ಆ ವ್ಯಕ್ತಿಯಿಂದ ನಾನು ಅನುಭವಿಸಿದ್ದು ಅಕ್ಷರಶಃ ನರಕಯಾತನೆ ಎಂದು ಬಿಕ್ಕಿ ಬಿಕ್ಕಿ ಅತ್ತ ನಟಿ..!
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗದ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ಇದಕ್ಕೆ ಕೈಗನ್ನಡಿ ಎಂಬಂತೆ ನೀಲಂ ಕೊಠಾರಿ ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ನೆನೆದು ಬಿಕ್ಕಿದ್ದಾರೆ.
ಹೌದು, ನೀಲಂ ಕೊಠಾರಿ ..ಒಂದ್ಕಾಲದ ಸ್ಟಾರ್ ಹೀರೋಯಿನ್. ಗೋವಿಂದ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಅವರ ಜೊತೆ ಹದಿನಾಲ್ಕು ಚಿತ್ರಗಳನ್ನು ಮಾಡಿರುವ ಹೆಗ್ಗಳಿಕೆ ಇವರದ್ದು. ಇನ್ನೂ.. ಸದ್ಯ ಸಲ್ಮಾನ್ ಖಾನ್ ಜೀವಕ್ಕೆ ಕುತ್ತು ತಂದಿರುವ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನೀಲಂ ಹೆಸರು ಕೂಡ ಕೇಳಿ ಬಂದಿತ್ತು. ಪ್ರಕರಣ ಕೂಡ ದಾಖಲಾಗಿ ಹತ್ತು ವರ್ಷ ನೀಲಂ ನೆಮ್ಮದಿಗೆ ಕೊಳ್ಳಿ ಕೂಡ ಬಿದ್ದಿತ್ತು.

ಇಂಥಾ ನೀಲಂ ತಮ್ಮ ಮೊದಲನೇ ಮದ್ವೆಯಿಂದ ತಾವು ಅನುಭವಿಸಿದ ನರಕಯಾತನೆಯನ್ನು ನೆನೆದಿದ್ದಾರೆ. ಮೊದಲನೇ ಗಂಡ ನೀಡಿದ ಮಾನಸಿಕ ಕಿರುಕುಳದಿಂದ ಬೇಸತ್ತು ಅನೇಕ ಬಾರಿ ಕಣ್ಣೀರು ಹಾಕಿದ್ದಾಗಿ ಹೇಳಿದ್ದಾರೆ.
ಹೌದು, ನೆಟ್‌ಫ್ಲಿಕ್ಸ್ ನ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ನೀಲಂ, 2000ನೇ ಇಸ್ವಿಯಲ್ಲಿ ಯುಕೆ ಮೂಲದ ಉದ್ಯಮಿ ರಿಶಿ ಸೇಥಿ ಅವರನ್ನು ಮದುವೆಯಾದ ನಂತರ ನಾನು ಇಲ್ಲಿಂದ ಆ ದೇಶಕ್ಕೆ ಸ್ಥಳಾಂತರವಾಗಬೇಕಾಯ್ತು, ಕಷ್ಟವಾದರೂ ನಾನು ಒಪ್ಪಿಕೊಂಡು ಅಲ್ಲಿ ಹೋದೆ ಆದರೆ ಅಲ್ಲಿ ನನಗೆ ಸಾಂಪ್ರದಾಯಿಕ ಉಡುಗೆಗಳನ್ನೇ ಧರಿಸುವಂತೆ ಒತ್ತಾಯ ಮಾಡಲಾಯಿತು ಎಂದಿದ್ದಾರೆ.ಇನ್ನೂ ಮಾಂಸಾಹಾರವನ್ನು ಕೂಡ ಸಂಪೂರ್ಣವಾಗಿ ತ್ಯಜಿಸುವಂತೆ ಒತ್ತಡ ಹಾಕಿದರು ಜೊತೆಯಲ್ಲಿ ಕುಡಿಯುವದಕ್ಕೂ ಕಡಿವಾಣ ಹಾಕಿದರು ಎಂದಿರುವ ನೀಲಂ ನಾನು ಸಂಪ್ರದಾಯದ ಪ್ರಕಾರ ನನ್ನ ಹೆಸರನ್ನು ಕೂಡ ಅವರಿಗಾಗಿ ಬದಲಿಸಿಕೊಂಡಿದ್ದೆ ಆದರೆ ಅವರು ನನ್ನ ವ್ಯಕ್ತಿತ್ವವನ್ನೇ ಬದಲಿಸುವ ಪ್ರಯತ್ನ ಮಾಡಿದರು ಎಂದಿದ್ದಾರೆ.

