For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಸಂಪ್ರದಾಯದಂತೆ ಇಷಾ ಮದುವೆ

  By Rajendra
  |

  ಒಬ್ಬೊಬ್ಬರಿಗೆ ಒಂದೊಂದು ತರಹ ಮದುವೆಯಾಗಬೇಕು ಎಂಬ ಆಸೆ ಇರುತ್ತದೆ. ಕೆಲವರು ದುಂದು ವೆಚ್ಚವಿಲ್ಲದಂತೆ ಸರಳವಾಗಿ ಮಂಗಳಸೂತ್ರ ಕಟ್ಟುತ್ತಾರೆ. ಆದರೆ ಕೆಲವರು ಇದಕ್ಕೆ ತದ್ವಿರುದ್ಧ. ಇನ್ನೂ ಕೆಲವರು ಆಚಾರ ವಿಚಾರ ಸಂಪ್ರದಾಯಕ್ಕೆ ಬೆಲೆ ನೀಡುತ್ತಾರೆ. ಈ ಮೂರನೇ ಕೆಟಗರಿಗೆ ಸೇರುತ್ತಾರೆ ಒಂದು ಕಾಲದ ಕನಸಿನ ಕನ್ಯೆ ಹೇಮಾ ಮಾಲಿನಿ ಹಿರಿಯ ಪುತ್ರಿ ಇಷಾ ಡಿಯೋಲ್.

  ಮುಂಬೈ ಬಾಂದ್ರಾದ ಉದ್ಯಮಿ ಭರತ್ ತಕ್ತಾನಿ ಕೈಹಿಡಿಯಲಿದ್ದಾರೆ ಇಷಾ ಡಿಯೋಲ್. ಇವರಿಬ್ಬರ ಮದುವೆ ಇದೇ ಜೂ.29ರಂ ದು ನಡೆಯಲಿದೆ. ಮದುವೆ ಬಗ್ಗೆ ಅಮ್ಮ ಮತ್ತು ಮಗಳು ಇಬ್ಬರೂ ವಿವರ ನೀಡಿದ್ದಾರೆ. ದಕ್ಷಿಣ ಭಾತರದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆ ನೆರವೇರಲಿದೆ ಎಂದಿದ್ದಾರೆ.

  ಮದುವೆಯಲ್ಲಿ ಮಹಿಳೆಯರೆಲ್ಲಾ ಕಾಂಜೀವರಂ ಸೀರೆಗಳಲ್ಲಿ ಕಂಗೊಳಿಸಲಿದ್ದಾರಂತೆ. "ಪಕ್ಕಾ ಸೌತ್ ಇಂಡಿಯನ್ ಶೈಲಿಯಲ್ಲಿ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ " ಎಂದಿದ್ದಾರೆ ಹೇಮಾ ಮಾಲಿನಿ. ತಮಿಳು ಐಯ್ಯಂಗಾರಿ ಸಮುದಾಯಕ್ಕೆ ಸೇರಿರುವ ಹೇಮಾ ಮಾಲಿನಿ ಪಂಜಾಬಿ ಧರ್ಮೇಂದ್ರ ಅವರನ್ನು ವರಿಸಿದ್ದರು.

  ಆದರೆ ಹೇಮಾ ಮಾಲಿನಿ ಮದುವೆ ತಾರಾತುರಿಯಲಿ ನಡೆದುಹೋಗಿತ್ತಂತೆ. ತನ್ನ ಮಗಳ ಮದುವೆ ಆ ರೀತಿ ಆಗಬಾರದು, ಎಲ್ಲವೂ ಶಾಸ್ತ್ರೋಕ್ತವಾಗಿ ನಡೆಯಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ದಕ್ಷಿಣದ ಸಂಪ್ರದಾಯಕ್ಕೆ ಶರಣೆಂದಿದ್ದಾರೆ. ವಧುವಿಗೆ ಕಾಂಜೀವರಂ ಸೀರೆಯಲ್ಲಿ ಸಿಂಗರಿಸಲಾಗುತ್ತದೆ ಎಂದಿರುವ ಹೇಮಾ, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

  ಮುಂಬೈನ ಗುಡಿಯೊಂದರಲ್ಲಿ ಇಷಾ ಸಪ್ತಪದಿ ತುಳಿಯಲಿದ್ದಾರೆ.ಅಂದಹಾಗೆ ಇಷಾ ಡಿಯೋಲ್ ಹಾಗೂ ಭರತ್ ಅವರದು ಪ್ರೇಮ ವಿವಾಹ. ಕಳೆದ ಕೆಲವು ವರ್ಷಗಳಿಂದ ಗಾಢವಾಗಿ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದ ಇವರು ಈಗ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ.

  ಮದುವೆಗೆ ಸೀಮಿತ ಸಂಖ್ಯೆಯ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುತ್ತಿದೆ ಎಂದು ಹೇಮಾ ಮಾಲಿನಿ ತಿಳಿಸಿದ್ದಾರೆ. ಮದುವೆ ಕೆಲಸಗಳು ಭರದಿಂದ ಸಾಗುತ್ತಿವೆ. ಮದುವೆ ಬಳಿಕ ಜೂ. 30ರಂದು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಎಲ್ಲರಿಗೂ ವಿವಾಹ ಭೋಜನ ಹಾಕಿಸಲಿದ್ದಾರೆ ಧರ್ಮೇಂದ್ರ ದಂಪತಿಗಳು.

  ವಿವಾಹ ಭೋಜನ ಸಮಾರಂಭಕ್ಕೆ ಸಿನಿಮಾ ತಾರೆಗಳು, ರಾಜಕೀಯ ಧುರೀಣರು ಹಾಗೂ ಉದ್ಯಮಿಗಳನ್ನು ಆಹ್ವಾನಿಸಲಾಗುತ್ತಿದೆ ಎಂಬ ವಿವರಗಳನ್ನು ಹೇಮಾ ಮಾಲಿನಿ ನೀಡಿದ್ದಾರೆ. ಸದ್ಯಕ್ಕೆ ಧರ್ಮೇಂದ್ರ ಯುಎಸ್‌ನಲ್ಲಿದ್ದು, ತಮ್ಮ ಮಗಳ ಮದುವೆ ನಿಮಿತ್ತ ಅವರು ಶೀಘ್ರದಲ್ಲೇ ಭಾರತಕ್ಕೆ ಆಗಮಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Veteran actress Hema Malini has divulged some wedding details about her elder daughter Esha Deol. She will have typical south Indian style of wedding and everybody will be in Kanjivaram saris. Esha Deol to tie the knot on 29th June with her fiance Bharat Takhtani. The marriage will be held at a temple in Subarban Mumbai.
  Friday, June 15, 2012, 15:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X