ಬಿಹಾರದಲ್ಲಿ ಪತ್ತೆಯಾದ ಇಮ್ರಾನ್ ಹಶ್ಮಿ ಮತ್ತು ಸನ್ನಿ ಲಿಯೋನ್ ಮಗ...!

ಸಿನಿಮಾ ತಾರೆಗಳೆಂದರೆ ಅನೇಕರಿಗೆ ಎಲ್ಲಿಲ್ಲದ ಮಮತೆ ಮತ್ತು ಅಭಿಮಾನ. ವಾಟ್ಸಾಫ್ ಡಿಪಿಯಿಂದ ಹಿಡಿದು ಫೇಸ್ ಬುಕ್, ಇನ್ ಸ್ಟಾ, ಹಾಗೂ ಉಳಿದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಚ್ಚಿನ ತಾರೆಯ ಚಿತ್ರಗಳ ಕುರಿತ ಸುದ್ದಿಗಳನ್ನು ಹಂಚಿಕೊಳ್ಳುವುದಲ್ಲದೇ, ಅವರ ಭಾವ ಚಿತ್ರಗಳನ್ನು ಫ್ರೊಫೈಲ್ ಫೋಟೋವಾಗಿಯೂ ಸೇವ್ ಮಾಡಿಕೊಂಡು ಬಿಡುತ್ತಾರೆ. ಆದರೆ.. ಇಲ್ಲೊಬ್ಬ ಭೂಪ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಾಲಿವುಡ್‌ನ ಸ್ಟಾರ್ ಇಮ್ರಾನ್ ಹಶ್ಮಿ ಮತ್ತು ಒಂದ್ಕಾಲದ ನೀಲಿ ರಾಣಿ ಸನ್ನಿ ಲಿಯೋನ್ ನನ್ನ ತಂದೆ ಮತ್ತು ತಾಯಿ ಎಂದಿದ್ದಾನೆ.

ಹೌದು, ಬಿಹಾರನ ಧನರಾಜ್ ಮಹತೋ ಕಾಲೇಜ್‌ನಲ್ಲಿ, ಕುಂದನ್ ಕುಮಾರ್ ಎಂಬ ವ್ಯಕ್ತಿ, ತನ್ನ ಎರಡನೇ ಬಿಎ ಪರೀಕ್ಷಾ ಪ್ರವೇಶ ಪತ್ರದಲ್ಲಿ ತನ್ನ ಹೆತ್ತವರ ಹೆಸರನ್ನು ಸಮ್ಮಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿ ಎಂದು ನಮೂದಿಸಿದ್ದಾನೆ. ಇದಲ್ಲದೇ ಮನೆಯ ವಿಳಾಸದ ಸ್ಥಳದಲ್ಲಿ ಬಿಹಾರದ ಪ್ರಖ್ಯಾತ ರೆಡ್ ಲೈಟ್ ಏರಿಯಾದ ಚತುರ್ಭುಜ್ ಸ್ಥಾನ್ ಹೆಸರನ್ನು ಕೂಡ ಉಲ್ಲೇಖಿಸಿದ್ದಾನೆ. ಸದ್ಯ ಕುಂದನ್ ಕುಮಾರ್‌ನ ಈ ಪ್ರವೇಶ ಪರೀಕ್ಷಾ ಪತ್ರದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹತ್ತು ಹಲವು ಮಜವಾದ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.

Emraan Hashmi and Sunny Leone s son was found in Bihar Pic Goes Viral

ಒಬ್ಬರು ಕುಂದನ್‌ಗೆ ಪ್ರಚಾರದಲ್ಲಿರುವುದು ಹೇಗೆ ಎನ್ನುವುದು ಗೊತ್ತು ಅಂದರೆ, ಇನ್ನೊಬ್ಬರು ಇಮ್ರಾನ್ ಹಶ್ಮಿ ಮತ್ತು ಸನ್ನಿ ಲಿಯೋನ್ ಗೆ ಬಿಹಾರದಲ್ಲಿ ಮಗ ಇದ್ದಾನೆ ಎನ್ನುವ ವಿಚಾರ ನಮಗೆ ಗೊತ್ತೇ ಇರಲಿಲ್ಲವಲ್ಲಾ ಎಂದಿದ್ದಾರೆ. ಮತ್ತೊಬ್ಬರು ಓದಿ ಸಾಧಿಸುವುದು ಅಷ್ಟರಲ್ಲಿಯೇ ಇದೆ ನೀವು ಬಾಲಿವುಡ್‌ಗೆ ತೆರಳಿ ಚಿತ್ರಕ್ಕೋಸ್ಕರ ಈಗಿಂದ ಈಗಲೇ ಕಥೆ ಬರೆಯಲು ಶುರು ಮಾಡಿ ಎಂಬ ಸಲಹೆಯನ್ನು ನೀಡಿದ್ದಾರೆ. ಈ ವಿಚಾರಗಳಲ್ಲಿ ಬಿಹಾರ ನಮ್ಮನ್ನೂ ಯಾವತ್ತು ನಿರಾಶೆ ಮಾಡುವುದಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಿಹಾರದಲ್ಲಿ ಯಾವುದು ಅಸಾಧ್ಯವಲ್ಲ ಇಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ. ಬಹುಶಃ ಜಾನಿ ಸಿಂಗ್ ಇವನ ಅಜ್ಜ ಮತ್ತು ಮಿಯಾ ಖಲೀಫಾ ಇವನ ಅಜ್ಜಿಯಾಗಿರಬಹುದು ಎಂದಿದ್ದಾರೆ.