ಮುಂದುವರೆದು ನಾನು ಎಲ್ಲಾದರೂ ಹೊರಗಡೆ ಓಡಾಡುವಾಗ ಜನ ನನ್ನನ್ನು ಬಂದು ಗುರುತಿಸಿ ನೀವು ನೀಲಂ ಅಲ್ವಾ ಎಂದು ಕೇಳಿದರೂ ಕೂಡ ನಾನು ಅಲ್ಲ ಎಂದು ಸುಳ್ಳು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದಿರುವ ನೀಲಂ ಈ ಎಲ್ಲ ಕಾರಣಗಳಿಂದ ನಾನ್ಯಾರು, ನಾನು ಇಲ್ಲೇನು ಮಾಡುತ್ತಿದ್ದೇನೆ ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಯಿತು ಎಂದಿದ್ದಾರೆ. ಇನ್ನೂ ಸಹಿಸಿಕೊಳ್ಳಲು ಸಾಧ್ಯ ಇಲ್ಲ ಎಂದು ನಾನು ಆ ಸಂಬಂಧದಿಂದ ಹೊರ ಬಂದೆ ಎಂದು ಹೇಳಿದ್ದಾರೆ. ತಮ್ಮ ಈ ಬದುಕಿನ ಕಥೆಯನ್ನು ಹೇಳುತ್ತಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಾರೆ.
ಇನ್ನೂ ರಿಶಿ ಸೇಥಿಗೆ ವಿಚ್ಛೇದನ ನೀಡಿ ಮರಳಿ ಭಾರತಕ್ಕೆ ಬಂದ ನಂತರ 2011ರಲ್ಲಿ ಕಿರುತೆರೆಯ ಕಲಾವಿದ ಸಮೀರ್ ಸೋನಿ ಅವರನ್ನು ಮದುವೆಯಾದ ನೀಲಂ 2013ರಲ್ಲಿ ಮಗು ದತ್ತು ಪಡೆದು ಪ್ರೀತಿಯಿಂದ ಸಲುಹಿ ಸಾಕುತ್ತಿದ್ದಾರೆ. ಮಗಳಿಗೆ ಅಹಾನಾ ಎಂದು ನಾಮಕರಣವನ್ನು ಮಾಡಿರುವ ನೀಲಂ, ತಮ್ಮ ಮೊದಲ ಮದುವೆಯ ವಿಚಾರವನ್ನು ಮಗಳಿಂದ ಗೌಪ್ಯವಾಗಿಯೇ ಇಟ್ಟಿದ್ದರು. ಸರಿಯಾದ ಸಮಯ ಬಂದಾಗ ಹೇಳಲು ನಿರ್ಧಾರ ಮಾಡಿದ್ದರು. ಆದರೆ, ಇದು ಸೋಶಿಯಲ್ ಮೀಡಿಯಾ ಕಾಲ. ಈ ಕಾಲದಲ್ಲಿ ಸತ್ಯ ಬಹುಕಾಲದವರೆಗೆ ಮುಚ್ಚಿಡುವುದು ಅಸಾಧ್ಯ. ಹೀಗಾಗಿಯೇ ನೀಲಂ ತನ್ನ ಬದುಕಿನ ಈ ಹಳೆಯ ಘಟನೆ ಮಗಳಿಗೆ ಹೇಳುವಷ್ಟರಲ್ಲಿಯೇ ಮಗಳಿಗೆ ಎಲ್ಲ ಸಂಗತಿ ಗೊತ್ತಾಗಿದೆ. ಈ ವಿಚಾರವನ್ನು ಕೂಡ ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿರುವ ನೀಲಂ ಅದೊಂದು ದಿನ ಕೆಲಸ ಮುಗಿಸಿಕೊಂಡು ನಾನು ಮನೆಗೆ ಬಂದೆ ಆಗ ನನ್ನ ಮಗಳು ಅಮ್ಮ ನೀನು ಡಿವೋರ್ಸ್ ಪಡೆದಿದ್ದೀಯಾ ಎಂದು ಕೇಳಿದಳು, ಆಗ ನನಗೆ ಪ್ರಾಣವೇ ಹೋದಂತಾಯಿತು ಎಂದಿದ್ದಾರೆ. ಆಕೆಗೆ ಉತ್ತರ ನೀಡಲು ನನ್ನ ಬಳಿ ಪದಗಳೇ ಇರಲಿಲ್ಲ ಎಂದು ಭಾವುಕರಾಗಿದ್ದಾರೆ.


Click it and Unblock the Notifications











