twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಮಾನ್ ಖಾನ್‌ಗೆ ಮೇಲೆ ಸಿನಿಮಾ ಪ್ರದರ್ಶಕರ ಮುನಿಸು; ಬಹಿರಂಗ ಪತ್ರ

    |

    ಸಲ್ಮಾನ್ ಖಾನ್‌ ಬಾಲಿವುಡ್‌ನ ಸೂಪರ್ ಸ್ಟಾರ್. ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ ಸಲ್ಲು ಭಾಯ್.

    ಸಲ್ಮಾನ್ ಖಾನ್ ಸಿನಿಮಾಗಳು ಬಿಡುಗಡೆ ದಿನ ಹಬ್ಬದಂತೆ ಆಚರಣೆ ಮಾಡುತ್ತಾರೆ ಅಭಿಮಾನಿಗಳು. ಸಲ್ಮಾನ್ ಖಾನ್ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸುವ ಜೊತೆಗೆ, ವಿತರಕರಿಗೆ, ಚಿತ್ರಮಂದಿರಗಳ ಮಾಲೀಕರಿಗೆ, ಚಿತ್ರಮಂದಿರದ ಜೊತೆಗೆ ನೇರ ಪರೋಕ್ಷ ಸಂಬಂಧ ಇಟ್ಟುಕೊಂಡಿರುವ ಹಲವರಿಗೆ ಲಾಭ ಮಾಡಿಕೊಡುತ್ತವೆ.

    ಮತ್ತೆ ಜೊತೆಯಾಗುತ್ತಿದ್ದಾರೆ ಶಾರುಖ್ ಖಾನ್-ಸಲ್ಮಾನ್ ಖಾನ್ಮತ್ತೆ ಜೊತೆಯಾಗುತ್ತಿದ್ದಾರೆ ಶಾರುಖ್ ಖಾನ್-ಸಲ್ಮಾನ್ ಖಾನ್

    ಆದರೆ ಸಲ್ಮಾನ್ ಖಾನ್ ಅವರ ಇತ್ತೀಚಿನ ನಡೆ ಇದನ್ನೆಲ್ಲಾ ತಲೆಕೆಳಗು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಬಹುನಿರೀಕ್ಷಿತ ಮಾಸ್ ಸಿನಿಮಾ 'ರಾಧೆ'ಯನ್ನು ಒಟಿಟಿಗೆ ಮಾರಲು ಹೊರಟಿದ್ದಾರಂತೆ. ಈ ಬಗ್ಗೆ ಸಿನಿಮಾ ಪ್ರದರ್ಶಕರು ಸಲ್ಮಾನ್ ಖಾನ್ ಮೇಲೆ ಮುನಿಸಿಕೊಂಡಿದ್ದು, ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

    ಬ್ಲಾಕ್‌ಬಸ್ಟರ್ ಸಿನಿಮಾದ ಅವಶ್ಯಕತೆ ಇದೆ: ಪ್ರದರ್ಶಕರು

    ಬ್ಲಾಕ್‌ಬಸ್ಟರ್ ಸಿನಿಮಾದ ಅವಶ್ಯಕತೆ ಇದೆ: ಪ್ರದರ್ಶಕರು

    'ನೀವು ಏಷ್ಯಾದ ದೊಡ್ಡ ಸ್ಟಾರ್. ನಿಮ್ಮ ಸಿನಿಮಾಗಳಿಗಾಗಿ ಅಭಿಮಾನಿಗಳು ತಿಂಗಳಾನುಗಟ್ಟಲೆ ಕಾಯುತ್ತಾರೆ. ನಿಮ್ಮ ಸಿನಿಮಾ ಓಪನಿಂಗ್ ಇತಿಹಾಸವನ್ನು ಸೃಷ್ಟಿಸುತ್ತದೆ. ಈಗಷ್ಟೆ ಪುನಃ ಪ್ರಾರಂಭವಾಗಿರುವ ಚಿತ್ರಮಂದಿರಗಳು ಮತ್ತೆ ತಲೆಎತ್ತಲು ಸೂಪರ್ ಬ್ಲಾಕ್‌ಬಸ್ಟರ್ ಸಿನಿಮಾ ಒಂದರ ಅವಶ್ಯಕತೆ ಇದೆ' ಎಂದು ಹೇಳಿದ್ದಾರೆ ಸಿನಿಮಾ ಪ್ರದರ್ಶಕರ ಸಂಘದ ಸತದೀಪ್ ಶಾ.

