For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ದೇಶದವರು ಎಂದು ಭಾರತೀಯಳಿಗೆ ಈಜಿಪ್ಟ್‌ನಲ್ಲಿ ಉಚಿತ ಟಿಕೆಟ್!

  |

  ನಟ ಶಾರುಖ್ ಖಾನ್‌ ಭಾರತದಲ್ಲಿ ಮಾತ್ರ ಅಲ್ಲ. ವಿಶ್ವದಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಇನ್ನು ಅವರ ಸಿನಿಮಾಗಳಿಗೆ ಮಾತ್ರವಲ್ಲ, ಸಿನಿಮಾವನ್ನು ಹೊರತು ಪಡಿಸಿ ಅವರನ್ನು ಇಷ್ಟ ಪಡುವ ಸಾಕಷ್ಟು ಸಹಸ್ರಾರು ಜನರು ಇದ್ದಾರೆ. ಶಾರುಖ್ ಖಾನ್ ಅವರನ್ನು ದೇವರ ರೀತಿಯಲ್ಲಿ ಪೂಜೆ ಮಾಡುವವರು ಕೂಡ ಇದ್ದಾರೆ.

  ಆದರೆ ಶಾರುಖ್ ಖಾನ್‌ ಹೆಸರು ಒಬ್ಬ ಪ್ರಾದ್ಯಾಪಕರಿಗೆ ಸಹಾಯ ಮಾಡಿದೆ. ಈ ಸಮಾಚಾರ ಈಗ ಎಲ್ಲೆಡೆ ವೈರಲ್‌ ಆಗಿದೆ. ಕೇವಲ ಶಾರುಖ್ ಖಾನ್ ಹೆಸರು ಒಬ್ಬರನ್ನು ಕಷ್ಟದ ಪರಿಸ್ಥಿತಿಯಿಂದ ಪಾರು ಮಾಡುತ್ತದೆ ಎಂದರೆ ಊಹಿಸಿ, ಎಷ್ಟರ ಮಟ್ಟಿಗೆ ಆ ಹೆಸರಿಗೆ ಕ್ರೇಜ್ ಇದೆ ಎನ್ನುವುದು.

  ಅಷ್ಟಕ್ಕೂ ಶಾರುಖ್ ಖಾನ್‌ ಅವರ ಹೆಸರು ಹೇಳಿದ್ದು ಇಲ್ಲೆ ಎಲ್ಲೋ ಅಲ್ಲ. ಈಜಿಪ್ಟ್‌ನಲ್ಲಿ. ಹೌದು ಈಜಿಪ್ಟ್‌ನಲ್ಲಿ ಹಣ ಇಲ್ಲದೆ ಪ್ರಯಾಣಿಸಲು ಟಿಕೆಟ್ ಬುಕ್‌ ಮಾಡಲಾಗಿದೆ. ಅದಕ್ಕೆ ಕಾರಣ ಆಗದ್ದು, ಶಾರುಖ್ ಖಾನ್ ಹೆಸರು.

  ಈಜಿಪ್ಟ್‌ನಲ್ಲಿ ಅಭಿಮಾನ ಮೆರೆದ ಶಾರುಖ್ ಖಾನ್‌ ಅಭಿಮಾನಿ!

  ಇಂದು ಶಾರುಖ್ ಖಾನ್‌ ಬಗ್ಗೆ ಸಾಮಾಜಿಕ ಜಾಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ ಅವರ ಹೆಸರೆ ಅಗಿದೆ. ಹೌದು ಅಶ್ವಿನಿ ದೇಶಪಾಂಡೆ ಎನ್ನುವ ದೆಹಲಿ ಮೂಲಕ ಪ್ರಾಧ್ಯಾಪಕರೊಬ್ಬರಿಗೆ ಶಾರುಖ್ ಖಾನ್ ಹೆಸರು ಸಹಾಯ ಮಾಡಿದೆ. ಈಜಿಪ್ಟ್‌ನಲ್ಲಿ ಅವರು ಪ್ರಯಾಣ ಮಾಡುವ ಸಂದರ್ಭದಲ್ಲಿ, ಟಿಕೆಟ್ ಖರೀದಿಗೆ ಹಣ ವರ್ಗಾವಣೆ ಮಾಡಬೇಕಾಗಿತ್ತು. ಆದರೆ ಹಣ ವರ್ಗಾವಣೆ ಆಗಿಲ್ಲವಂತೆ. ಆಗ ಅಲ್ಲಿನ ಏಜೆಂಟ್ ಅವರನ್ನು ಭಾರತೀಯ ಮಹಿಳೆ ಎಂದು ಹೇಳಲಿಲ್ಲವಂತೆ. ಬದಲಿಗೆ "ನೀವೂ ಎಸ್,ಆರ್,ಕೆ (ಶಾರುಖ್ ಖಾನ್) ಇರುವ ದೇಶದವರು ಅಲ್ಲವಾ ನಾನು ನಿಮ್ಮನ್ನು ನಂಬುತ್ತೇನೆ. ಈಗ ನೀವು ಹಣ ಕೊಡಬೇಕಾಗಿಲ್ಲ. ಬಳಿಕ ಹಣ ಪಾವತಿಸಿ ಎಂದು ಹೇಳಿದನಂತೆ".

  ಈ ವಿಚಾರವನ್ನು ಅಶ್ವಿನಿ ದೇಶಪಾಂಡೆ ಎನ್ನುವ ಪ್ರಾಧ್ಯಾಪಕಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ಈ ವಿಚಾರ ಹಂಚಿಕೊಳ್ಳುತ್ತಲೇ, ಶಾರುಖ್ ಖಾನ್ ಅವರ ಅಭಿಮಾನಿಗಳು ಅದನ್ನು ಶೇರ್‌ ಮಾಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  English summary
  You Are From SRK Country: Egyptian Travel Agent Makes Booking For Indian Professor Without Payment, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X