ಅಕ್ಷಯ್ ಕುಮಾರ್ ಸಿನಿಮಾ ಪೋಸ್ಟರ್‌ನಲ್ಲಿ ತಪ್ಪು: ತಿದ್ದಿಕೊಳ್ಳುತ್ತೇವೆ ಎಂದ ನಟ

ನಟ ಅಕ್ಷಯ್ ಕುಮಾರ್ ಕೆಲವು ದಿನಗಳ ಹಿಂದಷ್ಟೆ ತಮ್ಮ ಹೊಸ ಸಿನಿಮಾ 'ಗೋರ್ಖಾ'ದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಭಾರತೀಯ ಸೇನೆಯ ಗೋರ್ಖಾ ವಿಭಾಗದ ಸೈನಿಕನ ಸಮವಸ್ತ್ರದಲ್ಲಿ ಇಂಟೆನ್ಸ್ ಆದ ಫೋಸ್ ನೀಡಿದ್ದಾರೆ ಅಕ್ಷಯ್ ಕುಮಾರ್.

ಗೋರ್ಖಾ ರೆಜಿಮೆಂಟಿನ ಸೈನಿಕರು ತಮ್ಮ ಬಳಿ ಕುಕ್ರಿ ಹೆಸರಿನ ಚಾಕುವನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಅಂತೆಯೇ ಗೋರ್ಖಾ ಸೈನಿಕನ ಪಾತ್ರ ಮಾಡುತ್ತಿರುವ ಅಕ್ಷಯ್ ಕುಮಾರ್ ಕೈಯಲ್ಲಿ ಚಾಕು ಹಿಡಿದಿರುವ ಚಿತ್ರವನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಹಲವರು ಸಿನಿಮಾದ ಪೋಸ್ಟರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಪೋಸ್ಟರ್‌ನಲ್ಲಿದ್ದ ತಪ್ಪನ್ನು ಮಾಜಿ ಸೈನಿಕರೊಬ್ಬರು ಕಂಡು ಹಿಡಿದಿದ್ದಾರೆ.

ಆದರೆ ಪೋಸ್ಟರ್‌ನಲ್ಲಿ ಅಕ್ಷಯ್ ಕುಮಾರ್ ಹಿಡಿದಿರುವ ಚಾಕು ಗೋರ್ಖಾ ಸೈನಿಕರು ಹೊಂದುವ ಕಕ್ರಿ ಚಾಕುವಲ್ಲ ಎಂಬುದನ್ನು ಮಾಜಿ ಸೈನ್ಯಾಧಿಕಾರಿ ಮಾಣಿಕ್ ಎಂ ಜೋಲಿ ಎಂಬುವರು ಗುರುತು ಹಿಡಿದು ಅಕ್ಷಯ್ ಕುಮಾರ್‌ಗೆ ಟ್ವೀಟ್ ಮಾಡಿದ್ದಾರೆ. ''ನಾನೊಬ್ಬ ಮಾಜಿ ಗೋರ್ಖಾ ಅಧಿಕಾರಿ ಆಗಿದ್ದು, ನೀವು ಈ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಆದರೆ ಸತ್ಯಗಳು ಯಾವಾಗಲೂ ಸತ್ಯಗಳೇ ಆಗಿರಬೇಕು. ಪೋಸ್ಟರ್‌ನಲ್ಲಿ ನೀವು ಹಿಡಿದಿರುವ ಆಯುಧ ಗೋರ್ಖಾ ಸೈನಿಕರು ಹಿಡಿಯುವ ಕುಕ್ರಿ ಅಲ್ಲ. ಕುಕ್ರಿಯ ಒಳಗಿನ ಭಾಗ ಹರಿತವಾಗಿರುತ್ತದೆ. ನೀವು ಹಿಡಿದಿರುವ ಆಯುಧದಲ್ಲಿ ಹೊರಗಿನ ಭಾಗ ಹರಿತವಾಗಿದೆ'' ಎಂದಿದ್ದಾರೆ.

 Ex Army Officer Pointed Out Mistake In Akshay Kumar New Movies Poster

ಮಾಜಿ ಸೈನ್ಯಾಧಿಕಾರಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅಕ್ಷಯ್ ಕುಮಾರ್, ''ಪ್ರೀತಿಯ ಮೇಜರ್ ಜಾಲಿ ಅವರೇ, ಈ ತಪ್ಪು ಗುರುತಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಚಿತ್ರೀಕರಣ ಮಾಡುವಾಗ ಇಂಥಹಾ ಸಂಗತಿಗಳ ಬಗ್ಗೆ ನಾವು ಹೆಚ್ಚು ಗಮನವಹಿಸುತ್ತೇವೆ. 'ಗೋರ್ಖಾ' ಸಿನಿಮಾ ಮಾಡುತ್ತಿರುವುದಕ್ಕೆ ನಾನು ಬಹಳ ಹೆಮ್ಮೆಯಿಂದಿದ್ದೀನಿ. ಸಿನಿಮಾವನ್ನು ನಿಜಕ್ಕೆ ಹತ್ತಿರದಲ್ಲಿರುವಂತೆ ನಿರ್ಮಾಣ ಮಾಡಲು ಸಲಹೆ ನೀಡಿದರೆ ನಾವು ಸ್ವಾಗತಿಸುತ್ತೇವೆ'' ಎಂದಿದ್ದಾರೆ.

 Ex Army Officer Pointed Out Mistake In Akshay Kumar New Movies Poster

'ಗೋರ್ಖಾ' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ವೀರ ಯೋಧ ಇಯನ್ ಕಾರ್ಡೋಸೊ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಯನ್ ಕಾರ್ಡೋಸೊ ಹೇಗೆ ವೀರಾವೇಷದಿಂದ ಯುದ್ಧದಲ್ಲಿ ಹೋರಾಡಿದರು ಎಂದು ತೋರಿಸುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗುತ್ತಿದೆ.

ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಂ', 'ರಕ್ಷಾ ಬಂಧನ್', 'ಅತರಂಗಿ', 'ರಾಮ್ ಸೇತು' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಈ ನಡುವೆ 'ಗೋರ್ಖಾ', 'ಬಚ್ಚನ್ ಪಾಂಡೆ, 'ಮಹಿಳಾ ಮಂಡಲಿ', 'ಪೃಥ್ವಿರಾಜ್', 'ರೌಡಿ ರಾಥೋಡ್ 2', 'ಡ್ರೈವಿಂಗ್ ಲೈಸೆನ್ಸ್', 'ಹೇರಾ ಪೇರಿ 3', 'ಓಹ್ ಮೈ ಗಾಡ್ 2', 'ಮಿಷನ್ ಸಿಂಡ್ರೆಲಾ' ಸಿನಿಮಾಗಳಲ್ಲಿ ನಟಿಸಲಿದ್ದಾರೆ.

More from Filmibeat

English summary
A Ex army officer pointed out mistake in Akshay Kumar's new movie 'Gorkha' poster. Akshay Kumar replied to ex army officer and thanked him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X