    'ರಾಧೆ ಸಿನಿಮಾವನ್ನು ಒಟಿಟಿಗೆ ಮಾರುವ ಪ್ರಯತ್ನ ಮಾಡುತ್ತಿದ್ದೀರಿ'

    'ರಾಧೆ ಸಿನಿಮಾವನ್ನು ಒಟಿಟಿಗೆ ಮಾರುವ ಪ್ರಯತ್ನ ಮಾಡುತ್ತಿದ್ದೀರಿ'

    ಅಕ್ಷಯ್ ಕುಮಾರ್ ಅವರು ತಮ್ಮ 'ಲಕ್ಷ್ಮಿ' ಸಿನಿಮಾವನ್ನು ಒಟಿಟಿಗೆ ಮಾರಿಬಿಟ್ಟಿದ್ದಾರೆ. ಇದು ಸಿನಿಮಾ ಪ್ರದರ್ಶಕರಿಗೆ ಹೊಡೆತವಾಗಿ ಪರಿಣಮಿಸಿತು. ಆದರೆ ಈಗ ಬರುತ್ತಿರುವ ಸುದ್ದಿಯಂತೆ ನೀವು (ಸಲ್ಮಾನ್ ಖಾನ್) ಸಹ ನಿಮ್ಮ ಬಹುನಿರೀಕ್ಷಿತ ಸಿನಿಮಾ 'ರಾಧೆ'ಯನ್ನು ಒಟಿಟಿಗೆ ಮಾರಲು ಪ್ರಯತ್ನಿಸುತ್ತಿದ್ದೀರಂತೆ, ಇದು ಸಿನಿಮಾ ಮಂದಿರಗಳ ಮಾಲೀಕರಿಗೆ, ವಿತರಕರಿಗೆ ತೀವ್ರ ಆಘಾತಕಾರಿ ಸುದ್ದಿಯಾಗಿದೆ' ಎಂದಿದ್ದಾರೆ.

    ಮತ್ತೆ ಜೊತೆಯಾಗುತ್ತಿದ್ದಾರೆ ಶಾರುಖ್ ಖಾನ್-ಸಲ್ಮಾನ್ ಖಾನ್ಮತ್ತೆ ಜೊತೆಯಾಗುತ್ತಿದ್ದಾರೆ ಶಾರುಖ್ ಖಾನ್-ಸಲ್ಮಾನ್ ಖಾನ್

    'ನೀವು ಸ್ಟಾರ್ ಆಗುವಲ್ಲಿ ಚಿತ್ರಮಂದಿರಗಳ ಪಾತ್ರ ದೊಡ್ಡದು'

    'ನೀವು ಸ್ಟಾರ್ ಆಗುವಲ್ಲಿ ಚಿತ್ರಮಂದಿರಗಳ ಪಾತ್ರ ದೊಡ್ಡದು'

    ನೀವು ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆಯುವಲ್ಲಿ, ನಿಮ್ಮ ಸಿನಿಮಾಗಳು ಸೂಪರ್-ಡೂಪರ್ ಹಿಟ್ ಎನಿಸಿಕೊಳ್ಳುವಲ್ಲಿ, ನಿಮ್ಮ ಸಿನಿಮಾಗಳು ದೊಡ್ಡ ಲಾಭ ಮಾಡುವಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಪಾಲು ಬಹಳ ದೊಡ್ಡದು. ಈಗ ನೀವು ಮಾಡಲು ಹೊರಟಿರುವ ಕಾರ್ಯ, ಜಿಲ್ಲಾ ಕೇಂದ್ರ, ಪಟ್ಟಣಗಳಲ್ಲಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೊಲ್ಲಲಿದೆ' ಎಂದಿದ್ದಾರೆ.

    'ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿ'

    'ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿ'

    ಚಿತ್ರಮಂದಿರದ ಸಿಬ್ಬಂದಿ, ಚಿತ್ರಮಂದಿರದ ಕ್ಯಾಂಟೀನ್ ಸಿಬ್ಬಂದಿ, ಪ್ರಚಾರದ ಪೋಸ್ಟರ್ ಅಂಟಿಸುವ ಹುಡುಗರು, ಸಿನಿಮಾ ಮಂದಿರದ ಹೊರಗೆ ವಸ್ತುಗಳನ್ನು ಮಾರುವವರು ಇನ್ನೂ ಅದೆಷ್ಟೋ ಮಂದಿ ಹಾಗೂ ಅವರ ಕುಟುಂಬ ಸಿನಿಮಾಗಳ ಮೇಲೆ ಆಧಾರವಾಗಿದೆ. ನಿಜ ಜೀವನದಲ್ಲೂ ಹೀರೋ ಆಗಿರುವ ನೀವು ಅವರನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ ಸಿನಿಮಾ ಪ್ರದರ್ಶಕರು.

    ಸಲ್ಮಾನ್ ಖಾನ್ ವಿರುದ್ಧವೇ ಅಸಮಾಧಾನ ಹೊರಹಾಕಿದ ಬಿಗ್ ಬಾಸ್ ಸ್ಪರ್ಧಿಸಲ್ಮಾನ್ ಖಾನ್ ವಿರುದ್ಧವೇ ಅಸಮಾಧಾನ ಹೊರಹಾಕಿದ ಬಿಗ್ ಬಾಸ್ ಸ್ಪರ್ಧಿ

    English summary
    Movie exhibitors requested Salman Khan to not to sell his movie 'Radhe' to ott. They say that will kill single screen theaters.
    Monday, November 9, 2020, 21:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X