ಮಲಗೆದ್ದವರಿಗೇ ಬಾಲಿವುಡ್ ಮೊದಲು ಮಣೆ ಹಾಕುತ್ತೆ, ಬಣ್ಣದ ಲೋಕದ ಮುಖವಾಡ ಕಳಚಿದ ಅಪ್ಪು ನಾಯಕಿ..!
ಇದು ಬಣ್ಣದ ಲೋಕ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವಂತೆ, ಹೊರಗಡೆಯಿಂದ ಈ ಲೋಕ ತುಂಬಾನೇ ಕಲರ್ ಫುಲ್ ಆಗಿ ಕಾಣುತ್ತೆ. ಆದರೆ .. ಅದರ ಒಳಹೊಕ್ಕಾಗಲೇ ಬಣ್ಣ ಅಸಲಿ ಅಲ್ಲ ನಕಲಿ ಅನ್ನುವುದು ಮನದಟ್ಟಾಗುತ್ತೆ. ಮುಖವಾಡದ ಬದುಕು ಎಷ್ಟೊಂದು ವಿಚಿತ್ರ ಎಂದು ಅನಸುತ್ತೆ. ಇದಕ್ಕೆ ಎರಿಕಾ ಫರ್ನಾಂಡಿಸ್ ಇತ್ತೀಚೆಗೆ ಮಾತನಾಡಿದ ಮಾತುಗಳೇ ಸಾಕ್ಷಿ.
ಹೌದು, ಎರಿಕಾ ಫರ್ನಾಂಡಿಸ್.. ಗೊತ್ತಲ್ವಾ..? ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಮೂಲಕ, ಕನ್ನಡ ಚಿತ್ರರಂಗಕ್ಕೆ ಬಂದಿದ್ದ ಮಂಗ್ಳೂರ್ ಮೀನು. ನಿನ್ನಿಂದಲೇ ಚಿತ್ರಕ್ಕೂ ಮುನ್ನ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದ ಎರಿಕಾ, ನಿನ್ನಿಂದಲೇ ನಂತರ ಸೀದಾ ಮುಂಬೈನ ಪ್ಲೈಟ್ ಹತ್ತಿದ್ದರು. ಬಬ್ಲೂ ಹ್ಯಾಪಿ ಹೈ ಚಿತ್ರದಲ್ಲಿ ನಾಯಕಿ ಪಾತ್ರವನ್ನ ನಿರ್ವಹಿಸಿದರು.

ವಿಶೇಷ ಅಂದರೆ ಎರಿಕಾ ಫರ್ನಾಂಡಿಸ್ ಬದುಕಿನಲ್ಲಿ ಇದೆಲ್ಲವೂ ಘಟಿಸಿದ್ದು ಕೇವಲ ಒಂದೇ ವರ್ಷದಲ್ಲಿ. ಒಂದೇ ವರ್ಷದಲ್ಲಿ ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ನಟಿಸಿದ್ದ ಎರಿಕಾ ಫರ್ನಾಂಡಿಸ್ ಅವರನ್ನ ಇನ್ನೂ ತಡೆದು ನಿಲ್ಲಿಸುವವರು ಯಾರು ಇಲ್ಲ ಎಂದೇ ಎಲ್ಲರು ಅಂದುಕೊಂಡಿದ್ದರು. ಎರಿಕಾ ಅವರಲ್ಲಿಯೂ ಕೇವಲ ಒಂದೇ ವರ್ಷದಲ್ಲಿ ಮೂರು ಭಾಷೆಯಲ್ಲಿ ಬಣ್ಣ ಹಚ್ಚಿದ ಸಂಭ್ರಮವೂ ಇತ್ತು. 2014ರಲ್ಲಿ ಈ ಸಂಭ್ರಮ ಇನ್ನೂ ದುಪ್ಪಟ್ಟಾಗಿತ್ತು. ಯಾಕೆಂದರೆ 2014ರಲ್ಲಿ ಕೂಡ ಎರಿಕಾ ಮೂರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಆ ಪೈಕಿ ಮೂರರಲ್ಲಿ ಒಂದು ತಮಿಳು ಚಿತ್ರವಾದರೆ, ಮಿಕ್ಕ ಎರಡು ತೆಲುಗು ಸಿನಿಮಾಗಳಾಗಿದ್ದವು.
ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಬೆಳ್ಳಿ ಪರದೆಯ ಮೇಲೆ ಮಿಂಚಬೇಕಿದ್ದ ಎರಿಕಾ ಫರ್ನಾಂಡಿಸ್ ಏಕಾಏಕಿ ಕಾಣೆಯಾದರು. ಎಲ್ಲಿ ಹೋದರು ಎಂದು ಎಲ್ಲರೂ ಹುಡುಕುವ ಸಂದರ್ಭದಲ್ಲಿ ಇವರು ಕಂಡಿದ್ದು ಕಿರುತೆರೆಯಲ್ಲಿ. ಚಿತ್ರರಂಗದಲ್ಲಿ ನಾಯಕಿಯಾಗುವ ಎಲ್ಲ ಅರ್ಹತೆ ಹಾಗೂ ಯೋಗ್ಯತೆಯನ್ನ ಹೊಂದಿರುವ ಎರಿಕಾ ಅವರನ್ನು ತಮ್ಮ ಮನೆಯಲ್ಲಿ ಕಂಡ ಅನೇಕರು, ನಿಜಕ್ಕೂ ಆಗ ಅಚ್ಚರಿಗೊಳಗಾಗಿದ್ದರು. ಹಿರಿತೆರೆ ಬಿಟ್ಟು ಕಿರುತೆರೆಯಲ್ಲಿ ಏನ್ಮಾಡ್ತಿದ್ದಾರೆ ಎಂದು ಪ್ರಶ್ನೆಯನ್ನೂ ಕೇಳಿದ್ದರು. ಆ ಪ್ರಶ್ನೆಗಳಿಗೆ ಎರಿಕಾ ಫರ್ನಾಂಡಿಸ್ ಈಗ ಉತ್ತರ ಕೊಟ್ಟಿದ್ದಾರೆ. ಬಾಲಿವುಡ್ ನ ಇನ್ನೊಂದು ಮುಖ ಕಂಡು ಬೆಚ್ಚಿ ಬಿದ್ದೆ ಎಂದು ಹೇಳಿದ್ದಾರೆ.
ಹೌದು, ಅಸಲಿಗೆ ನಿಮಗೆ ಗೊತ್ತಿರಲಿ ಎರಿಕಾ ಫರ್ನಾಂಡಿಸ್ ಮುಂಬೈನ ಬೆಳ್ಳಿತೆರೆ ಮತ್ತು ಕಿರುತೆರೆಯಿಂದ ದೂರವಾಗಿ ಎರಡು ವರ್ಷಗಳಾಗಿವೆ. ಬಣ್ಣದ ಲೋಕದ ಸಹವಾಸ ಸಾಕೆನಿಸಿ ಎರಿಕಾ ದುಬೈನಲ್ಲಿ ನೆಲೆಯೂರಿದ್ದಾರೆ. ಅಲ್ಲಿ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಶಾರ್ದೂಲ್ ಪಂಡಿತ್‌ಗೆ ಸಂದರ್ಶನವೊಂದನ್ನು ನೀಡಿರುವ ಎರಿಕಾ ಬಾಲಿವುಡ್‌ನಲ್ಲಿ ಮಲಗಿ ಎದ್ದರೆ ಮಾತ್ರ ಬೆಳೆಯಲು ಸಾಧ್ಯ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಎರಿಕಾ ಬಾಲಿವುಡ್‌ನಲ್ಲಿ ಕೊಡು ಕೊಳ್ಳು ವ್ಯವಹಾರ ಹೆಚ್ಚಿದೆ, ಅವರ ಲೈಂಗಿಕ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಅಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ. ಇನ್ನು, ಬಾಲಿವುಡ್‌ನಲ್ಲಿ ಕೆಲ ವಾಟ್ಸಾಫ್ ಗ್ರೂಪ್‌ಗಳಿವೆ. ಆ ಗ್ರೂಪ್‌ಗಳಲ್ಲಿ ಅವರು ತಾವು ಯಾರ ಜೊತೆ ಮಲಗಿ ಎದ್ದಿದ್ದಾರೆ, ಯಾರ ಜೊತೆ ಮಲಗಬೇಕು ಎಂದುಕೊಂಡಿದ್ದಾರೆ ಎಂದೆಲ್ಲ ಚರ್ಚೆ ಮಾಡುತ್ತಾರೆ ಎಂದು ಹೇಳಿರುವ ಎರಿಕಾ ಹಾಸಿಗೆ ಹಂಚಿಕೊಳ್ಳಲು ಸುಲಭವಾಗಿ ಯಾರು ಒಪ್ಪುತ್ತಾರೆ ಯಾರು ಒಪ್ಪುವುದಿಲ್ಲ ಎಂದು ಕೂಡ ಆ ಗ್ರೂಪ್‌ಗಳಲ್ಲಿ ಚರ್ಚೆಯಾಗುತ್ತೆ ಎಂದು ಹೇಳಿದ್ದಾರೆ. ಈ ಮೂಲಕ ಗ್ರೂಪ್‌ನಲ್ಲಿ ನಟಿಯರ ನಗ್ನ ಸತ್ಯ ಕೂಡ ಬಯಲಾಗುತ್ತೆ ಎಂದು ಹೇಳಿದ್ದಾರೆ.
