ಬಾಲಿವುಡ್‌ ಅಂಗಳದಲ್ಲಿ ಈದ್ ಸೆಲೆಬ್ರೆಷನ್ : ಸಂಭ್ರಮಿಸಿದವರು ಯಾರು?

ದೇಶಾದ್ಯಂತ ಮಂಗಳವಾರ ಮುಸ್ಲಿಂ ಬಾಂಧವರು ಈದ್ ಮುಬಾರಕ್‌ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಮುಸ್ಲಿಂರಿಗೆ ವರ್ಷದಲ್ಲೇ ಅತಿ ದೊಡ್ಡದಾದ ಹಬ್ಬ ರಂಜಾನ್ ಆಗಿದ್ದು, ಒಂದು ತಿಂಗಳ ಉಪವಾಸ ಮಾಡಿ ಬಹಳ ಕಟ್ಟುನಿಟ್ಟಿನಿಂದ ಈ ಹಬ್ಬ ಆಚರಣೆ ಮಾಡಲಾಗುತ್ತದೆ. ಇನ್ನು ಈ ಹಬ್ವವನ್ನು ಬಾಲಿವುಡ್ ಬಿಗ್ ಸೆಲೆಬ್ರಿಟಿಗಳು ಸೆಲೆಬ್ರೆಟ್ ಮಾಡಿದ್ದು, ತಮ್ಮ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಹಬ್ಬ ಆಚರಣೆ ಮಾಡಿದ್ದಾರೆ.

ನಟ ಸಂಜಯ್ ದತ್ ತಮ್ಮ ಕುಟುಂಬಸ್ಥರೊಂದಿಗೆ ರಂಜಾನ್ ಹಬ್ಬವನ್ನ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ನಿ, ಮಕ್ಕಳ ಜೊತೆ ಇರುವ ಪೋಟೋ ಶೇರ್‌ ಮಾಡಿಕೊಂಡಿರುವ ಸಂಜಯ್ ದತ್, ಎಲ್ಲರಿಗೂ ಈದ್ ಹಾಗೂ ಅಕ್ಷಯ ತೃತಿಯ ಹಬ್ಬದ ಶುಭಶಯಗಳು. ಈ ಹಬ್ಬ ಎಲ್ಲರಲ್ಲೂ ಶಾಂತಿಯನ್ನು ತರಲಿ, ಎಲ್ಲರೂ ಆರೋಗ್ಯವಂತರಾಗಿರಿ ಎಂದು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನು ನಟಿ ಶಿಲ್ಪಾ ಶೆಟ್ಟಿ ಕೂಡ ಹಬ್ಬಕ್ಕೆ ವಿಶೇಷ ವಿಡಿಯೋ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ನಿಮಗೂ ಮತ್ತು ನಿಮ್ಮ ಕುಟುಂಬಸ್ಥರಿಗೂ ಈದ್ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

Eid Mubarak 2022 : Salman Khan, SRK, Amitabh Bachchan and Other Celebrated Eid Festival

ನಟ ಅಕ್ಷಯ್ ಕುಮಾರ್‌ ಕೂಡ ರಂಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಟ್ವೀಟರ್‌ನಲ್ಲಿ ಎಲ್ಲರಿಗೂ ಈದ್ ಮುಬಾರಕ್‌ ಹಬ್ಬದ ಶುಭಾಶಯಗಳು. ಈ ದಿನ ಪ್ರತಿಯೊಬ್ಬರ ಬಾಳಲ್ಲೂ ಸಂತೋಷವನ್ನು ತರಲಿ ಎಂದು ಹಾರೈಸಿದ್ದಾರೆ.

ಇನ್ನು ನಟ ಅಜಯ್ ದೇವಗನ್ ಕೂಡ ಈದ್ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಎಲ್ಲರಿಗೂ ಈದ್‌ ಹಬ್ಬದ ಶುಭಾಶಯ. ಈ ಹಬ್ಬ ಎಲ್ಲರಿಗೂ ಶಾಂತಿ, ಪ್ರೀತಿ ಸಂತೋಷ ಮತ್ತು ಸಮೃದ್ದಿಯನ್ನು ತರಲಿ ಎಂದು ಹೇಳಿದ್ದಾರೆ.

ಬಾಲಿವುಡ್ ಬೆಡಗಿ ಕರಿನಾ ಕಪೂರ್‌ ಪತಿ ಸೈಫ್ ಆಲಿ ಖಾನ್, ಸೋಹಾ ಆಲಿ ಖಾನ್ ಮತ್ತು ಕುನಾಲ್‌ ಕೆಮ್ಮು ಅವರೊಂದಿಗೆ ಹಬ್ಬ ಆಚರಣೆ ಮಾಡಿದ್ದು, ನೆಚ್ಚಿನ ಅಭಿಮಾನಿಗಳಿಗೆ ಈದ್ ಶುಭಾಶಯ ಕೋರಿದ್ದಾರೆ.

ನಟ ಸಲ್ಮಾನ್ ಖಾನ್ ಕೂಡ ಈದ್ ಹಬ್ಬವನ್ನ ಈ ಬಾರಿ ವಿಶೇಷವಾಗಿ ಆಚರಣೆ ಮಾಡಿದ್ದು, ಅಭಿಮಾನಿಗಳ ಜೊತೆ ಹಬ್ಬ ಆಚರಿಸಿಕೊಂಡಿದ್ದು, ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ಶುಭಾಶಯ ತಿಳಿಸುತ್ತಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ದೇಶದ ಜನತೆಗೆ ಈದ್‌ ಹಬ್ಬದ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

Eid Mubarak 2022 : Salman Khan, SRK, Amitabh Bachchan and Other Celebrated Eid Festival

ಇನ್ನು ನಟ ಶಾರುಖ್‌ ಖಾನ್ ಕೂಡ ಅಭಿಮಾನಿಗಳ ಜೊತೆ ಈದ್ ಹಬ್ಬ ಆಚರಣೆ ಮಾಡಿದ್ದಾರೆ. ಮನ್ನತ್‌ನಲ್ಲಿರುವ ತಮ್ಮ ನಿವಾಸದ ಬಳಿ ಆಗಮಿಸಿದ್ದ ನೂರಾರು ಅಭಿಮಾನಿಗಳ ಜೊತೆ ಪೋಟೋ ತೆಗೆಸಿಕೊಂಡು ಹಬ್ಬದ ಶುಭಾಶಯ ಕೋರಿದ್ದಾರೆ.

ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್‌ ಬಚ್ಚನ್ ಈದ್ ಹಬ್ಬವನ್ನ ತಮ್ಮ ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದಾರೆ. ಹಾಗೂ ದೇಶದ ಸಮಸ್ತ ಜನತೆಗೆ ಈದ್ ಹಬ್ಬದ ಶುಭಾಶಯ ಎಂದು ತಿಳಿಸಿದ್ದಾರೆ.

ಒಟ್ಟಾರೆ ಬಾಲಿವುಡ್ ಮಂದಿ ಈ ಬಾರಿ ಪವಿತ್ರ ರಂಜಾನ್‌ ಹಬ್ಬವನ್ನು ಬಹಳ ಸಂಭ್ರಮ, ಸಡಗರದಿಂದ ಆಚರಣೆ ಮಾಡಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಈ ಬಾರಿಯ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಹಿಂದೂ ಮುಸ್ಲಿಂ ಎಂಬ ಬೇದವಿಲ್ಲದೆ ಎಲ್ಲರೂ ಒಟ್ಟಗಿ ರಂಜಾನ್‌ ಹಬ್ಬವನ್ನು ಆಚರಣೆ ಮಾಡಲಾಗಿದೆ. ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಬಾಲಿವುಡ್‌ನ ಬೇರೆ ನಟಕರು ಕೂಡ ಈದ್‌ ಹಬ್ಬಕ್ಕೆ ಶುಭಾಶಯ ತಿಳಿಸುವ ಮೂಲಕ ಭಾವಕೈತ್ಯೆ ಮೆರೆದಿದ್ದಾರೆ.

More from Filmibeat

English summary
Muslim community during Ramzan has come to an end and Eid-ul-Fitr is set to be celebrated across the country on Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X