಯ್ ಕಟ್ ಲಕ್ಸ್ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಅಂದ್ಹಾಗೆ ದೀಪಿಕಾ ಕೇವಲ ಲಕ್ಸ್ ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ, ಸಾಕಷ್ಟು ಜಾಹೀರಾತುಗಳಲ್ಲಿ ಮಿಂಚಿದ್ದಾರೆ.

  ಲಕ್ಸ್, ಬ್ರಿಟಾನಿಯಾ ಗುಡ್ ಡೇ, ಆಕ್ಸಿಸ್ ಬ್ಯಾಂಕ್, ತನಿಷ್ಕ್, ಲೋರಿಯಲ್, ವಿಸ್ತಾರ್ ಏರ್ ಲೈನ್ ಸೇರಿದಂತೆ ಸಾಕಷ್ಟು ಬ್ರ್ಯಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಈ ಎಲ್ಲಾ ಬ್ರ್ಯಾಂಡ್ ಗಳ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ದೀಪಿಕಾ ಕಾಣಿಸಿಕೊಂಡಿರುವ ಜಾಹೀರಾತು ಬಿಟ್ಟು ಬೇರೆ ಜಾಹೀರಾತು ಪ್ರಸಾರ ಮಾಡಲು ನಿರ್ಧರಿಸಿವೆಯಂತೆ.

  ರಾಜಕೀಯ ನಿಲುವು ಹೊಂದಿರುವವರ ಜೊತೆ ಮತ್ತು ವಿವಾದಗಳಿರುವರ ಜೊತೆ ಒಪ್ಪಂದ ಮಾಡಿಕೊಳ್ಳಲು ಜಾಹೀರಾತು ಕಂಪೆನಿಗಳು ಹಿಂದೇಟು ಹಾಕುತ್ತವೆ. ಸದ್ಯ ದೀಪಿಕಾ ಅಭಿನಯಿಸುವ ಜಾಹೀರಾತು ಪ್ರದರ್ಶನದ ಮೇಲೆ ಹೊಡೆದ ಬಿದ್ದ ಕಾರಣ ದೀಪಿಕಾ ಬ್ರ್ಯಾಂಡ್ ವ್ಯಾಲ್ಯೂ ಕಡಿಮೆಯಾಗುವ ಸಾಧ್ಯತೆ ಇದೆ.

  English summary
  After Deepika Padukone visited JNU, leading brands have take a step back over Deepika Padukone association with brand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X