ನಕಲಿ ಎನ್‌ಸಿಬಿ ಅಧಿಕಾರಿಗಳಿಂದ ಬೆದರಿಕೆ ನಟಿ ಆತ್ಮಹತ್ಯೆ
ಬಾಲಿವುಡ್‌ಗೆ ಈಗ ಎನ್‌ಸಿಬಿ ಅಧಿಕಾರಿಗಳೆಂದರೆ ಬಹಳ ಭಯ. ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ)ಯು ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಆಘಾತವನ್ನು ನೀಡಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಕರಣ್ ಜೋಹರ್ ಇನ್ನೂ ಹಲವರು ಎನ್‌ಸಿಬಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು.
ನಟ-ನಟಿಯರಿಗೆ ಎನ್‌ಸಿಬಿ ಬಗ್ಗೆ ಇರುವ ಭಯವನ್ನೇ ಬಂಡವಾಳ ಮಾಡಿಕೊಂಡು ಕೆಲವು ದುರುಳರು ನಟಿಯೊಬ್ಬರನ್ನು ಬೆದರಿಸಿದ್ದು, ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನಲ್ಲಿ ನೆಲೆಸಿದ್ದ ಭೋಜಪುರಿ ನಟಿ ಡಿಸೆಂಬರ್ 20 ರಂದು ತನ್ನ ಇಬ್ಬರು ಗೆಳೆಯರೊಟ್ಟಿಗೆ ಮುಂಬೈನ ಐಶಾರಾಮಿ ಹೋಟೆಲ್‌ಗೆ ಹೋಗಿದ್ದರು. ಅಲ್ಲಿ ಗೆಳೆಯರೊಟ್ಟಿಗೆ ಇರುವಾಗ ಇಬ್ಬರು ಅಗಂತುಕರು ತಾವು ಎನ್‌ಸಿಬಿ ಅಧಿಕಾರಿಗಳೆಂದು ಹೇಳಿಕೊಂಡು ಅವರನ್ನು ರೈಡ್ ಮಾಡಿದರು.

ಪ್ರಕರಣದಲ್ಲಿ ಸಿಲುಕಬಾರದು ಎಂದುಕೊಂಡರೆ 40 ಲಕ್ಷ ಹಣ ನೀಡಿ ಎಂದು ಒತ್ತಾಯಿಸಿದ್ದಾರೆ. ನಟಿಯು ಮಾನಕ್ಕೆ ಹೆದರಿ 20 ಲಕ್ಷ ಹಣ ನೀಡಿದ್ದಾಳೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಆ ನಕಲಿ ಎನ್‌ಸಿಬಿ ಅಧಿಕಾರಿಗಳು ಇನ್ನೂ 20 ಲಕ್ಷಕ್ಕೆ ಪೀಡಿಸಿದ್ದಾರೆ. ಹಣ ಹೊಂದಿಸಲಾಗದೆ ನಟಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ ವೇಳೆ ಅಸಲಿ ವಿಷಯ ಗೊತ್ತಾಗಿದ್ದು, ನಕಲಿ ಎನ್‌ಸಿಬಿ ಅಧಿಕಾರಿಗಳನ್ನು ಹಾಗೂ ಪಾರ್ಟಿಗೆಂದು ನಟಿಯ ಜೊತೆ ಹೋಗಿದ್ದ ಇಬ್ಬರು ಗೆಳೆಯರನ್ನು ಬಂಧಿಸಿದ್ದಾರೆ. ನಟಿಯೊಂದಿಗೆ ಪಾರ್ಟಿ ಮಾಡಿದ್ದ ಇಬ್ಬರು ಗೆಳೆಯರು ಸಹ ನಕಲಿ ಎನ್‌ಸಿಬಿ ಅಧಿಕಾರಿಗಳೊಟ್ಟಿಗೆ ಶಾಮೀಲಾಗಿದ್ದರು ಎನ್ನಲಾಗಿದೆ. ಈಗ ಎಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.
ಮಾದಕ ವಸ್ತು ಬಳಕೆ ತಡೆ ಇಲಾಖೆಯಾದ ಎನ್‌ಸಿಬಿಯು ಮಾದಕ ವಸ್ತು ವ್ಯಸನಿ ಬಾಲಿವುಡ್ ಸೆಲೆಬ್ರಿಟಿಗಳ ಪಾಲಿಗೆ ದುಸ್ವಪ್ನವಾಗಿತ್ತು. ಹಲವು ದೊಡ್ಡ-ದೊಡ್ಡ ಸ್ಟಾರ್ ನಟ-ನಟಿಯರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಕೆಲವರನ್ನು ಬಂಧಿಸಿತ್ತು ಸಹ. ಆದರೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ಎನ್‌ಸಿಬಿಗೆ ತುಸು ಹಿನ್ನಡೆ ಆಗಿದ್ದು, ಎನ್‌ಸಿಬಿ ಮೇಲೆ ವಸೂಲಿ ಆರೋಪ ಕೇಳಿ ಬಂದಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]


Click it and Unblock the Notifications











