»   » ಟಾಪ್ ಲೆಸ್ ನಟಿಯ ಈ ಹೇಳಿಕೆ ಎಲ್ಲರ ಬಾಯಿಗೆ ಬೀಗ ಹಾಕಿದೆ

ಟಾಪ್ ಲೆಸ್ ನಟಿಯ ಈ ಹೇಳಿಕೆ ಎಲ್ಲರ ಬಾಯಿಗೆ ಬೀಗ ಹಾಕಿದೆ

Posted By:
Subscribe to Filmibeat Kannada

ಕಳೆದ ಕೆಲ ದಿನಗಳಿಂದ ಬಾಲಿವುಡ್ ಲೋಕದಲ್ಲಿ ನಟಿ ಇಶಾ ಗುಪ್ತಾ ಅವರದ್ದೇ ಚರ್ಚೆ, ಸುದ್ದಿ, ಸೌಂಡ್ ಎಲ್ಲವೂ. ಯಾಕಂದ್ರೆ, ಸಾಮಾಜಿಕ ಜಾಲತಾಣ, ಇನ್ಸ್ಟಾಗ್ರಾಂ ನಲ್ಲಿ ಇಶಾ ಗುಪ್ತಾ ತಮ್ಮ ಬೆತ್ತಲೆ ದೇಹದ ದರ್ಶನ ನೀಡಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದರು.

ಕೇವಲ ಒಂದೋ ಅಥವಾ ಎರಡು ಫೋಟೋ ಹಾಕಿ ಸುಮ್ಮನಾಗದ ನಟಿ ಸಾಲು ಸಾಲು ಚಿತ್ರಗಳನ್ನ ಪೋಸ್ಟ್ ಮಾಡಿದ್ದರು. ಒಂದಕ್ಕಿಂತ ಒಂದು ಫೋಟೋಗಳು ಅತ್ಯಂತ ಮಾದಕವಾಗಿದ್ದವು.

Esha Gupta on her bold photoshoot

ಇಶಾ ಗುಪ್ತಾರ ಈ ಚಿತ್ರಗಳ ಕುರಿತು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಕಾಮೆಂಟ್ ಗಳ ಮೂಲಕ ಇಶಾ ಅವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರ ಕೊಟ್ಟಿರುವ ಇಶಾ ''ನಾನು ಕಾಮೆಂಟ್ ಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನ್ನ ಫೋಟೋಗಳನ್ನ ಅಶ್ಲೀಲ ಎನ್ನುವುದಕ್ಕೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ.

''ನಾನು ಈ ಚಿತ್ರ ಹಾಕುವಾಗಲೇ ಟೀಕೆಗಳು ಬರುತ್ತೆ ಎಂಬ ಅರಿವಿತ್ತು. ಆದರೆ ಇದ್ಯಾವುದಕ್ಕೂ ನಾನು ತಲೆಕಡಿಸಿಕೊಳ್ಳುವುದಿಲ್ಲ. ನಾನು ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ಈ ರೀತಿಯ ಫೋಟೋಶೂಟ್ ನಲ್ಲಿ ಮಾಡಿದ್ದೀನಿ. ಆಗ ಯಾರು ಈ ರೀತಿ ಕಾಮೆಂಟ್ ಮಾಡಿರಲಿಲ್ಲ. ಹೀಗೇಕೆ ಈ ಬಗ್ಗೆ ಚರ್ಚೆ'' ಎಂದಿದ್ದಾರೆ.

Tanushree Dutta Bollywood Actress Turned Into Saint | Filmibeat Kannada

ಅಕ್ಷಯ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದಲ್ಲಿ ಇಶಾ ಗುಪ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅಜಯ್ ದೇವಗನ್, ಇಲಿಯಾನಾ ಅರೊಂದಿಗೆ Baadshaho ಚಿತ್ರದ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದಾರೆ.

English summary
'No one can say my pictures are vulgar' says Bollywood Actress Esha Gupta.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada