For Quick Alerts
  ALLOW NOTIFICATIONS  
  For Daily Alerts

  ಹಿಟ್ ಚಿತ್ರ ಕೊಟ್ಟ ನಿರ್ದೇಶಕನಿಗೆ ಲಕ್ಷುರಿ ಕಾರ್ ಗಿಫ್ಟ್ ಮಾಡಿದ ನಿರ್ಮಾಪಕಿ.!

  |

  ಸಿಕ್ರೆ ಇಂತಹ ನಿರ್ಮಾಪಕರು ಸಿಗಬೇಕು ನೋಡಿ.! ಸಿನಿಮಾ ಬಿಡುಗಡೆ ಆಗಿ ಒಳ್ಳೆ ಕಲೆಕ್ಷನ್ ಮಾಡ್ತಿದ್ರೆ, ಎಲ್ಲವನ್ನೂ ಜೇಬಿಗೆ ತುಂಬಿಸಿಕೊಂಡು ತಮ್ಮ ಪಾಡಿಗೆ ತಾವಿರುವ ಹಲವು ನಿರ್ಮಾಪಕರು ಇದ್ದಾರೆ. ಅಂಥವರ ಮಧ್ಯೆ ನಿರ್ಮಾಪಕಿ ಏಕ್ತಾ ಕಪೂರ್ ವಿಭಿನ್ನವಾಗಿ ನಿಲ್ಲುತ್ತಾರೆ.

  ಸಿನಿಮಾ, ಸೀರಿಯಲ್, ವೆಬ್ ಸೀರೀಸ್.. ಹೀಗೆ ಪ್ರತಿಯೊಂದರಲ್ಲೂ ಏಕ್ತಾ ಕಪೂರ್ ಯಶಸ್ಸು ಕಂಡಿದ್ದಾರೆ. ಉತ್ತಮ ಕಲಾವಿದರಿಗೆ ಮಣೆ ಹಾಕಿದ್ದಾರೆ. ಪ್ರತಿಭಾವಂತರಿಗೆ ಬೆನ್ನೆಲುಬಾಗಿ ನಿಲ್ಲುವ ಏಕ್ತಾ ಕಪೂರ್ ಇದೀಗ ನಿರ್ದೇಶಕರೊಬ್ಬರಿಗೆ ದುಬಾರಿ ಕಾರ್ ನ ಉಡುಗೊರೆಯಾಗಿ ಕೊಟ್ಟಿದ್ದಾರೆ.

  ಹೌದು, ಏಕ್ತಾ ಕಪೂರ್ ನಿರ್ಮಾಣದ 'ಡ್ರೀಮ್ ಗರ್ಲ್' ಚಿತ್ರ ಸೂಪರ್ ಹಿಟ್ ಆಗಿದೆ. ರಾಜ್ ಶಾಂಡಿಲ್ಯಾ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಅಭಿನಯಿಸಿದ್ದರು. ಕೇವಲ 30 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 200 ಕೋಟಿ ಕಲೆಕ್ಷನ್ ಮಾಡಿದೆ.

  ಇದರಿಂದ ಸಿಕ್ಕಾಪಟ್ಟೆ ಖುಷಿ ಆಗಿರುವ ಏಕ್ತಾ ಕಪೂರ್, ಸಿನಿಮಾ ಸಕ್ಸಸ್ ಗೆ ಕಾರಣವಾಗಿರುವ ನಿರ್ದೇಶಕ ರಾಜ್ ಶಾಂಡಿಲ್ಯಾಗೆ ಲುಕ್ಷುರಿ ಕಾರೊಂದನ್ನ ಗಿಫ್ಟ್ ಮಾಡಿದ್ದಾರೆ.

  90 ಲಕ್ಷ ರೂಪಾಯಿ ಮೌಲ್ಯದ ಕೆಂಪು ಬಣ್ಣದ ಜಾಗ್ವಾರ್ ಎಫ್ ಪೇಸ್ ಕಾರ್ ನ ನಿರ್ದೇಶಕ ರಾಜ್ ಶಾಂಡಿಲ್ಯಾಗೆ ಏಕ್ತಾ ಕಪೂರ್ ನೀಡಿದ್ದಾರೆ. ಏಕ್ತಾ ಕಪೂರ್ ಉದಾರ ಮನೋಭಾವಕ್ಕೆ ನಿರ್ದೇಶಕ ರಾಜ್ ಶಾಂಡಿಲ್ಯಾ ಧನ್ಯವಾದ ತಿಳಿಸಿದ್ದಾರೆ.

  ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲ್ಮ್ಸ್ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ 'ಡ್ರೀಮ್ ಗರ್ಲ್'. ಈ ಹಿಂದೆ ಏಕ್ತಾ ಕಪೂರ್ ನಿರ್ಮಾಣದ 'ಏಕ್ ವಿಲನ್' 100 ಕೋಟಿ ಕಲೆಕ್ಷನ್ ಮಾಡಿತ್ತು. ಆಗಲೂ 'ಏಕ್ ವಿಲನ್' ನಿರ್ದೇಶಕ ಮೋಹಿತ್ ಸೂರಿಗೆ ಏಕ್ತಾ ಕಪೂರ್ ಲಕ್ಷುರಿ ಕಾರ್ ವೊಂದನ್ನ ಉಡುಗೊರೆ ರೂಪದಲ್ಲಿ ನೀಡಿದ್ದರು. ಈಗಲೂ ಅದೇ ರಿಪೀಟ್ ಆಗಿದೆ.

  ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ರಾಜ್ ಶಾಂಡಿಲ್ಯಾಗೆ ಏಕ್ತಾ ಕಪೂರ್ ಬಿಗ್ ಸರ್ಪೈಸ್ ನೀಡಿದ್ದಾರೆ. ಸಾಲದಕ್ಕೆ, ರಾಜ್ ಶಾಂಡಿಲ್ಯಾ ಜೊತೆಗೆ ಎರಡನೇ ಪ್ರಾಜೆಕ್ಟ್ ಗೆ ಏಕ್ತಾ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  English summary
  Ekta Kapoor gifts a luxury car to Dream Girl Movie director Raaj Shaandilyaa.
  Thursday, December 26, 2019, 8:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X