ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಜೊತೆ ಎಂಜಾಯ್ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ-ವಿಡಿಯೋ ವೈರಲ್..!
ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮತ್ತೊಂದು ಉದಾಹರಣೆ.
ಹೌದು, ನಿಮಗೆ ಗೊತ್ತು .. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ನತಾಶ ಸದ್ಯಕ್ಕೆ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಓಟಿಟಿ ವಿನ್ನರ್ ಎಲ್ವಿಶ್ ಯಾದವ್ ಜೊತೆ ಓಡಾಡುತ್ತಿದ್ದಾರೆ. ಇದು, ಸದ್ಯ ಹಲವು ಪ್ರಶ್ನೆಯನ್ನು ಹುಟ್ಟು ಹಾಕಿದೆ. ನತಾಶ ಮತ್ತು ಎಲ್ವಿಶ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈನ ಹೋಟೆಲ್‌ವೊಂದಕ್ಕೆ ಎಲ್ವಿಶ್ ಮತ್ತು ನತಾಶಾ ಜೊತೆ ಜೊತೆಯಾಗಿ ಬಂದಿದ್ದಾರೆ. ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆದರೆ.. ಅಲ್ಲಿ ಪಾಪರಾಜಿಗಳು ಬಿಡಾರ ಹೂಡಿದ ವಿಚಾರ ಬಹುಶಃ ಇಬ್ಬರಿಗೂ ಗೊತ್ತಿರಲಿಲ್ಲ. ಈ ಕಾರಣಕ್ಕೆ ಮುಜುಗರಕ್ಕೀಡಾದಂತೆ ನತಾಶ ಹಿಂಜರಿಕೆಯಿಂದಲೇ, ಹೋಟೆಲ್ ಒಳಗೆ ತೆರಳಿದ್ದಾರೆ. ಇನ್ನೂ ಕಾರಿಂದ ಇಳಿದ ತಕ್ಷಣ ನತಾಶ ಕೂಡ ಇಳಿದಿದ್ದಾರಾ ತಮ್ಮ ಹಿಂದೆ ಬರುತ್ತಿದ್ದಾರಾ ಅನ್ನುವುದನ್ನು ಎಲ್ವಿಶ್ ಖಾತ್ರಿ ಮಾಡಿಕೊಂಡು ಆ ನಂತರ ಮುಂದೆ ತೆರಳಿದ್ದಾರೆ.
ಸದ್ಯ ನತಾಶ ಮತ್ತು ಎಲ್ವಿಶ್ ಯಾದವ್ ಅವರ ಈ ವಿಡಿಯೋ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಹತ್ತು ಹಲವು ಅಭಿಪ್ರಾಯಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ವರ್ಲ್ಡ್ ಕಪ್ ವಿನ್ನರ್ ದಿಂದ ಬಿಗ್ ಬಾಸ್ ಓಟಿಟಿ ವಿನ್ನರ್‌ವರೆಗೆ ನತಾಶಾ ಬದುಕು ಸಾಗಿ ಬಂದಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹೇಳಿ ಮಾಡಿಸಿದ ಜೋಡಿಯೆನ್ನುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಂದ ದೂರವಾದ ನಂತರ ಎಲ್ವಿಶ್ ಯಾದವ್ ನಂತಹ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಜೊತೆ ನತಾಶ ಸ್ನೇಹ ಬೆಳೆಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಪರ ವಹಿಸಿಕೊಂಡು ನತಾಶ ಅವರನ್ನು ಇನ್ನೂ ಕೆಲವರು ನಿಂದಿಸುತ್ತಿದ್ದಾರೆ. ಏನ್ ಕರ್ಮ ಗುರು ಇದು ನಮಗೆ, ಇನ್ನೂ ಈ ಕಣ್ಣಲ್ಲಿ ಏನೇನು ನೋಡಬೇಕೋ ಎನ್ನುತ್ತಿದ್ದಾರೆ.
ಕೇವಲ ಇದೊಂದೇ ವಿಡಿಯೋ ಅಲ್ಲ ಎಲ್ವಿಶ್ ಯಾದವ್ ಜೊತೆ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕುತ್ತಿರುವ ಇನ್ನೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿಗಳನ್ನು ಕೆರಳಿಸುತ್ತಿದೆ. ಇದರ ನಡುವೆ ಕೆಲವರು ಎಲ್ವಿಶ್ ಯಾದವ್ ಮತ್ತು ನತಾಶಾ ಆಲ್ಬಂ ಹಾಡೊಂದನ್ನು ಮಾಡಿದ್ದು ಆ ಹಾಡಿನ ಪ್ರಚಾರಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲ ಕೆಲಸದ ಪ್ರಯುಕ್ತ ನಡೆಯುತ್ತಿರುವ ಮಾತು ಕಥೆ ಮತ್ತು ಭೇಟಿ, ಸುಖಾ ಸುಮ್ಮನೆ ರೆಕ್ಕೆ ಪುಕ್ಕ ಕಟ್ಟಬೇಡಿ ಎನ್ನುತ್ತಿದ್ದಾರೆ.


Click it and Unblock the Notifications











