'ಕಲಿಯುವ' ವಯಸ್ಸು ಮೀರಿದರೂ 'ಪರಿಕ್ಷೆ' ಬರೆಯುತ್ತಳೇ ಇದ್ದಾಳೆ ಮಾಜಿ ನೀಲಿ ತಾರೆ ..!

ನೀಲಿತಾರೆಯಾಗಿ ಗುರುತಿಸಿಕೊಂಡು ಪಡ್ಡೆ ಹೈಕ್ಳಿಗೆ ತನ್ನ ಮೈಮಾಟದ ಸಿಹಿ ಹಂಚಿದ್ದ ಚೆಲುವೆ ಸನ್ನಿ ಲಿಯೋನ್. ಬಳಿಕ ಪೋರ್ನ್ ಜಗತ್ತನ್ನು ತೊರೆದು ಬಣ್ಣದ ಲೋಕಕ್ಕೂ ಎಂಟ್ರಿ ಕೊಟ್ಟ ಸನ್ನಿಲಿಯೋನ್ ಬೇಡಿಕೆಯಲ್ಲಿರುವ ನಟಿಯರಿಗೆ ಸೆಡ್ಡು ಹೊಡೆಯುವ ಮೂಲಕ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಹಿಂದಿ ಅಷ್ಟೇ ಅಲ್ಲ ಕನ್ನಡವೂ ಸೇರಿ ದಕ್ಷಿಣದ ಬೇರೆ ಭಾಷೆಗಳಲ್ಲಿಯೂ ಬಣ್ಣ ಹಚ್ಚಿದರು. ಇಲ್ಲಿನ ಕಲಾರಸಿಕರ ಮನಸನ್ನೂ ಗೆದ್ದರು.

ಇಂಥಹ ಸನ್ನಿ ಲಿಯೋನ್ ಅವರ ಹೆಸರನ್ನ ಕಾಲ ಕಾಲಕ್ಕೆ ಭಾರತದ ಕಾಲೇಜ್ ಗಳಲ್ಲಿ, ಪರೀಕ್ಷಾ ಕೇಂದ್ರಗಳಲ್ಲಿ ಬಳಿಸಿಕೊಳ್ಳಲಾಗಿದೆ. ಇದಕ್ಕೆ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಮತ್ತೊಂದು ಉದಾಹರಣೆ

Exam Admit Card With Sunny Leone Goes Viral

ಹೌದು, ಉತ್ತರ ಪ್ರದೇಶದ ಯುಪಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶಪತ್ರವೊಂದರಲ್ಲಿ ಸನ್ನಿ ಲಿಯೋನ್ ಚಿತ್ರ ಇರುವುದು ಕಂಡು ಬಂದಿದೆ. ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದೆ. ಪೋಸ್ಟ್ ವೈರಲ್ ಆದ ಬೆನ್ನಲ್ಲಿಯೇ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶವನ್ನೂ ನೀಡಿದೆ.

ಕನೌಜ್ ಜಿಲ್ಲೆಯ ತಿರ್ವಾ ಪಟ್ಟಣ ಪ್ರದೇಶದಲ್ಲಿರುವ ಸೋನಶ್ರೀ ಬಾಲಕಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಇದು ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ. ಯಾರೋ ಇದನ್ನು ವೈರಲ್ ಮಾಡಲೆಂದೆ ಈ ರೀತಿ ಮಾಡಿದ್ದಾರೆ ಎಂದು ಅವರು ಶಂಕಿಸಿದ್ದಾರೆ.

ಆದರೆ ವಾಸ್ತವದಲ್ಲಿ ಅಡ್ಮಿಟ್ ಕಾರ್ಡ್‌ನಲ್ಲಿ ಬರೆದಿರುವ ಫೋನ್ ನಂಬರ್‌ ಮಾಹಿತಿ ತೆಗೆದುಕೊಂಡಾಗ, ವಿದ್ಯಾರ್ಥಿ ಅಂಕಿತ್ ಅವರು ಸಾರ್ವಜನಿಕ ಸೇವಾ ಕೇಂದ್ರದಿಂದ ಅರ್ಜಿಯನ್ನು ಭರ್ತಿ ಮಾಡಿರುವುದು ಪತ್ತೆಯಾಗಿದೆ. ಆದರೆ ಫೋಟೋ ಅದಲು ಬದಲಾಗಿದ್ಹೇಗೆ ಎಂಬ ಪ್ರಶ್ನೆ ಸದ್ಯಕ್ಕೆ ಖಾಕಿ ಪಡೆಗೆ ಕಾಡ್ತಿದೆ.

