ಮದುವೆಯಾಗಿ ಕೇವಲ 5 ವರ್ಷಕ್ಕೆ ಡಿವೋರ್ಸ್ ಘೋಷಿಸಿದ ನಟಿ; ಮಕ್ಕಳ ಬಗ್ಗೆ ದಿಟ್ಟ ನಿರ್ಧಾರ

ಇತ್ತೀಚಿನ ವರ್ಷಗಳಲ್ಲಿ ಮದುವೆಗಿಂತ ಡಿವೋರ್ಸ್ ಸುಲಭ ಎನ್ನುವಂತಾಗಿದೆ. ಕೋಟಿ ಕೋಟಿ ಖರ್ಚು ಮಾಡಿ ಹಸೆಮಣೆ ಏರಿದವರು ಕೆಲವೇ ದಿನಗಳಲ್ಲಿ ಕೋರ್ಟ್ ಮೆಟ್ಟಿಲೇರಿಬಿಡುತ್ತಾರೆ. ಭಿನ್ನಾಭಿಪ್ರಾಯಗಳಿಂದ ದೂರಾಗಿಬಿಡುತ್ತಾರೆ. ಬಳಿಕ ಪಶ್ಚಾತ್ತಾಪ ಪಡುವವರು ಇದ್ದಾರೆ. ಸಿನಿಮಾ ನಟ, ನಟಿಯರ ಡಿವೋರ್ಸ್ ವಿಚಾರ ದೊಡ್ಡದಾಗಿ ಸದ್ದು ಮಾಡುತ್ತದೆ.

ಇಂಡೊ- ಜರ್ಮನ್​ ನಟಿ ಎವ್ಲಿನ್​ ಶರ್ಮಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಕಳೆದ ಏಳೆಂಟು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಆಕೆ ನಟಿಸಲಿಲ್ಲ. ಆಸ್ಟ್ರೇಲಿಯಾ ಮೂಲದ ದಂತ ವೈದ್ಯ ಮತ್ತು ಉದ್ಯಮಿ ತುಷಾನ್ ಭಿಂಡಿ ಎಂಬುವವರ ಜೊತೆ 5 ವರ್ಷಗಳ ಹಿಂದೆ ಎವ್ಲಿನ್ ಮದುವೆ ಆಗಿದ್ದರು. ಇದೀಗ ಆಕೆ ಡಿವೋರ್ಸ್ ಘೋಷಿಸಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಆಕೆ ಮಾಹಿತಿ ನೀಡಿದ್ದಾರೆ.

Evelyn Sharma Announces Divorce from Tushaan Bhindi After 5 Years of Marriage

ಪಂಜಾಬಿ ಹಿಂದೂ ತಂದೆ ಹಾಗೂ ಜರ್ಮನ್ ತಾಯಿಗೆ ಮಗಳಾಗಿ ಹುಟ್ಟಿದ ಎವ್ಲಿನ್​ ಶರ್ಮಾ ಜರ್ಮನ್ ಪೌರತ್ವವನ್ನೇ ಹೊಂದಿದ್ದಾರೆ. 'ಟರ್ನ್ ಲೆಫ್ಟ್' ಎಂಬ ಹಾಲಿವುಡ್ ಸಿನಿಮಾದಲ್ಲಿ ಆಕೆ ಮೊದಲಿಗೆ ನಟಿಸಿದ್ದರು. 2012ರಲ್ಲಿ 'ಫ್ರಂ ಸಿಡ್ನಿ ವಿಥ್ ಲವ್' ಎಂಬ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಮುಂದೆ 'ಯೇ ಜವಾನಿ ಹೇ ದಿವಾನಿ', 'ಇಸಾಕ್', 'ಯಾರಿಯಾನ್', 'ಗದ್ದರ್' ಹಾಗೂ 'ಹಿಂದಿ ಮೀಡಿಯಂ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದರು.

ಪ್ರಭಾಸ್ ನಟನೆಯ 'ಸಾಹೋ' ಚಿತ್ರದಲ್ಲಿ ಜೆನ್ನಿಫರ್ ಎಂಬ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ತುಷಾನ್ ಭಿಂಡಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಸ್ನೇಹಿತನ ಜೊತೆ ಮದುವೆ ಆಗಿ ಬದುಕುವುದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಈಗ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ. ಆದರೆ ಒಟ್ಟಾಗಿ ಮಕ್ಕಳನ್ನು ಬೆಳೆಸುವ ನಿರ್ಧಾರಕ್ಕೆ ಬಂದಿದ್ದಾರೆ.