ಮುಂದುವರೆದು ಹಣ-ಕೀರ್ತಿ-ಅವಕಾಶಕ್ಕೆ ಅನೇಕರು ಬಾಲಿವುಡ್‌ನಲ್ಲಿ ಅಡ್ಡದಾರಿಯನ್ನು ಹಿಡಿಯುತ್ತಾರೆ ಬೆಳೆಯಲು ಮಾಡಬಾರದ್ದನ್ನೆಲ್ಲ ಮಾಡುತ್ತಾರೆ ಎಂದಿರುವ ಎರಿಕಾ ಸುಲಭವಾಗಿ ಸಿಕ್ಕ ಯಶಸ್ಸು ಯಾವತ್ತು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಆತ್ಮ ಸಾಕ್ಷಿಯನ್ನು ಮಾರಿಕೊಂಡು ಯಾವತ್ತು ಕೆಲಸ ಮಾಡಬಾರದು ಎಂದು ಕೂಡ ಹೇಳಿದ್ದಾರೆ. ಹಾಗಂಥ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಅಲ್ಲಲ್ಲಿ ಕೆಲವರು ಮಾತ್ರ ಒಳ್ಳೆಯವರಿದ್ದಾರೆ ಎಂದಿರುವ ಎರಿಕಾ ಹೊರಗಡೆಯಿಂದ ಮಾತ್ರ ಥಳಕು ಬಳಕು ಕಾಣುತ್ತೆ ಒಳ ಹೊಕ್ಕರೆ ಸಂಪೂರ್ಣ ಹುಳುಕಿನಿಂದ ಕೂಡಿದ ಪ್ರಪಂಚವೆಂದು ಹೇಳಿದ್ದಾರೆ.
ಸದ್ಯ ಎರಿಕಾ ಫರ್ನಾಂಡಿಸ್ ಅವರ ಈ ವಾಟ್ಸಾಫ್ ಗ್ರೂಪ್ ಹೇಳಿಕೆ ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಎರಿಕಾ ಅವರ ಈ ಮಾತುಗಳಿಗೆ ತಲೆಯಾಡಿಸಿದ್ದಾರೆ. ಇನ್ನು ಕೆಲವರು ಒಬ್ಬರು ಇಬ್ಬರು ಮಾಡುವ ತಪ್ಪಿಗೆ ಇಡೀ ಚಿತ್ರರಂಗವನ್ನೇ ಬೆಯ್ಯುವುದು ತಪ್ಪು ಎಂದು ಹೇಳಿದ್ದಾರೆ. ಇನ್ನು ಕೆಲವರು ಕುಣಿಯಲಾರದವಳು ನೆಲ ಡೊಂಕೆಂದಳಂತೆ ಹಾಗಾಯ್ತು ನಿಮ್ಮ ಕಥೆ ಎಂದು ಹೇಳುತ್ತಿದ್ದಾರೆ. ಹಾಸಿಗೆ ಹಂಚಿಕೊಳ್ಳಲಾರದೇ ಗೆದ್ದ ಅನೇಕ ನಾಯಕಿಯರು ಚಿತ್ರರಂಗದಲ್ಲಿದ್ದಾರೆ ನಿಮ್ಮಲ್ಲಿ ಪ್ರತಿಭೆ ಇಲ್ಲ ಅದಕ್ಕೆ ನೀವು ಬೆಳೆಯಲು ಸಾಧ್ಯವಾಗಿಲ್ಲ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಈ ಹಿಂದೆ ಕೂಡ ಎರಿಕಾ ತಮ್ಮ ಮನದ ನೋವನ್ನ ಹಂಚಿಕೊಂಡಿದ್ದರು. ಬಾಲಿವುಡ್ ನಲ್ಲಿ ನೆಲೆಯೂರಬೇಕೆಂಬ ಕನಸನ್ನೊತ್ತು, ಮುಂಬೈನಲ್ಲಿ ನಾನು ಸಾಕಷ್ಟು ಅಲೆದಾಡಿದ್ದೆ, ಅನೇಕ ಕಡೆ ಆಡಿಷನ್ ಗಳನ್ನೂ ಕೂಡ ಕೊಟ್ಟು ಬಂದಿದ್ದೆ ಎಂದು ಹೇಳಿದ್ದ ಎರಿಕಾ ಆಡಿಷನ್ ಕೊಟ್ಟ ನಂತರ ನನ್ನ ಅಭಿನಯದಿಂದ ಪ್ರಭಾವಕ್ಕೊಳಗಾದ ಅನೇಕ ನಿರ್ದೇಶಕರು ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂಬ ಆಶ್ವಾಸನೆಯನ್ನೂ ಕೊಟ್ಟು ಕಳಿಸಿದ್ದರು. ಆದರೆ ಆ ನಂತರ ಕೇಳಿದಾಗ ನಿಮ್ಮ ಬದಲು 'ಸ್ಟಾರ್ ಹೀರೋಯಿನ್' ನ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. ಇನ್ನೂ ಹಲವರು 'ಸ್ಟಾರ್ ಕಿಡ್' ಗಳಿಗೆ ಮಣೆಯನ್ನೂ ಹಾಕಿದರು. ಯಾರು ಏನೇ ಹೇಳಲಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಇದ್ದೇ ಇದೆ ಎಂದು ಬಿಕ್ಕಿದ್ದರು.
