For Quick Alerts
  ALLOW NOTIFICATIONS  
  For Daily Alerts

  ಶಾಹಿದ್ ಕಪೂರ್ ಹೊಸ ಸಿನಿಮಾ: ಸಂಭಾವನೆಯಲ್ಲಿ 8 ಕೋಟಿ ಕಟ್!

  |

  ಬಾಲಿವುಡ್ ನಟ ಶಾಹಿದ್ ಕಪೂರ್ ದಕ್ಷಿಣ ಭಾರತದ ಸಿನಿಮಾ ಒಂದರ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

  ತೆಲುಗಿನ ಅರ್ಜುನ್ ರೆಡ್ಡಿ ಯನ್ನು 'ಕಬೀರ್ ಸಿಂಗ್' ಹೆಸರಿಗೆ ರೀಮೇಕ್ ಮಾಡಿ ಕೋಟಿ-ಕೋಟಿ ಬಾಚಿದ್ದ ಶಾಹಿದ್ ಕಪೂರ್ ಈಗ ಮತ್ತೆ ತೆಲುಗಿನ ಮತ್ತೊಂದು ಹಿಟ್ ಸಿನಿಮಾದ ಮೇಲೆ ಕಣ್ಣು ಹಾಕಿದ್ದಾರೆ.

  ಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನ

  ನಾನಿ, ಕನ್ನಡತಿ ಶ್ರದ್ಧಾ ಶ್ರೀನಾಥ್ ನಟಿಸಿದ್ದ 'ಜೆರ್ಸಿ' ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದ್ದು, ಶಾಹಿದ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾಕ್ಕೆ ಶಾಹಿದ್ ಪಡೆಯುತ್ತಿರುವ ಒಟ್ಟು ಸಂಭಾವನೆಯಲ್ಲಿ ಬರೋಬ್ಬರಿ ಎಂಟು ಕೋಟಿ ಕಡಿತ ಮಾಡಲಾಗಿದೆ.

  35 ಕೋಟಿ ಸಂಭಾವನೆ ಪಡೆಯಲಿದ್ದ ಶಾಹಿದ್

  35 ಕೋಟಿ ಸಂಭಾವನೆ ಪಡೆಯಲಿದ್ದ ಶಾಹಿದ್

  ಹೌದು, ಈ ಸಿನಿಮಾಕ್ಕೆ ಶಾಹಿದ್ ಕಪೂರ್ ಬರೋಬ್ಬರಿ 35 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಜೊತೆಗೆ ಲಾಭದಲ್ಲಿ ಪಾಲು ಸಹ ಪಡೆಯುವವರಿದ್ದರು. ಆದರೆ ಈಗ ಶಾಹಿದ್ ಸಂಭಾವನೆಯಲ್ಲಿ ಎಂಟು ಕೋಟಿ ಕಡಿತ ಮಾಡಲಾಗಿದೆ.

  ಬೇಗನೆ ಚಿತ್ರೀಕರಣ ಬೇಡ ಎನ್ನುತ್ತಿರುವ ಶಾಹಿದ್!

  ಬೇಗನೆ ಚಿತ್ರೀಕರಣ ಬೇಡ ಎನ್ನುತ್ತಿರುವ ಶಾಹಿದ್!

  ಕೊರೊನಾ ಕಾರಣಕ್ಕೆ ಎಲ್ಲಾ ನಟರು ಡಬಲ್ ಶಿಫ್ಟ್ ಅನ್ನು ನೀಡಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಶಾಹಿದ್ ಇನ್ನೂ ಕೆಲವು ದಿನ ಚಿತ್ರೀಕರಣ ಪ್ರಾರಂಭ ಮಾಡುವುದು ಬೇಡ ಎನ್ನುತ್ತಿದ್ದಾರಂತೆ. ಅಲ್ಲದೆ ಡಬಲ್ ಶಿಫ್ಟ್‌ಗೆ ಸಹ ಒಪ್ಪುತ್ತಿಲ್ಲವಂತೆ.

  ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ: ನಾಯಕ ಇವರೆಬಾಲಿವುಡ್ ಗೆ ರಿಮೇಕ್ ಆಗ್ತಿದೆ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ: ನಾಯಕ ಇವರೆ

  ಸಿನಿಮಾ ನಿಧಾನಕ್ಕೆ ಪ್ರಾರಂಭಿಸಿ: ಶಾಹಿದ್ ಸಲಹೆ

  ಸಿನಿಮಾ ನಿಧಾನಕ್ಕೆ ಪ್ರಾರಂಭಿಸಿ: ಶಾಹಿದ್ ಸಲಹೆ

  ಹಾಗಾಗಿ ಅವರ ಸಂಭಾವನೆಯಲ್ಲಿ ಎಂಟು ಕೋಟಿ ಕಟ್ ಮಾಡಲಾಗಿದೆ. ಸಂಭಾವನೆಯಲ್ಲಿ ಕಡಿತ ಮಾಡುವ ಸಲಹೆಯನ್ನು ಸ್ವತಃ ಶಾಹಿದ್ ಅವರೇ ನಿರ್ಮಾಪಕರಿಗೆ ಕೊಟ್ಟಿದ್ದಾರಂತೆ. 'ಸಿನಿಮಾವನ್ನು ನಿಧಾನಕ್ಕೆ ಪ್ರಾರಂಭಿಸಿ ಆತುರ ಬೇಡ, ನನ್ನ ಸಂಭಾವನೆಯನ್ನು ಕಡಿತ ಮಾಡಿಕೊಳ್ಳಿ' ಎಂದಿದ್ದಾರಂತೆ ಶಾಹಿದ್.

  ರೋಹಿತ್ ಶರ್ಮಾ ಕೋಚ್ ರಿಂದ ಶಾಹಿದ್‌ಗೆ ತರಬೇತಿ

  ರೋಹಿತ್ ಶರ್ಮಾ ಕೋಚ್ ರಿಂದ ಶಾಹಿದ್‌ಗೆ ತರಬೇತಿ

  ಶಾಹಿದ್ ಕಪೂರ್ ನಟಿಸುತ್ತಿರುವ ಈ ತೆಲುಗು ರೀಮೇಕ್‌ ಗೆ 'ಜರ್ಸಿ' ಎಂದೇ ಹೆಸರಿಡಲಾಗಿದೆ. ಕ್ರಿಕೆಟ್ ಆಟದ ಕುರಿತಾದ ಕತೆ ಹೊಂದಿರುವ ಈ ಸಿನಿಮಾದಲ್ಲಿ ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ ಕ್ರಿಕೆಟ್ ಕೊಚ್ ಅವರಿಂದ ಶಾಹಿದ್ ಗೆ ಕ್ರಿಕೆಟ್ ತರಬೇತಿ ಕೊಡಿಸಲಾಗಿದೆಯಂತೆ.

  ಮೊದಲ ಪತಿಯಿಂದ ದೂರ ಆಗಲು ಬಯಸಿರಲಿಲ್ಲ: 3 ಮದುವೆಯಾದ ಶಾಹಿದ್ ಕಪೂರ್ ತಾಯಿಯ ಮಾತುಮೊದಲ ಪತಿಯಿಂದ ದೂರ ಆಗಲು ಬಯಸಿರಲಿಲ್ಲ: 3 ಮದುವೆಯಾದ ಶಾಹಿದ್ ಕಪೂರ್ ತಾಯಿಯ ಮಾತು

  English summary
  Eight crore rs cut in Shahid Kapoor's remuneration for his upcoming movie which is remake of Telugu movie Jersey.
  Tuesday, October 6, 2020, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X