Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೂರು ವರ್ಷದ ಬಳಿಕ ಹಾರರ್ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ
ಬಾಲಿವುಡ್ ನ ಖ್ಯಾತ ನಟ ಇಮ್ರಾನ್ ಹಶ್ಮಿ ಸಿನಿಮಾಗಳು ಇತ್ತೀಚಿಗೆ ತೀರಾ ಅಪರೂಪ ಆಗಿದೆ. ವಿಭಿನ್ನ ಸಿನಿಮಾಗಳ ಮೂಲಕವೇ ಚಿತ್ರಾಭಿಮಾನಿಗಳನ್ನು ರಂಜಿಸುತ್ತಿದ್ದ ಇಮ್ರಾನ್ ಈಗ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಸೀರಿಯಲ್ ಕಿಸ್ಸರ್ ಅಂತಾನೆ ಖ್ಯಾತಿಗಳಿಸಿರುವ ಇಮ್ರಾನ್ ಹೊಸ ಈಗ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇಮ್ರಾನ್ ಒಪ್ಪಿಕೊಂಡಿರುವ ಹೊಸ ಸಿನಿಮಾ ಹಾರರ್ ಎನ್ನುವುದೇ ವಿಶೇಷ. ಮೂರು ವರ್ಷಗಳ ಬಳಿಕ ಹಾರರ್ ಸಿನಿಮಾ ಮೂಲಕ ಬರ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಸಂತಸ ತಂದಿದೆ. ಹಾರರ್ ಸಿನಿಮಾಗಳ ಮೂಲಕನೇ ಹೆಚ್ಚು ಖ್ಯಾತಿ ಗಳಿಸಿರುವ ಇಮ್ರಾನ್ 'ರಾಝ್' ಸರಣಿಯ ಮೂರನೇ ಆವೃತ್ತಿ ನಂತರ ಮತ್ತೆ ಕಾಣಿಸಿಕೊಂಡಿರ್ಲಿಲ್ಲ. 2016ರಲ್ಲಿ ರಿಲೀಸ್ ಆಗಿದ್ದ 'ರಾಝ್-ರಿಬೂಟ್' ಚಿತ್ರದ ಮೂಲಕ ಸಿನಿಪ್ರಿಯರನ್ನು ಬೆಚ್ಚಿಬೀಳಿಸಿದ್ದ ಇಮ್ರಾನ್ ಈಗ ಮತ್ತೆ ಹಾರಾರ್ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.
ಮೊದಲ ದಿನ ದಾಖಲೆ ಕಲೆಕ್ಷನ್ ಮಾಡಿದ 'ಕಳಂಕ್' ಸಿನಿಮಾ
ಅಂದ್ಹಾಗೆ ಇಮ್ರಾನ್ ಸಹಿ ಮಾಡಿರುವ ಸಿನಿಮಾ ಮಲಯಾಳಂನ ಹಿಟ್ ಸಿನಿಮಾ 'ಎಜ್ರಾ' ರೀಮೇಕ್. ಮಲಯಾಳಂನಲ್ಲಿ ಪೃಥ್ವಿರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ನೋಡಿ ಇಂಪ್ರೆಸ್ ಆದ ಇಮ್ರಾನ್ ಬಾಲಿವುಡ್ ನಲ್ಲಿ ರೀಮೇಕ್ ಮಾಡಲು ಸೈ ಅಂದಿದ್ದಾರೆ. ಇನ್ನು ವಿಶೇಷ ಅಂದ್ರೆ ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಜಯ್ ಕೃಷ್ಣನ್ ಇಮ್ರಾನ್ ಹಶ್ಮಿ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿರುವ ಇಮ್ರಾನ್ 'ಎಜ್ರಾ' ಸಿನಿಮಾದ ಬಗ್ಗೆ ಟ್ವಿಟ್ಟರನಲ್ಲಿ ಶೇರ್ ಮಾಡಿದ್ದಾರೆ. ಭಯಾನಕ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ವಾಗಿದೆ ಎಂದು ಹೇಳಿಕೊಂಡಿದ್ದಾರೆ.