For Quick Alerts
  ALLOW NOTIFICATIONS  
  For Daily Alerts

  ಮನಮೋಹನ್ ಸಿಂಗ್ ಚಿತ್ರದಲ್ಲಿ ಯಾರು ಯಾವ ಪಾತ್ರ ಮಾಡ್ತಿದ್ದಾರೆ.?

  By Bharath Kumar
  |

  ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಯಾರೆಲ್ಲಾ ಪಾತ್ರಗಳು ಬರಲಿವೆ ಎನ್ನುವುದು ಕುತೂಹಲ ಎಲ್ಲರನ್ನ ಕಾಡುತ್ತಿದೆ. ಅನುಪಮ್ ಖೇರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಅವರ ಲುಕ್ ಈಗಾಗಲೇ 'ವಾಹ್' ಎನ್ನಿಸಿದೆ.

  ಮಾಜಿ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪ್ರಣಬ್ ಮುಖರ್ಜಿ ಸೇರಿದಂತೆ ಅಂದಿನ ಕಾಲದ ಬಹುತೇಕ ಕಾಂಗ್ರೆಸ್ ನಾಯಕರ ಪಾತ್ರಗಳು ಈ ಚಿತ್ರದಲ್ಲಿ ಬರಲಿದೆ.

  ಆದ್ರೆ, ಅವರ ಗೆಟಪ್ ಹೇಗಿರಲಿದೆ ಎಂಬ ನಿರೀಕ್ಷೆ ಇತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ. 'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದ ಸಂಪೂರ್ಣ ತಾರಬಳಗದ ಫೋಟೋ ಬಹಿರಂಗವಾಗಿದ್ದು, ಒಬ್ಬರಿಗಿಂತ ಮತ್ತೊಬ್ಬರು ಗಮನ ಸೆಳೆಯುತ್ತಿದ್ದಾರೆ.

  ಸೋನಿಯಾ ಗಾಂಧಿ ಪಾತ್ರಕ್ಕಾಗಿ ಜರ್ಮನಿಯಿಂದ ಬಂದ ನಟಿ.! ಸೋನಿಯಾ ಗಾಂಧಿ ಪಾತ್ರಕ್ಕಾಗಿ ಜರ್ಮನಿಯಿಂದ ಬಂದ ನಟಿ.!

  ಈ ಚಿತ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಬಾಲಿವುಡ್‌ ನಟ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಸೋನಿಯಾ ಗಾಂಧಿ ಪಾತ್ರಕ್ಕೆ ಜರ್ಮನ್ ಮೂಲದ ನಟಿಯನ್ನು ಕರೆತರಲಾಗಿದ್ದು, ನಟಿ ಸುಝೇನ್ ಬರ್ನೆಟ್, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರ ನಿಭಾಯಿಸಲಿದ್ದಾರೆ. ಇನ್ನು 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ' ಚಿತ್ರದಲ್ಲಿ ಮೋಡಿ ಮಾಡಿದ್ದ ಅಹನಾ ಕುಮ್ರ, ಪ್ರಿಯಾಂಕಾ ಗಾಂಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಪ್ರಿಯಾಂಕಾ ಗಾಂಧಿ ಪಾತ್ರ ಮಾಡಲಿರುವ ಈ ನಟಿ ಯಾರು.? ಪ್ರಿಯಾಂಕಾ ಗಾಂಧಿ ಪಾತ್ರ ಮಾಡಲಿರುವ ಈ ನಟಿ ಯಾರು.?

  ಅಂದ್ಹಾಗೆ, ಮನಮೋಹನ್ ಸಿಂಗ್ ಅವರ ಆಡಳಿತಾವಧಿ 2004-2008ರ ವರೆಗೂ ಮಾಧ್ಯಮ ಸಲಹಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಪುಸ್ತಕದ ಪ್ರತಿರೂಪವಾಗಿ ಈ ಸಿನಿಮಾ ಸಿದ್ಧವಾಗುತ್ತಿದೆ.

  ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆಯುತ್ತಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುಂಚೆ ಈ ಚಿತ್ರವನ್ನ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗಿದೆ.

  English summary
  The entire star cast of The Accidental Prime Minister is visible in this picture. There’s Sonia Gandhi, Priyanka and Rahul alongwith Dr Manmohan Singh and his wife, Gursharan Kaur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X