ನನ್ನ ಎದೆಯ ಸೈಜ್ ಕೇಳಿದ್ದರು: ದಕ್ಷಿಣ ಭಾರತ ಚಿತ್ರರಂಗದ ಮೇಲೆ ನಟಿ ದೂರು

ಮೀ ಟೂ ಅಭಿಯಾನ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರ ಮೇಲೆ ಆರೋಪ ಬಂದು ಎಫ್‌ಐಆರ್ ಸಹ ದಾಖಲಾಗಿತ್ತು.

ಈಗ ಮೀ ಟೂ ಅಭಿಯಾನದ ಜೋರು ತುಸು ಕಡಿಮೆಯಾಗಿದೆಯಾದರೂ ನಟಿಯರು ಆಗಾಗ್ಗೆ ತಮಗೆ ಚಿತ್ರರಂಗದಲ್ಲಿ ಆದ ಕಹಿ ಅನುಭವದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.

ಕನ್ನಡದ ಸಿನಿಮಾದಿಂದಲೇ ನಟನಾ ವೃತ್ತಿ ಆರಂಭಿಸಿದ ಉತ್ತರ ಭಾರತದ ಚೆಲುವೆಯೊಬ್ಬರು ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ ಅಷ್ಟೇ ಅಲ್ಲದೆ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಪಾತ್ರಕ್ಕೆ ಪಲ್ಲಂಗ (ಕಾಸ್ಟಿಂಗ್ ಕೌಚ್) ಸಂಸ್ಕೃತಿ ಹೆಚ್ಚು ಎಂದು ಸಹ ಆರೋಪಿಸಿದ್ದಾರೆ.

Faced Lot Of Casting Couch Experience In South Movie Industry: Surveen Chawla

ಶಿವರಾಜ್ ಕುಮಾರ್ ನಟನೆಯ 'ಪರಮೇಶಿ ಪಾನ್‌ವಾಲ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ಸುರ್ವೀನ್ ಚಾವ್ಲಾ ತಾವು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಕಾಸ್ಟಿಂಗ್ ಕೌಚ್ ಅನುಭವ ಎದುರಿಸಿರುವುದಾಗಿ ಹೇಳಿದ್ದಾರೆ.

ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸುರ್ವೀನ್ ಚಾವ್ಲಾ ತಾವು ಎದುರಿಸಿದ ಮೊದಲ ಸಿನಿಮಾ ಆಡಿಷನ್‌ನಲ್ಲಿಯೇ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರಂತೆ. ''ಮುಂಬೈನಲ್ಲಿ ನಾನು ನನ್ನ ಮೊದಲ ಸಿನಿಮಾ ಮೀಟಿಂಗ್ ಅಟೆಂಡ್ ಮಾಡಿದ್ದೆ. ಆ ಮೀಟಿಂಗ್‌ನಲ್ಲಿ ನನ್ನ ತೂಕದ ಬಗ್ಗೆ ಪ್ರಶ್ನೆ ಮಾಡಲಾಯಿತು. ನೀನು 56 ಕೆಜಿ ಇದ್ದೀಯ ಹೀಗಿದ್ದರೆ ನಿನಗೆ ಸಿನಿಮಾದಲ್ಲಿ ಅವಕಾಶಗಳು ಸಿಗುವುದಿಲ್ಲ ಎಂದಿದ್ದರು. ಅಷ್ಟೇ ಅಲ್ಲದೆ, ನನ್ನ ಎದೆಯ ಅಳತೆಯನ್ನು ಸಹ ಅವರು ಕೇಳಿದ್ದರು'' ಎಂದಿದ್ದಾರೆ.

''ಇಲ್ಲಿ ಬಾಡಿ ಶೇಮಿಂಗ್ ಎದುರಿಸಿದ ಬಳಿಕ ದಕ್ಷಿಣದಲ್ಲಿ ಸಾಕಷ್ಟು ಕಾಸ್ಟಿಂಗ್ ಕೌಚ್ ಅನುಭವಿಸಿದೆನು. ಅದೆಲ್ಲ ಬಹಳ ಕಷ್ಟದ ಸಮಯ. ಕಾಸ್ಟಿಂಗ್ ಕೌಚ್ ಎಂಬುದು ಚಿತ್ರರಂಗದಲ್ಲಿದೆ. ಆದರೆ ಯಾವುದೇ ನಟಿಯನ್ನು ಸಿನಿಮಾಕ್ಕೆ ಆಯ್ಕೆ ಮಾಡಲು ಅದು ಪ್ರಮಾಣವಾಗಬಾರದು. ಇಂಥಹಾ ಅನುಭವಗಳಾದಾಗ ಚಿತ್ರರಂಗವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆನೇ ಎಂಬ ಅನುಮಾನ ಸಹ ನನಗೆ ಬಂದಿದ್ದಿದೆ'' ಎಂದಿದ್ದಾರೆ ಸುರ್ವೀನ್ ಚಾವ್ಲಾ.

ಕನ್ನಡದ 'ಪರಮೇಶಿ ಪಾನ್‌ವಾಲಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುರ್ವೀನ್ ಚಾವ್ಲಾ ಆ ಬಳಿಕ ತೆಲುಗಿನ 'ರಾಜಾ ಮಹಾರಾಜ', ತಮಿಳಿನ 'ಮೂಂಡ್ರು ಪೇರ್ ಮೂಂಡ್ರು ಕಾದಲ್', 'ಪುತಿಯಾ ತಿರುಪ್ಪಂಗಳ್', 'ಜೈ ಹಿಂದ್ 2' ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿಯೂ ಹಲವು ಸಿನಿಮಾಗಳಲ್ಲಿ ಸುರ್ವೀನ್ ನಟಿಸಿದ್ದಾರೆ.

More from Filmibeat

English summary
Actress Surveen Chawla said I have faced lot of casting couch experience in south movie industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X