ರಶ್ಮಿಕಾ ಬಳಿಕ ಕಾಜೋಲ್ ಟಾರ್ಗೆಟ್: ಬಟ್ಟೆ ಬದಲಿಸುತ್ತಿರುವ ವಿಡಿಯೋ ವೈರಲ್

ಎಲ್ಲರ ಆತಂಕ ನಿಜವಾಗಿದೆ. ಡೀಪ್‌ಫೇಕ್ ವಿಡಿಯೋಗಳ ಹಾವಳಿ ಶುರುವಾಗಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಡೀಪ್‌ಪೇಕ್ ವಿಡಿಯೋ ವೈರಲ್ ಆಗಿದ್ದು ಗೊತ್ತೇಯಿದೆ. ಈಗ ಬಾಲಿವುಡ್ ನಟಿ ಕಾಜೋಲ್ ಫೇಕ್ ವಿಡಿಯೋ ಸದ್ದು ಮಾಡ್ತಿದೆ. ಆಕೆ ಬಟ್ಟೆ ಬದಲಿಸುವಂತೆ ಕಿಡಿಗೇಡಿಗಳು ಫೇಕ್ ವಿಡಿಯೋ ತೇಲಿ ಬಿಟ್ಟಿದ್ದಾರೆ.

ತಂತ್ರಜ್ಞಾನದ ಸಹಾಯದಿಂದ ಸೆಲೆಬ್ರೆಟಿಗಳ ಫೋಟೊ, ವಿಡಿಯೋ ಮಾರ್ಪ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹರಿಬಿಡುತ್ತಾರೆ. ಕೆಲವರು ಇದನ್ನು ನಿಜ ಎಂದೇ ನಂಬುತ್ತಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ತುಂಡು ಬಟ್ಟೆಯಲ್ಲಿ ಲಿಫ್ಟ್‌ ಒಳಗೆ ಬರುವಂತ ವಿಡಿಯೋ ವೈರಲ್ ಆಗಿತ್ತು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಅಮಿತಾಬ್ ಬಚ್ಚನ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು, ಅಭಿಮಾನಿಗಳು ರಶ್ಮಿಕಾ ಬೆಂಬಲಕ್ಕೆ ನಿಂತರು. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದಿದ್ದರು.

Fact check: after Rashmika mandanna, Kajols deepfake video goes viral

ರಕ್ಷಿತ್ ಶೆಟ್ಟಿ, ನಾಗಚೈತನ್ಯ ಸೇರಿದಂತೆ ಹಲವರು ತಂತ್ರಜ್ಞಾನದ ದುರುಪಯೋಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸರ್ಕಾರ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಂತಹ ಸಾಫ್ಟ್‌ವೇರ್, ಆಪ್‌ಗಳನ್ನು ದುರುದ್ದೇಶಕ್ಕೆ ಬಳಸಿಕೊಳ್ಳುವುದನ್ನು ತಡೆಯಬೇಕು ಎಂದಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಡೀಪ್‌ಫೇಕ್ ವಿಡಿಯೋಗಳು ಹರಿದಾಡುತ್ತಿದೆ. ಇದೀಗ ಬಾಲಿವುಡ್ ಖ್ಯಾತ ನಟಿ ಕಾಜೋಲ್ ಫೇಕ್ ವಿಡಿಯೋ ವೈರಲ್ ಆಗುತ್ತಿದೆ.

ಇಂಗ್ಲೀಷ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರೋಸಿ ಬ್ರೀನ್ ಮಾಡಿದ್ದ ಟಿಕ್ ಟಾಕ್ ವಿಡಿಯೋ ಇದು. 'ಗೆಟ್ ರೆಡಿ ವಿತ್ ಮೀ' ಟ್ರೆಂಡ್ ಭಾಗವಾಗಿ ಆಕೆ ವಿಡಿಯೋ ಮಾಡಿದ್ದಳು. ಇದೇ ವಿಡಿಯೋದಲ್ಲಿ ಆಕೆಯ ಮುಖಕ್ಕೆ ನಟಿ ಕಾಜೋಲ್ ಮುಖ ಅಂಟಿಸಿ ವಿಡಿಯೋ ವೈರಲ್ ಮಾಡಲಾಗಿದೆ. ನಟಿ ಕಾಜೋಲ್ ಬಟ್ಟೆ ಬದಲಿಸುವಂತೆ ಈ ವಿಡಿಯೋವನ್ನು ಬಿಂಬಿಸಲಾಗಿದೆ.

ನಟಿ ರಶ್ಮಿಕಾ ಮಂದಣ್ಣ ಡೀಪ್ ವಿಡಿಯೋ ಇದೇ ರೀತಿ ವೈರಲ್ ಆಗಿತ್ತು. ದೆಹಲಿ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯುವಕನೊಬ್ಬನನ್ನು ಈ ಸಂಬಂಧ ಕರೆದು ವಿಚಾರಿಸಿರುವುದಾಗಿಯೂ ವರದಿಯಾಗಿದೆ. ರಶ್ಮಿಕಾ ಫೇಕ್ ವಿಡಿಯೋ ಸುದ್ದಿ ತಣ್ಣಗಾಗುವ ಮುನ್ನ ನಟ ಕಾಜೋಲ್ ಫೇಕ್ ವಿಡಿಯೋ ಸಂಚಲನ ಸೃಷ್ಟಿಸಿದೆ.

ತಮ್ಮ ಡೀಪ್‌ಫೇಕ್ ವಿಡಿಯೋ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದರು. "ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆದರೂ, ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ರೀತಿ ಏನಾದರೂ ಆಗುವುದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಘಟನೆಗಳಿಗೆ ಗುರಿಯಾಗುತ್ತಿದ್ದಾರೆ."

"ಮಹಿಳೆಯಾಗಿ ಮತ್ತು ನಟಿನಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ಬಂದ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇಂತಹ ಘಟನೆ ನಡೆದಿದ್ದರೇ, ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೇ ಅನ್ನೋದು ನನಗೆ ಗೊತ್ತಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಕೆಟ್ಟ ಘಟನೆಗೆ ಸಾಕ್ಷಿಯಾಗುವ ಮೊದಲು ನಾವು ಇದನ್ನು ಒಂದು ಸಮುದಾಯವಾಗಿ ಆದಷ್ಟು ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ಕೇಳಿಕೊಂಡಿದ್ದರು.

ಇನ್ನು ಈ ವಿಚಾರದಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ರಶ್ಮಿಕಾ ಧನ್ಯವಾದ ತಿಳಿಸಿದ್ದರು. ರಕ್ಷಿತ್ ಶೆಟ್ಟಿ, ಅಭಿಷೇಕ್‌ ಅಂಬರೀಶ್, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಸೇರಿದಂತೆ ಹಲವರಿಗೆ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ಬಗ್ಗೆ ಪ್ರಶ್ನೆ ಎದುರಾಗಿತ್ತು. ಎಲ್ಲರೂ ಇದನ್ನು ಖಂಡಿಸಿದ್ದರು. ಆದರೆ ತೆಲುಗು ನಟಿ ಮಾಧವಿಲತಾ ಪೋಸ್ಟ್ ಮಾತ್ರ ಇದಕ್ಕೆ ವ್ಯತಿರೇಕವಾಗಿತ್ತು. ಈ ವಿಚಾರವನ್ನು ಆಕೆ ವ್ಯಂಗ್ಯ ಮಾಡಿದ್ದು ಕೆಲವರು ಬೇಸರಕ್ಕೆ ಕಾರಣವಾಗಿತ್ತು.

More from Filmibeat

English summary
Kajol AI deepfake video goes viral, fans shock
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X