ಅಂದ್ಹಾಗೇ ಕುಂದನ್ ಕುಮಾರ್ ಬಿಹಾರದ ಬಾಬಾ ಸಾಹೇಬ್ ಭೀಮ್‌ರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 2017ರಿಂದ 2020ರ ಅವಧಿಯಲ್ಲಿ ಈ ವ್ಯಕ್ತಿ ಈ ವಿಶ್ವವಿದ್ಯಾಲಯಕ್ಕೆ ಸೇರುವ ಧನರಾಜ್ ಮಹತೋ ಕಾಲೇಜ್‌ನಲ್ಲಿ ಬಿಎ ವ್ಯಾಸಂಗವನ್ನು ಮಾಡುತ್ತಿದ್ದ. ಈ ಸಮಯದಲ್ಲಿ ಕುಂದನ್ ಸಲ್ಲಿಸಿದ ಪರೀಕ್ಷಾ ಪ್ರವೇಶ ಪತ್ರ ಆಗ ಇನ್ನೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರ ಚಿತ್ತವನ್ನು ಕದಿಯುವುದಲ್ಲದೇ ಅನೇಕರ ಮುಗುಳು ನಗೆಗೆ ಕೂಡ ಈ ಪ್ರವೇಶ ಪತ್ರ ಸದ್ಯ ಕಾರಣವಾಗಿದೆ. ಇಂಡಿಯನ್ ರೇರ್ ಇಮೇಜ್ ಹಂಚಿಕೊಂಡ ಈ ಪರೀಕ್ಷಾ ಪತ್ರಕ್ಕೆ ಎರಡು ಲಕ್ಷಕ್ಕೂ ಅಧಿಕ ಲೈಕ್‌ಗಳು ಬಂದಿವೆ.

ಇನ್ನೂ ಹೀಗೆ ತಾರೆಯರ ಹೆಸರು ಅಥವಾ ಫೋಟೋ ದುರ್ಬಳಕೆಯಾಗುತ್ತಿರುವುದು, ವೈರಲ್ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಅನೇಕ ಬಾರಿ ಈ ತರಹದ ಪ್ರಕರಣಗಳಾಗಿವೆ. ಅದರಲ್ಲಿಯೂ ಸನ್ನಿ ಲಿಯೋನ್ ಹೆಸರು ಮೇಲಿಂದ ಮೇಲೆ ಈ ತರಹದ ಕೆಲಸಕ್ಕೆ ಅನೇಕರು ಉಪಯೋಗ ಮಾಡಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಹಿಂದೆ ಕರ್ನಾಟಕದಲ್ಲಿ ಚಿಕ್ಕಮಗಳೂರಿನ ಕೊಪ್ಪದ ಅಭ್ಯರ್ಥಿಯೊಬ್ಬರು ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾಗ, ಪರೀಕ್ಷೆಯ ಪ್ರವೇಶ ಪತ್ರಿಕೆಯಲ್ಲಿ ಅಭ್ಯರ್ಥಿಯ ಚಿತ್ರ ಪ್ರದರ್ಶನಗೊಳ್ಳಬೇಕಿದ್ದ ಸ್ಥಳದಲ್ಲಿ ಸನ್ನಿ ಲಿಯೋನ್‌ ಅವರ ತೆರೆದೆದೆಯ ಚಿತ್ರ ಮುದ್ರಣಗೊಂಡಿತ್ತು. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ಯುಪಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಕೂಡ ಸನ್ನಿ ಲಿಯೋನ್ ಫೋಟೋ ಕಂಡು ಬಂದಿತ್ತು. ಪ್ರವೇಶ ಪತ್ರ ವೈರಲ್ ಆಗಿತ್ತು.

More from Filmibeat

Read more about: emraan hashmi sunny leone viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X