Exam Admit Card With Sunny Leone Goes Viral

ಇನ್ನೂ ಈ ಫೋಟೋ ಪ್ರಹಸನದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಅಂಕಿತ್ ಪರದಾಡಿದ್ದಾರೆ ಅನ್ನುವ ಸುದ್ದಿಯೂ ಇದೆ. ಈ ಪ್ರವೇಶ ಪತ್ರದಲ್ಲಿ ನಮೂದಿಸಿರುವ ವಿಳಾಸ ಮುಂಬೈ. ಆದರೆ ನೋಂದಣಿ ಸಮಯದಲ್ಲಿ ತವರು ಜಿಲ್ಲೆಯನ್ನು ಕನ್ನೌಜ್ ಎಂದು ಉಲ್ಲೇಖಿಸಲಾಗಿದ್ದು, ಕಾಲೇಜು ಆಡಳಿತ ಮಂಡಳಿ ಪ್ರಕಾರ, ಈ ಪ್ರವೇಶ ಪತ್ರದಲ್ಲಿ ಯಾವುದೇ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಲಿಲ್ಲ.ಸದ್ಯಕ್ಕೆ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಉತ್ತರದ ಪ್ರದೇಶದ ಪೊಲೀಸರು ಈ ಕೃತ್ಯವನ್ನು ಎಸಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನ ಪರೀಕ್ಷೆ ಪ್ರವೇಶ ಪತ್ರದಲ್ಲಿಯೂ ಇತ್ತು ಸನ್ನಿ ಹೆಸರು..!

ಬೇರೆ ರಾಜ್ಯದ ಕಥೆ ಬಿಡಿ, 2022ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಟಿಇಟಿ (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಯ ಪ್ರವೇಶ ಪತ್ರಿಕೆ (ಹಾಲ್ ಟಿಕೆಟ್) ನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಯ ಭಾವ ಚಿತ್ರದ ಬದಲಿಗೆ ಸನ್ನಿ ಲಿಯೋನ್ ಅವರ ಭಾವ ಚಿತ್ರವನ್ನ ಮುದ್ರಿಸಿ, ಶಿಕ್ಷಣ ಇಲಾಖೆ ಮುಜುಗರಕ್ಕೊಳಗಾಗಿತ್ತು.

ಸನ್ನಿ ಲಿಯೋನ್ ಅವರ ತೆರೆದೆದೆಯ ಭಾವ ಚಿತ್ರವುಳ್ಳ ಹಾಲ್‌ ಟಿಕೆಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಲೂ ಕೂಡ ಬಹಳ ವೈರಲ್ ಆಗಿತ್ತು. ಕೆಲವರು ಈ ಲೋಪಕ್ಕೆ ಶಿಕ್ಷಣ ಇಲಾಖೆಯನ್ನು ದೂಷಿಸಿದ್ದರು ಕೂಡ. ಹೀಗಾಗಿ ಅವತ್ತು ಇದಕ್ಕೆ ಸೂಕ್ತ ಸ್ಪಷ್ಟನೆ ನೀಡಿದ್ದ ಶಿಕ್ಷಣ ಇಲಾಖೆ, ''ಟಿಇಟಿ ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿ ಆನ್‌ಲೈನ್‌ನಲ್ಲಿ ತಾನೇ ಲಾಗಿನ್ ಐಡಿ, ಪಾಸ್‌ವರ್ಡ್‌ ಸೃಷ್ಟಿಸಿಕೊಂಡು ಲಾಗಿನ್ ಆಗಿ ತನ್ನ ಪೂರ್ಣ ಮಾಹಿತಿ ತುಂಬುತ್ತಾನೆ. ಆತನ ಫೋಟೊವನ್ನೂ ಸಹ ಆತನೇ ಅಪ್‌ಲೋಡ್‌ ಮಾಡುತ್ತಾನೆ. ಇದರಲ್ಲಿ ಶಿಕ್ಷಣ ಇಲಾಖೆಯ ಯಾವ ಪಾತ್ರವೂ ಇರುವುದಿಲ್ಲ'' ಎಂದು ಹೇಳಿತ್ತು

Exam Admit Card With Sunny Leone Goes Viral

ಕೋಲ್ಕತ್ತಾ ಕಾಲೇಜ್ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್..!

