19 ವರ್ಷದ ನಂತರ ತಬ್ಬಿಕೊಂಡ ಮಾಜಿ ಪ್ರೇಮಿಗಳು, ವ್ಹಾ ನೋಡಲು ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್,..!

ಇನ್ನೇನು ಮದುವೆಯಾಗಿಯೇ ಬಿಡುವಂತೆ ಚಿತ್ರರಂಗದಲ್ಲಿ ಅನೇಕರು ಓಡಾಡುತ್ತಾರೆ. ಊರುಕೇರಿಯೆಲ್ಲ ಸುತ್ತಾಡುತ್ತಾರೆ. ಆ ನಂತರ ಕಾರಣವನ್ನು ಹೇಳದೇ ದೂರವಾಗುತ್ತಾರೆ. ಎದುರು ಬದುರಾದರೂ ಪರಿಚಯವೇ ಇಲ್ಲವೆಂಬಂತೆ ಹಾದು ಹೋಗುತ್ತಾರೆ. ಇದಕ್ಕೆ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಜೋಡಿ ಮತ್ತೊಂದು ಉದಾಹರಣೆ.

ಹೌದು, ಒಂದು ಕಾಲದಲ್ಲಿ ಪ್ರೇಮದ ಅಮಲನ್ನೇರಿಸಿಕೊಂಡಿದ್ದವರು ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್. ಫಿದಾ.. ಚುಪ್ ಚುಪ್ಕೇ.. ಮಿಲೆಂಗೆ ಮಿಲೆಂಗೆ.. 36 ಚೈನಾ ಟೌನ್.. ಹೀಗೆ ಒಂದಾದ ಮೇಲೊಂದು ಜೊತೆಯಾಗಿ ಚಿತ್ರಗಳನ್ನು ಮಾಡಿದ್ದ ಇಬ್ಬರಿಗೆ ಜಬ್ ವಿ ಮೆಟ್ ಚಿತ್ರ ಅಪಾರ ಹೆಸರನ್ನು ತಂದು ಕೊಡ್ತು. ಆದರೆ.. ಆ ನಂತರ ಸಂಬಂಧ ಮಾತ್ರ ಮುರಿದು ಬಿತ್ತು. ಆ ನಂತರ ಸೈಫ್ ಅಲಿ ಖಾನ್ ಅವರನ್ನು ಕರೀನಾ ಕಪೂರ್ ಮದುವೆಯಾದರು. ಮೀರಾ ರಜಪೂತ್ ಜೊತೆ ಶಾಹಿದ್ ಕಪೂರ್ ಸಪ್ತಪದಿಯನ್ನು ತುಳಿದರು. ಸದ್ಯಕ್ಕೆ ಇಬ್ಬರು ತಮ್ಮ ತಮ್ಮ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ತುಂಬಾ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ.

Exes Shahid Kapoor and Kareena Kapoor Khan s hug steals the spotlight at IIFA 2025

ಇಂಥಾ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಬ್ರೇಕಪ್ ನಂತರ ದೂರ ದೂರ ಇದ್ದರು. ಅಪ್ಪಿ ತಪ್ಪಿ ಯಾವುದಾದರೂ ಸಭೆ ಸಮಾರಂಭಗಳಲ್ಲಿ ಎದುರು ಬದುರಾದರೂ ಕೂಡ ಇಬ್ಬರು ಮುಖ ತಿರುಗಿಸಿಕೊಂಡು ಓಡಾಡುತ್ತಿದ್ದರು. ಆದರೆ ಈಗ 19 ವರ್ಷಗಳ ನಂತರ ಸ್ನೇಹ ಎಂಬ ಭಾವ ಮತ್ತೆ ಬೆಸೆದಂತೆ ಇದೆ. ಮನಸು ಮಾಗಿದಂತೆ ವಯಸಾದಂತೆ ಮನಸ್ತಾಪ ದೂರವಾದಂತೆ ಇದೆ. ಇದಕ್ಕೆ ಇಂದು ನಡೆದ ಐಫಾ ಸಮಾರಂಭ ಸಾಕ್ಷಿ.

ಹೌದು, ಇಂದು ನಡೆದ ಐಫಾ ಪ್ರಶಸ್ತಿ ಸಮಾರಂಭದ ಪತ್ರಿಕಾಗೋಷ್ಠಿಯಲ್ಲಿ ಕರೀನಾ ಕಪೂರ್ ಖಾನ್ ಮತ್ತು ಶಾಹಿದ್ ಕಪೂರ್ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಮುಕ್ತವಾಗಿ ಮನದ ಮಾತು ಹಂಚಿಕೊಂಡಿದ್ದಾರೆ. ನಕ್ಕಿದ್ದಾರೆ. ಹರಟೆ ಹೊಡೆದಿದ್ದಾರೆ. ಈ ಘಳಿಗೆ ಈಗ ಹಲವರ ಕಣ್ಣಿಗೆ ಅಚ್ಚರಿ, ವಿಸ್ಮಯ ಮತ್ತು ಅದ್ಭುತದಂತೆ ಕಾಣುತ್ತಿದೆ. ಯಾಕೆಂದರೆ ಆಗಲೇ ಹೇಳಿದಂತೆ ಇಬ್ಬರ ನಡುವೆ ಕಳೆದ 18ವರ್ಷಗಳಿಂದ ಮಾತಿರಲಿಲ್ಲ ಕಥೆ ಇರಲಿಲ್ಲ.

ಹೀಗಿರುವಾಗ ಇಬ್ಬರು ತಬ್ಬಿಕೊಂಡು ಆತ್ಮೀಯ ಕ್ಷಣಗಳನ್ನು ಕಳೆದಿದ್ದಾರೆ. ಹೀಗಾಗಿಯೇ ಈ ಅಪೂರ್ವ ಮತ್ತು ಅಪರೂಪದ ಸಂಗಮದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಅನೇಕರು ತಮ್ಮ ತಮ್ಮ ಮನದ ಮಾತು ಹಂಚಿಕೊಳ್ಳುತ್ತಿದ್ದಾರೆ. ಗೀತ್ .ಮತ್ತು ಆದಿತ್ಯ ಒಂದಾದರು ಕೊನೆಗೂ ಜಬ್ ವಿ ಮೇಟ್ ಚಿತ್ರದ ಎರಡನೇ ಭಾಗವನ್ನು ನಾವು ನಿರೀಕ್ಷೆ ಮಾಡಬಹುದು ಎನ್ನುತ್ತಿದ್ದಾರೆ.

More from Filmibeat

Read more about: shahid kapoor kareena kapoor iifa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X