ಪಾತ್ರಕ್ಕಾಗಿ ಪಲ್ಲಂಗ ; ಇದು ಕೇವಲ ಚಿತ್ರರಂಗದ ಸಮಸ್ಯೆಯಲ್ಲ ಎಂದ ಏಕ್ತಾ ಕಪೂರ್..!

ಮಲಯಾಳಂ ಚಿತ್ರರಂಗದಲ್ಲಿ ಎದ್ದಿರುವ ಲೈಂಗಿಕ ದೌರ್ಜನ್ಯದ ಅಲೆ, ಚಿತ್ರರಂಗದಲ್ಲಿ ಅನೇಕರ ನಿದ್ದೆಯನ್ನು ಕೆಡಿಸಿದೆ. ಯಾವ ಕ್ಷಣದಲ್ಲಾದರೂ.. ಎಲ್ಲಿಂದಾದರೂ ಬಂದು.. ಯಾರಾದರೂ ತಮ್ಮ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಬಹುದು ಎನ್ನುವ ಭಯ ಅನೇಕರನ್ನು ಕಾಡುತ್ತಿದೆ. ಎಲ್ಲ ಭಾಷೆಯಲ್ಲಿಯೂ ಹೇಮಾ ಆಯೋಗದಂತೆ ಸಮಿತಿ ರಚನೆಯಾಗಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಮಲಯಾಳಂ ಸ್ಟಾರ್ ನಿವಿನ್ ಪೌಲಿಯ ವಿರುದ್ಧ ಕೂಡ ಪ್ರಕರಣ ದಾಖಲಾಗಿರುವುದರಿಂದ ಅಭಿಯಾನ ಮತ್ತೊಮ್ಮೆ ದಾರಿ ತಪ್ಪುವ ಎಲ್ಲ ಲಕ್ಷಣ ಕಂಡು ಬರುತ್ತಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಬಾಲಿವುಡ್‌ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಈ ಕುರಿತು ಮಾತನಾಡಿದ್ದಾರೆ.

ಹೌದು, ಕರೀನಾ ಕಪೂರ್ ಅಭಿನಯದಲ್ಲಿ ತಮ್ಮ ನಿರ್ಮಾಣದಡಿ ಸಿದ್ಧವಾಗಿರುವ 'ದಿ ಬಕ್ಕಿಂಗ್ ಹ್ಯಾಮ್ ಮರ್ಡರ್ಸ್' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಏಕ್ತಾ ಕಪೂರ್, ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ, ಕೇವಲ ಚಿತ್ರರಂಗದ ಸಮಸ್ಯೆಯಲ್ಲ ಎಂದಿದ್ದಾರೆ. ಎಲ್ಲೆಡೆ ಕಾಲ ಕಾಲಕ್ಕೆ ಈ ಸಮಸ್ಯೆಯನ್ನು ಮಹಿಳೆಯರು ಎದುರಿಸುತ್ತಾನೇ ಬಂದಿದ್ದಾರೆ ಎಂದಿದ್ದಾರೆ.

Ekta Kapoor addresses women s safety and the Kerala MeToo controversy

ಮಹಿಳೆಯರ ಸುರಕ್ಷತೆ ಕೇವಲ ಚಿತ್ರರಂಗದ ಸಮಸ್ಯೆ ಅಲ್ಲ, ಇಂತಹ ಘಟನೆಗಳು ಯಾವ ಕ್ಷೇತ್ರದಲ್ಲಿಯೂ ನಡೆಯಬಾರದು ಎಂದಿರುವ ಏಕ್ತಾ ಕಪೂರ್, ಕಂಪನಿಗಳಲ್ಲಿ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿ ಮಹಿಳೆಯರು ಇರಬೇಕು ಎಂದಿದ್ದಾರೆ. ಮಹಿಳೆಯರು ಇದಕ್ಕೆ ಮುನ್ನುಡಿ ಬರೆಯಬೇಕು ಅಂದಿದ್ದಾರೆ.

ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕಿದೆ ಎಂದಿರುವ ಏಕ್ತಾ ಕಪೂರ್ ಮಹಿಳೆಯರು ವೃತ್ತಿಪರ ಕೆಲಸದಲ್ಲಿ ನಾಯಕತ್ವದ ಗುಣವನ್ನು ಪ್ರದರ್ಶಿಸಬೇಕಿದೆ ಎಂದಿದ್ದಾರೆ. ಇದು ಈಗ ಆರಂಭವಾಗಿದೆ ಸಾಗಬೇಕಾದ ದಾರಿ ಇನ್ನೂ ತುಂಬಾ ದೊಡ್ಡದಿದೆ ಎಂದು ಹೇಳಿದ್ದಾರೆ.

Ekta Kapoor addresses women s safety and the Kerala MeToo controversy

ಮುಂದುವರೆದು ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ, ಇಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚೆಚ್ಚು ಜವಾಬ್ಧಾರಿಯನ್ನು ವಹಿಸಿಕೊಳ್ಳುತ್ತಿರುವುದರಿಂದ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಯಾಗುತ್ತಿದೆ ಎಂದಿರುವ ಏಕ್ತಾ ಕಪೂರ್, ಹೆಣ್ಣಿನ ಸುರಕ್ಷತೆ ಗಂಡಸರ ಜವಾಬ್ಧಾರಿ ಕೂಡ ಹೌದು ಎಂದಿದ್ದಾರೆ. ಯಾವುದೇ ಕ್ಷೇತ್ರ ಇರಲಿ ಅಲ್ಲಿ ಸುರಕ್ಷತೆ ಮತ್ತು ಸಮಾನತೆಯನ್ನು ಪುರುಷರು ಖಾತ್ರಿ ಮಾಡಬೇಕು ಎಂದು ಹೇಳಿದ್ದಾರೆ.

ಅಂದ್ಹಾಗೇ 'ದಿ ಬಕ್ಕಿಂಗ್ ಹ್ಯಾಮ್ ಮರ್ಡರ್ಸ್' ಚಿತ್ರಕ್ಕೆ ಏಕ್ತಾ ಕಪೂರ್ ಜೊತೆ ಕರೀನಾ ಕಪೂರ್ ಖಾನ್ ಕೂಡ ಬಂಡವಾಳ ಹೂಡಿದ್ದಾರೆ. ಮಹಿಳಾ ಅಧಿಕಾರಿಯ ಸುತ್ತ ಸುತ್ತುವ ಈ ಚಿತ್ರವನ್ನು ಸ್ಕ್ಯಾಮ್ 1992, ದಿ ತೆಲಗಿ ಸ್ಟೋರಿ ಅಂತಹ ವೆಬ್ ಸರಣಿಯ ರೂವಾರಿ ಹನ್ಸಲ್ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ. ಟ್ರೇಲರ್ ಭರವಸೆಯನ್ನು ಮೂಡಿಸಿದೆ. ಎಲ್ಲವೂ ಅಂದುಕೊಂಡತೆ ಆದರೆ 'ದಿ ಬಕ್ಕಿಂಗ್ ಹ್ಯಾಮ್ ಮರ್ಡರ್ಸ್' ಚಿತ್ರ ಸೆಪ್ಟೆಂಬರ್ ಹದಿಮೂರರಂದು ತೆರೆಗೆ ಬರಲಿದೆ.

More from Filmibeat

Read more about: casting couch malayalam bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X