For Quick Alerts
  ALLOW NOTIFICATIONS  
  For Daily Alerts

  'ಟೈಗರ್-3 ಚಿತ್ರದಲ್ಲಿ ನಾನು ನಟಿಸುತ್ತಿಲ್ಲ': ಇಮ್ರಾನ್ ಹಶ್ಮಿ ಅಚ್ಚರಿ

  |

  'ರಾಧೆ' ಚಿತ್ರದ ನಂತರ ಸಲ್ಮಾನ್ ಖಾನ್ ನಟಿಸುತ್ತಿರುವ ಸಿನಿಮಾ ಟೈಗರ್ 3. ಏಕ್ತಾ ಟೈಗರ್, ಟೈಗರ್ ಜಿಂದಾ ಹೈ ಚಿತ್ರಗಳ ಮುಂದುವರಿದ ಭಾಗ ಎಂದು ಹೇಳಲಾಗಿದ್ದು, ಸಲ್ಮಾನ್ ಮತ್ತು ಕತ್ರಿನಾ ಕಾಂಬಿನೇಷನ್ ಮುಂದುವರಿದಿದೆ. ಟೈಗರ್ 3 ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದಿನಿಂದಲೂ ಚರ್ಚೆಯಲ್ಲಿದೆ.

  ಟೈಗರ್ ಸಿನಿಮಾದ ಪ್ರಮುಖ ಖಳನಟನಾಗಿ ಇಮ್ರಾನ್ ಹಶ್ಮಿ ಅಭಿನಯಿಸುತ್ತಿದ್ದು, ಬಹಳ ರೋಚಕತೆ ಹುಟ್ಟುಹಾಕಿತ್ತು. ಅದಾಗಲೇ ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿದೆ. ಸದ್ಯ ರಷ್ಯಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಶೂಟಿಂಗ್ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಇಮ್ರಾನ್ ಹಶ್ಮಿ ಸಹ ಟೈಗರ್ ಚಿತ್ರತಂಡ ಸೇರಲಿದ್ದಾರೆ ಎಂಬ ವರದಿಗಳು ಆಗಿತ್ತು. ಆದ್ರೀಗ, ಇಮ್ರಾನ್ ಹಶ್ಮಿ ಅಚ್ಚರಿ ವಿಷಯ ಹೊರಹಾಕಿದ್ದಾರೆ.

  ಏರ್ಪೋಟ್‌ನಲ್ಲಿ ಸಲ್ಮಾನ್ ಖಾನ್ ತಡೆದಿದ್ದ ಅಧಿಕಾರಿಗೆ ದಂಡ ವಿಧಿಸಿಲ್ಲ: CISFಏರ್ಪೋಟ್‌ನಲ್ಲಿ ಸಲ್ಮಾನ್ ಖಾನ್ ತಡೆದಿದ್ದ ಅಧಿಕಾರಿಗೆ ದಂಡ ವಿಧಿಸಿಲ್ಲ: CISF

  ಇಮ್ರಾನ್ ಹಶ್ಮಿ, ಅಮಿತಾಭ್ ಬಚ್ಚನ್ ಹಾಗೂ ರಿಯಾ ಚಕ್ರವರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಚೆಹ್ರೆ' ಸಿನಿಮಾ ಈ ವಾರ ತೆರೆಗೆ ಬರ್ತಿದ್ದು, ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ಇಮ್ರಾನ್ 'ನಾನು ಟೈಗರ್ 3 ಚಿತ್ರದಲ್ಲಿ ನಟಿಸುತ್ತಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...

  ನಿಮಗೆ ಯಾರು ಹೇಳಿದ್ದು ನಾನು ನಟಿಸುತ್ತಿದ್ದೇನೆ ಅಂತ?

  ನಿಮಗೆ ಯಾರು ಹೇಳಿದ್ದು ನಾನು ನಟಿಸುತ್ತಿದ್ದೇನೆ ಅಂತ?

  'ಟೈಗರ್-3' ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸಿದ್ದು, ಅದಾಗಲೇ ಕೆಲವು ಭಾಗದ ಚಿತ್ರೀಕರಣ ಸಹ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪಿಂಕ್‌ವಿಲ್ಲಾ ಜೊತೆಗಿನ ಸಂದರ್ಶನದಲ್ಲಿ ಟೈಗರ್ 3 ಸಿನಿಮಾ ಬಗ್ಗೆ ಮಾತನಾಡಿರುವ ಇಮ್ರಾನ್, ''ನಿಮಗೆ ಯಾರು ಹೇಳಿದ್ದು, ನಾನು ಚಿತ್ರೀಕರಣ ಮಾಡಿದ್ದೇನೆ ಅಂತ. ಜನ ಹೇಳಿಕೊಳ್ಳುತ್ತಿದ್ದಾರೆ ಅಷ್ಟೇ. ಆದರೆ ನಾನು ಶೂಟ್ ಮಾಡಿಲ್ಲ. ನಿಜ ಏನಪ್ಪಾ ಅಂದ್ರೆ ನಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೂ ಜನ ಏಕೆ ಈ ರೀತಿ ಸುದ್ದಿ ಹರಡಿಸುತ್ತಿದ್ದಾರೆ ಗೊತ್ತಿಲ್ಲ. ಈ ಹಿಂದೆ ನಾನು ಎಲ್ಲಿಯೂ ಟೈಗರ್-3 ಚಿತ್ರದ ಬಗ್ಗೆ ಮಾತನಾಡಿಲ್ಲ ಹಾಗೂ ನಟಿಸುತ್ತಿದ್ದೇನೆ ಅಂತ ಹೇಳಲೇ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

  ಗಡ್ಡದಾರಿಯಾಗಿ ರಷ್ಯಾ ಬೀದಿಯಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್: ಹೊಸ ಅವತಾರ ಸಖತ್ ವೈರಲ್ಗಡ್ಡದಾರಿಯಾಗಿ ರಷ್ಯಾ ಬೀದಿಯಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್: ಹೊಸ ಅವತಾರ ಸಖತ್ ವೈರಲ್

  ವೈರಲ್ ಫೋಟೋಗಳು ಯಾವುದು?

