ಮಾಜಿ ಬಿಗ್‌ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಬಂಧನ
ವಿಡಿಯೋ ಮೀಮ್‌ಗಳಲ್ಲಿ 'ರುಕೋ ಜರಾ, ಸಬರ್ ಕರೋ' ಎಂದು ಹೇಳುವ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣ ಬಳಸುವವರು ನೋಡಿಯೇ ಇರುತ್ತಾರೆ ಆತನ ಹೆಸರು ವಿಕಾಸ್ ಪಾಟಕ್ ಅಲಿಯಾಸ್ ಹಿಂದುಸ್ಥಾನಿ ಭಾವ್. ಆತನನ್ನು ಇಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ.
12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಬೇಕು. ಎಲ್ಲ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಮಾಫಿ ಮಾಡಬೇಕೆಂದು ಒತ್ತಾಯಿಸಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಭಾವ್ ಇಂದು ಪ್ರತಿಭಟನೆ ಮಾಡಿದರು. ಲಾಕ್‌ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ ಭಾವ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿಸುವ ಮುಂಚೆ ಮಾತನಾಡಿದ ಭಾವ್, 'ಕೊರೊನಾದಿಂದಾಗಿ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಗಳು ಮಕ್ಕಳ ಜೀವದೊಂದಿಗೆ, ಪೋಷಕರ ಜೀವದೊಂದಿಗೆ ಆಟವಾಡುತ್ತಿವೆ' ಎಂದಿದ್ದಾರೆ.

'ದಯವಿಟ್ಟು ಮಕ್ಕಳ ಪರೀಕ್ಷೆಗಳನ್ನು ರದ್ದು ಮಾಡಿ. ಎಲ್ಲ ಖಾಸಗಿ ಶಾಲೆಗಳ ಶುಲ್ಕವನ್ನು ಈ ವರ್ಷ ಮನ್ನಾ ಮಾಡಿ. ಕೊರೊನಾ ಇಲ್ಲವಾದ ಬಳಿಕ ನೀವು ಬೇಕಾದರೆ ಮಕ್ಕಳಿಗೆ ಪರೀಕ್ಷೆ ಮಾಡಿ. ಆದರೆ ಈಗ ಮಕ್ಕಳ ಜೀವದೊಂದಿಗೆ ಆಟವಾಡಬೇಡಿ' ಎಂದಿದ್ದಾರೆ ಭಾವ್.
ಹಿಂದುಸ್ಥಾನಿ ಭುವ ಫೇಸ್‌ಬುಕ್ ವಿಡಿಯೋಗಳಿಂದ ಖ್ಯಾತಿ ಗಳಿಸಿದವರು. ಕಾರಿನಲ್ಲಿ ಕೂತುಕೊಂಡು ದೇಶದ ಪ್ರಚಲಿತ ವಿಷಯಗಳ ಬಗ್ಗೆ ಅದರಲ್ಲಿಯೂ ರಾಜಕೀಯ ವಿಷಯಗಳ ಬಗ್ಗೆ ವಿಡಿಯೋ ಮಾಡುತ್ತಿದ್ದ ಭಾವ್ ಅತ್ಯಂತ ಹೊಲಸು ಭಾಷೆ ಬಳಸಿ ಬೈಯುತ್ತಿದ್ದರು. ಇದೇ ಕಾರಣಕ್ಕೆ ಹಲವು ಬಾರಿ ಇವರ ಮೇಲೆ ದೂರು ಸಹ ದಾಖಲಾಗಿತ್ತು.
Recommended Video
ಬೈಗುಳಗಳಿಂದಲೇ ಖ್ಯಾತಿ ಪಡೆದಿದ್ದ ಭಾವ್ ಅದೇ ಖ್ಯಾತಿಯಿಂದ ಹಿಂದಿ ಬಿಗ್‌ಬಾಸ್‌ಗೂ ಸಹ ಪ್ರವೇಶ ಗಿಟ್ಟಿಸಿಕೊಂಡರು. ಹಿಂದಿ ಬಿಗ್‌ಬಾಸ್ ಸೀಸನ್ 13 ರಲ್ಲಿ ಭುವ ಭಾಗವಹಿಸಿದ್ದರು.


Click it and Unblock the Notifications