"ನಾವು ರೊಮ್ಯಾಂಟಿಕಲಿ ಬೇರೆಯಾಗಲು ನಿರ್ಧರಿಸಿದ್ದೇವೆ ಆದರೆ ನಮ್ಮ ಮಕ್ಕಳನ್ನು ಒಟ್ಟಿಗೆ ಬೆಳೆಸುವತ್ತ ಹೆಚ್ಚು ಗಮನಹರಿಸಿದ್ದೇವೆ. ನಾವು ಗೌಪ್ಯತೆಯನ್ನು ಬಯಸುತ್ತೇವೆ ಮತ್ತು ಇದನ್ನು ಸಾಧ್ಯವಾದಷ್ಟು ಸೌಹಾರ್ದಯುತವಾಗಿ ನಿಭಾಯಿಸುತ್ತೇವೆ.ನಾವು ಈ ಹೊಸ ಅಧ್ಯಾಯವನ್ನು ಜೀವಮಾನದ ಸ್ನೇಹ ಮತ್ತು ಸಹ-ಪೋಷಕರ ಮೇಲೆ ನಿರ್ಮಿಸುತ್ತಿದ್ದೇವೆ. ನಾವು ಈ ಹೊಸ ಅಧ್ಯಾಯವನ್ನು ಜೀವಮಾನದ ಸ್ನೇಹ ಮತ್ತು ಸಹ-ಪೋಷಕರಾಗಿ ಮಕ್ಕಳನ್ನು ಸಾಕುವುದರ ಮೂಲಕ ನಿರ್ಮಿಸುತ್ತಿದ್ದೇವೆ" ಎಂದು ಎವ್ಲಿನ್​ ಶರ್ಮಾ ಮಾಹಿತಿ ನೀಡಿದ್ದಾರೆ.

ನಟಿ ಎವ್ಲಿನ್​ ಶರ್ಮಾಗೆ ಅವಾ ರಾನಿಯಾ ಭಿಂಡಿ ಎಂಬ ಹೆಸರಿನ ಮಗಳು ಹಾಗೂ ಆರ್ಡೆನ್ ಹೆಸರಿನ ಮಗ ಇದ್ದಾನೆ. ಸಾಮಾನ್ಯವಾಗಿ ಗಂಡ ಹೆಂಡತಿ ಡಿವೋರ್ಸ್ ಪಡೆದು ದೂರಾಗುವಾಗ ಮಕ್ಕಳ ಕಥೆ ಏನು ಎನ್ನುವ ಪ್ರಶ್ನೆ ಮೂಡುತ್ತದೆ. ನಾವಿಬ್ಬರು ಇನ್ನು ಮುಂದೆ ಒಬ್ಬರ ಮುಖ ಮತ್ತೊಬ್ಬರು ನೋಡಲ್ಲ ಎಂದು ದೂರಾಗಿಬಿಡುತ್ತಾರೆ. ಮಕ್ಕಳು ಅಮ್ಮನ ಬಳಿ ಇರಬೇಕೋ, ಅಪ್ಪನ ಬಳಿ ಇರಬೇಕೊ ಎನ್ನುವ ಗೊಂದಲ ಶುರುವಾಗುತ್ತದೆ. ಚಿಕ್ಕ ಮಕ್ಕಳಾಗಿದ್ದರೆ ಅಮ್ಮನ ಬಳಿ ಇರಬೇಕು ಎಂದು ನ್ಯಾಯಾಲಯವೇ ಹೇಳುತ್ತದೆ. ಇದೇ ಕಾರಣಕ್ಕೆ ಭಾರೀ ಕಿರಿಕ್ ಆಗುವುದು ಇದೆ. ಆದರೆ ಎವ್ಲಿನ್ ಹಾಗೂ ತುಷಾನ್ ಒಟ್ಟಾಗಿ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

2019ರ ಅಕ್ಟೋಬರ್‌ನಲ್ಲಿ ಎವ್ಲಿನ್ ಹಾಗೂ ತುಷಾನ್ ಜೋಡಿಯ ಎಂಗೇಜ್‌ಮೆಂಟ್ ಆಗಿತ್ತು. ಮೇ 2021ರ ಮೇ 15ರಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಸರಳವಾಗಿ ಮದುವೆ ನಡೆದಿತ್ತು. ತಿಂಗಳ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಹಂಚಿಕೊಂಡು ಆಕೆ ಮಾಹಿತಿ ನೀಡಿದ್ದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರ ಮದುವೆ ನಡೆದಿತ್ತು. ಸಾಮಾನ್ಯವಾಗಿ ತಾರೆಯರು ಡಿವೋರ್ಸ್ ಮುನ್ನ ತಮ್ಮ ಮದುವೆ ಫೋಟೊಗಳನ್ನು ಡಿಲೀಟ್ ಮಾಡುತ್ತಾರೆ. ತಮ್ಮಿಬ್ಬರ ಆತ್ಮೀಯ ಕ್ಷಣಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡ್ತಾರೆ. ಆದರೆ ಎವ್ಲಿನ್ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆ ಫೋಟೊಗಳನ್ನು ತೆಗೆದಿಲ್ಲ.

Read more about: actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X