ಇಷಾ ಗುಪ್ತಾ ಜೊತೆ 20 ನಿಮಿಷ ಹಷ್ಮಿ ಹಾಟ್ ಕಿಸ್
ಈತ ಮೊದಲೇ ಸೀರಿಯಲ್ ಕಿಸ್ಸರ್ ಎಂದು ಖ್ಯಾತಿ ಪಡೆದಿದ್ದಾನೆ. ಚಿತ್ರದಲ್ಲಿ ಒಂದಿಲ್ಲೊಂದು ಹಾಟ್ ಕಿಸ್ಸಿಂಗ್ ಸೀನ್ ಇರಲೇಬೇಕು. ಈತನನ್ನು ನೋಡಿ ಆ ರೀತಿಯ ಸೀನ್ ಇಡುತ್ತಾರೋ ಅಥವಾ ಈತನೇ ಬಲವಂತ ಮಾಡಿ ಆ ರೀತಿಯ ಸೀನ್ ಗೆ ಹಪಹಪಿಸುತ್ತಾನೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದು ಚುಂಬನ ಸೀನ್ ಅಂತೂ ಇರಲೇಬೇಕು.
ಹಾಟ್ ಚೆಲುವೆ ಇಷಾ ಗುಪ್ತಾಳೊಂದಿಗೆ ಬರೋಬ್ಬರಿ 20 ನಿಮಿಷಗಳಷ್ಟು ಸುದೀರ್ಘವಾಗಿ ಚುಂಬಿಸುವ ಮೂಲಕ ಇಮ್ರಾನ್ ಹಷ್ಮಿ ಹೊಸ ದಾಖಲೆ ನಿರ್ಮಿಸಿದ್ದಾನೆ. ಈ ಹಾಟ್ ಕಿಸ್ಸಿಂಗ್ ಸೀನ್ ಇರುವುದು 'ರಾಜ್ 3' ಚಿತ್ರದಲ್ಲಿ. ಇದೇ ಶುಕ್ರವಾರ (ಸೆ.7) ಈ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಜೋಡಿ ಈ ಹಿಂದೆ 'ಜನ್ನತ್ 2' ಚಿತ್ರದಲ್ಲೂ ಇದೇ ರೀತಿ ಚುಂಬಿಸಿಕೊಂಡಿತ್ತು. ಆದರೆ ಆ ಚುಂಬನ ಇಷ್ಟೊಂದು ಸುದೀರ್ಘವಾಗಿ ಇರಲಿಲ್ಲ. ಮಹೇಶ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಸಖತ್ ಹಾಟ್ ಆಗಿರುವ ಈ ಚುಂಬನ ಪ್ರಮುಖ ಆಕರ್ಷಣೆಯಾಗಿದೆಯಂತೆ.
1999ರಿಂದ ಚಿತ್ರ ನಿರ್ದೇಶನದಿಂದ ದೂರವೇ ಉಳಿದಿರುವ ಮಹೇಶ್ ಭಟ್ ಚಿತ್ರ ನಿರ್ಮಾಪಕರಾಗಿ ಮುಂದುವರಿದಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ವಿಕ್ರಮ್ ಭಟ್. ಈ ಚಿತ್ರ 3D ಯಲ್ಲೂ ಬಿಡುಗಡೆಯಾಗುತ್ತಿದೆ. ಈಗಾಗಲೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.
ರಾಜ್ 3 ಸಿನಿಮಾಕ್ಕಿಂತ ಮೊದಲು ರಾಜ್ ಮತ್ತು ರಾಜ್ 2 ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ಬಿಪಾಶಾ ಬಸು ಮತ್ತು ಇಮ್ರಾನ್ ಹಸ್ಮಿ ಜತೆ ಇಶಾ ಗುಪ್ತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮೊದಲು ಜಾಕ್ವೆಲಿನ್ ಫರ್ನಾಂಡೀಸ್ ಆಯ್ಕೆಯಾಗಿದ್ದರು. ತಮಗೆಲ್ಲಿ ಸೆಕ್ಸ್ ಸಿಂಬಲ್ ಎಂಬ ಹಣೆಪಟ್ಟಿಬೀಳುತ್ತದೋ ಎಂದು ಹೆದರಿ ಆಕೆ ಚಿತ್ರಕ್ಕೆ ಸಹಿಹಾಕಿರಲಿಲ್ಲ. (ಏಜೆನ್ಸೀಸ್)


Click it and Unblock the Notifications