ಸನ್ನಿ ಲಿಯೋನ್ ಹೆಸರನ್ನ ಇದೇ ಮೊದಲ ಬಾರಿ ದುರ್ಬಳಕೆ ಮಾಡಿಕೊಳ್ಳಲಾಗಿಲ್ಲ. ಈ ಹಿಂದೆಯೂ ಸನ್ನಿ ಲಿಯೋನ್ ಹೆಸರು ಅನೇಕ ಕಡೆ ಕಂಡು ಬಂದಿದೆ. ಇದಕ್ಕೆ ಇನ್ನೊಂದು ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹಿಂದೆ ಕೊಲ್ಕತ್ತಾದ ಅಶುತೋಷ್ ಕಾಲೇಜಿನ ಪ್ರವೇಶ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಕಾಣಿಸಿಕೊಂಡಿತ್ತು. ಕಾಲೇಜಿನ ಪ್ರವೇಶ ಮೆರಿಟ್ ಪಟ್ಟಿಯಲ್ಲಿದ್ದ ಪ್ರಕಾರ ಸನ್ನಿ ಹೆಸರಿನಲ್ಲಿ ಇಂಗ್ಲೀಷ್ ಬಿಎ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ನಂ.1 ಸ್ಥಾನದಲ್ಲಿಯೂ ಇತ್ತು. ಇನ್ನೂ ವಿಶೇಷ ಅಂದರೆ ಸನ್ನಿ ಲಿಯೋನ್ ಹೆಸರಿನಲ್ಲಿರುವ ಮಾರ್ಕ್ಸ್ ಕಾರ್ಡ್ ನಲ್ಲಿ 12ನೇ ತರಗತಿಯಲ್ಲಿ ನಾಲ್ಕು ವಿಷಯಗಳಲ್ಲಿ ಸನ್ನಿ ಲಿಯೋನ್ 400ಕ್ಕೆ 400 ಅಂಕ ಪಡೆದಿದ್ದರು. ಈ ಬಗ್ಗೆ ಕಾಲೇಜ್ ವೆಬ್ ಸೈಟ್ ನಲ್ಲಿ ಮಾಹಿತಿ ಕೂಡ ಬಹಿರಂಗವಾಗಿತ್ತು. ಸನ್ನಿ ಲಿಯೋನ್ ಹೆಸರು ನೋಡಿ ಅಂದು ಎಲ್ಲರೂ ಅಚ್ಚರಿಗೊಳಗಾಗಿದ್ದರೆ, ಅವತ್ತು ಕೂಡ ಕಾಲೇಜ್ ಅಧಿಕಾರಿಗಳು ಇದು ಕಿಡಿಗೇಡಿಗಳ ಕೃತ್ಯ ಎಂದು ಆರೋಪಿಸಿದ್ದರು

400ಕ್ಕೆ 400 ಅಂಕ.. ಪ್ರತಿಕ್ರಿಯೆ ನೀಡಿದ್ದ ಸನ್ನಿ ಲಿಯೋನ್

04 ವಿಷಯಗಳಲ್ಲಿ 400ಕ್ಕೆ 400 ಅಂಕ ಬಂದಿದ್ದನ್ನ ಕಂಡು, ಮೆರಿಟ್ ಪಟ್ಟಿಯಲ್ಲಿ ತನ್ನ ಹೆಸರು ಮೊದಲನೇ ಸ್ಥಾನದಲ್ಲಿದೆ ಎಂಬ ವಿಚಾರವನ್ನರಿತು ಸನ್ನಿ ಲಿಯೋನ್ ಆಗ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಮುಂದಿನ ಸೆಮಿಸ್ಟರ್ ನಲ್ಲಿ ನಿಮ್ಮೆಲ್ಲರನ್ನೂ ನೋಡುತ್ತೇನೆ. ನೀವೆಲ್ಲರೂ ನನ್ನ ತರಗತಿಯವರೇ ಎಂದು ಭಾವಿಸುತ್ತೇನೆ ಎಂದು ತಮಾಷೆಯನ್ನೂ ಮಾಡಿದ್ದರು ಸನ್ನಿ ಲಿಯೋನ್

ಹೀಗೆ ಒಂದಾ..ಎರಡಾ.. ಸನ್ನಿ ಲಿಯೋನ್ ಎಂಬ 'ಸಮೂಹ ಸನ್ನಿ'ಯಿಂದ ಪ್ರವೇಶ ಪರೀಕ್ಷೆಗಳಲ್ಲಿ, ಕಾಲೇಜ್ ನ ಮೆರಿಟ್ ಲಿಸ್ಟ್ ನಲ್ಲಿ ಅನೇಕ ಬಾರಿ ಪ್ರಮಾದಗಳಾಗಿವೆ. ಆದರೆ ಈ ಪ್ರಮಾದಕ್ಕೆ ಹೊಣೆ ಯಾರು ಅನ್ನುವುದು ಮಾತ್ರ ಇಲ್ಲಿಯವರೆಗೆ ಗೊತ್ತಾಗಿಲ್ಲ.

More from Filmibeat

English summary
A photograph of actor Sunny Leone along with her name appearing on an admit card for the Uttar Pradesh Police Constable Recruitment examination went viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X