  ವೈರಲ್ ಫೋಟೋಗಳು ಯಾವುದು?

  ಟೈಗರ್-3 ಸಿನಿಮಾಗಾಗಿ ಇಮ್ರಾನ್ ಹಶ್ಮಿ ವರ್ಕೌಟ್ ಮಾಡ್ತಿದ್ದಾರೆ. ಅದಕ್ಕಾಗಿ ಫಿಟ್ನೆಸ್ ಮಾಡ್ತಿದ್ದಾರೆ ಎಂದು ಕೆಲವು ಫೋಟೋಗಳು ವೈರಲ್ ಆದವು. ಇಮ್ರಾನ್ ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿದ ಫೋಟೋಗಳು ವೈಭಾರಿ ಚರ್ಚೆಗೆ ಕಾರಣವಾಗಿತ್ತು. ವರ್ಕೌಟ್ ಬಗ್ಗೆ ಮಾತನಾಡಿದ 'ಸೀರಿಯಲ್ ಕಿಸ್ಸರ್' ''ನಾನು ಯಾವುದೇ ನಿರ್ದಿಷ್ಟ ಕಾರಣಕ್ಕಾಗಿ ಜಿಮ್‌ನಲ್ಲಿ ಕೆಲಸ ಮಾಡುತ್ತಿಲ್ಲ. ನಾನು ಫಿಟ್ ಆಗಿರಲು ಬಯಸುತ್ತೇನೆ. ಅದಕ್ಕಾಗಿ ನಾನು ವರ್ಕೌಟ್ ಮಾಡ್ತೇನೆ" ಎಂದು ಹೇಳಿದರು.

  ರಷ್ಯಾದಲ್ಲಿ ಸಲ್ಲು-ಕತ್ರಿನಾ

  ರಷ್ಯಾದಲ್ಲಿ ಸಲ್ಲು-ಕತ್ರಿನಾ

  ಪ್ರಸ್ತುತ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಟೈಗರ್ 3 ಚಿತ್ರೀಕರಣಕ್ಕಾಗಿ ರಷ್ಯಾಗೆ ತೆರಳಿದ್ದಾರೆ. ಕೆಲವು ಶೂಟಿಂಗ್ ಫೋಟೋಗಳು ವೈರಲ್ ಆಗಿದ್ದು, ಹಿಂದೆಂದೂ ಕಾಣದ ರೀತಿ ಸಲ್ಲು ಕಾಣಿಸಿಕೊಂಡಿದ್ದಾರೆ. ದೊಡ್ಡ ಮೀಸೆ ಬಿಟ್ಟು, ಉದ್ದನೇಯ ಕೂದಲು ಬಿಟ್ಟಿರುವ ಗೆಟಪ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸಲ್ಲು ಅವರನ್ನು ಈ ಗೆಟಪ್‌ನಲ್ಲಿ ನೋಡಿದ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

  ರಾ ಏಜೆಂಟ್ ಆಗಿ ಸಲ್ಮಾನ್ ಖಾನ್

  ರಾ ಏಜೆಂಟ್ ಆಗಿ ಸಲ್ಮಾನ್ ಖಾನ್

  ಮನಿಶ್ ಶರ್ಮಾ ನಿರ್ದೇಶನ ಟೈಗರ್ 3 ಕಳೆದ ಜುಲೈ ತಿಂಗಳಲ್ಲಿ ಮುಂಬೈನ ಅಂಧೇರಿಯಲ್ಲಿ ಚಿತ್ರೀಕರಣ ಮಾಡಿತ್ತು. ಎರಡು ವಾರಗಳ ಕಾಲ ಶೂಟಿಂಗ್ ಮಾಡಿದ್ದರು. ಈ ವೇಳೆ ಸಲ್ಮಾನ್ ಖಾನ್-ಕತ್ರಿನಾ ಪಾಲ್ಗೊಂಡಿದ್ದರು. ಈಗ ರಷ್ಯಾದಲ್ಲಿ ಶೂಟಿಂಗ್ ಮುಂದುವರಿಸಿದ್ದು, ಆಸ್ಟ್ರಿಯಾ, ಟರ್ಕಿ ಸೇರಿದಂತೆ ಇತರೆ ಐದು ದೇಶಗಳಲ್ಲಿ ಚಿತ್ರೀಕರಣದ ಪ್ಲಾನ್ ಇದೆ. ಕಬೀರ್ ಖಾನ್ ನಿರ್ದೇಶನದಲ್ಲಿ ಏಕ್ತಾ ಟೈಗರ್ 2012ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಮುಂದುವರಿದ ಭಾಗ ಟೈಗರ್ ಜಿಂದಾ ಹೈ 2017ರಲ್ಲಿ ಬಂದಿತ್ತು. ಇದೀಗ, ಟೈಗರ್ 3 ಸಿದ್ಧವಾಗುತ್ತಿದೆ. ರಾ ಏಜೆಂಟ್ ಆಗಿ ಸಲ್ಮಾನ್ ಖಾನ್ ಮತ್ತು ಐಎಸ್‌ಐ ಏಜೆಂಟ್ ಆಗಿ ಕತ್ರಿನಾ ನಟಿಸುತ್ತಿದ್ದಾರೆ.

  English summary
  Bollywood actor Emraan Hashmi clarifies he is not part of Salman khan and Katrina kaif starrer Tiger 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X