ಇನ್ನೂ.. ಇದೇ ಸಮಯದಲ್ಲಿ ತನ್ನನ್ನ ಆಡಿಕೊಂಡವರ ಬಗ್ಗೆಯೂ ಎರಿಕಾ ಮಾತನಾಡಿದ್ದಾರೆ. ಅನೇಕರು ನನ್ನ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನೋಡಲು ಒಣ ಕಡ್ಡಿಯಂತೆ ಇರುವ ನೀನು ನಾಯಕಿನಾ..? ಎಂದು ಕಿಂಡಲ್ ಮಾಡಿದರು. ನನ್ನ ಎತ್ತರವನ್ನ ಅಣುಕಿಸಿದರು. ಇದೆಲ್ಲದರ ಪರಿಣಾಮ ಕೆಲ ದಿನ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಕಣ್ಣೀರನ್ನೂ ಹಾಕಿದ್ದರು ಎರಿಕಾ ಫರ್ನಾಂಡಿಸ್.
ಹೀಗೆ ತಮ್ಮ ಬದುಕಿನಲ್ಲಿ ಅಡೆ, ತಡೆ, ನೋವು, ಅವಮಾನಗಳನ್ನ ಎದುರಿಸಿದ ಎರಿಕಾ ಕೊನೆಯದಾಗಿ ಕಿರುತೆರೆಗೆ ಕಾಲಿಡುವ ಮನಸು ಮಾಡಿದರು. ಯಾಕೆಂದರೆ ಖುದ್ದು ಎರಿಕಾ ಹೇಳಿದಂತೆ, ತಲ್ಲಣ ಸೃಷ್ಟಿಯಾಗಿತ್ತು. ಬದುಕಿನ ಅನಿವಾರ್ಯತೆ ಮನಸ್ಥಿತಿಯನ್ನ ಬದಲಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನ ತಾನು ಎರಿಕಾ ಸಾಬೀತು ಮಾಡಿಕೊಳ್ಳಬೇಕಿತ್ತು. ಈ ಕಾರಣಕ್ಕೆ ಕಿರುತೆರೆಗೆ ಕಾಲಿಡಲು ನಿರ್ಧಾರ ಮಾಡಿದೆ ಎಂದು ಹಿಂದೆ ಒಮ್ಮೆ ಹೇಳಿದ್ದ ಎರಿಕಾ ಸದ್ಯ ಬಾಲಿವುಡ್‌ನಿಂದ ಅಂತರ ಕಾಪಾಡಿಕೊಂಡಿದ್ದಾರೆ. ಕಿರುತೆರೆಯಿಂದ ಕೂಡ ದೂರವಾಗಿ ದುಬೈನಲ್ಲಿ ನೆಲೆಸಿದ್ದಾರೆ. 2021ರಲ್ಲಿ ಪ್ರಸಾರವಾದ ಕುಚ್ ರಂಗ್ ಪ್ಯಾರ್ ಕೇ ಐಸೆ ಬಿ ಧಾರಾವಾಹಿಯೇ ಕೊನೆ ಆ ನಂತರ ಎರಿಕಾ ಬೇರೆ ಯಾವ ಧಾರಾವಾಹಿಯಲ್ಲಿ ಕೂಡ ನಟಿಸಿಲ್ಲ. 2017ರಲ್ಲಿ ನಂತರ ಚಿತ್ರಕ್ಕೂ ಕೂಡ ಬಣ್ಣ ಹಚ್ಚಿಲ್ಲ. ಇನ್ನುಳಿದಂತೆ ನಿನ್ನಿಂದಲೇ ನಂತರ ಎರಿಕಾ ಕನ್ನಡದಲ್ಲಿ ಬುಗುರಿ ಚಿತ್ರದಲ್ಲಿ ಕೂಡ ನಟಿಸಿದ್ದರು.


Click it and Unblock the Notifications











