ಬಾಲಿವುಡ್‌ ಸುಂದರಿ ಐಶ್ವರ್ಯಾ ರೈ ಬಿಜೆಪಿ ಸೇರುತ್ತಾರಾ? ವೈರಲ್ ವಿಡಿಯೋದ ಗುಟ್ಟೇನು?

By Srushti. S G

ಮಾಜಿ ವಿಶ್ವ ಸುಂದರಿ, ಅಪ್ರತಿಮ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಐಶ್ವರ್ಯಾ ರೈ ರಾಜಕೀಯ ಪ್ರವೇಶದ ಕುರಿತು ದೇಶದ ಮೂಲೆ ಮೂಲೆಯಲ್ಲೂ ಚರ್ಚೆ ಶುರುವಾಗಿದೆ. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಕಾರಣ. ಸಿನೆಮಾ ಲೋಕದ ಈ ತಾರೆ ದಿಢೀರನೆ ರಾಜಕೀಯದ ಪಯಣ ಆರಂಭಿಸುತ್ತಾರೆಯೇ ಎಂಬ ದೊಡ್ಡ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಐಶ್ವರ್ಯಾ ರೈ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಈ ದೊಡ್ಡ ಚರ್ಚೆಗೆ ಇನ್ನೊಂದು ಮುಖ್ಯ ಕಾರಣ. ಇತ್ತೀಚೆಗೆ ಸಾರ್ವಜನಿಕವಾಗಿ ನಡೆದ ಒಂದು ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಹಾಗೂ ಪ್ರಧಾನಿ ಮೋದಿ ಇಬ್ಬರೂ ಭಾಗವಹಿಸಿದ್ದರು. ಈ ಒಂದು ಬೆಳವಣಿಗೆಯ ನಂತರ ಐಶ್ವರ್ಯಾ ರಾಜಕೀಯದ ಹಾದಿ ಹಿಡಿಯಲಿದ್ದಾರೆ ಎಂಬ ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ.

Fact Check Aishwarya Rai Bachchan Joining BJP After Participating with PM Modi in an Event

ಈ ದಿಢೀರ್ ಚರ್ಚೆ ಬಚ್ಚನ್ ಕುಟುಂಬದ ಹಿಂದಿನ ರಾಜಕೀಯ ನಂಟನ್ನು ಮತ್ತೆ ಕೆದಕುವಂತೆ ಮಾಡಿದೆ. ಅಮಿತಾಬ್ ಬಚ್ಚನ್ ಕುಟುಂಬವು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಜೊತೆ ನಿಕಟ ಸಂಬಂಧ ಹೊಂದಿದೆ. ಆದರೆ ಐಶ್ವರ್ಯಾ ಮಾತ್ರ ರಾಜಕೀಯದಲ್ಲಿ ಗುರುತಿಸಿಕೊಂಡಿರಲಿಲ್ಲ. ಈಗ ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ಹರಿದಾಡುವುದಕ್ಕೆ ಶುರು ಮಾಡಿದೆ. ಹಾಗಿದ್ದರೆ, ಈ ಸುದ್ದಿಯ ಅಸಲಿಯತ್ತೇನು? ನೋಡೋಣ ಬನ್ನಿ.

ಪ್ರಧಾನಿ ಮೋದಿ ಜೊತೆ ಐಶ್ವರ್ಯಾ ರೈ

ಇತ್ತೀಚೆಗೆ ಶ್ರೀ ಸತ್ಯ ಸಾಯಿ ಬಾಬಾ ಅವರ ನೂರನೇ ವರ್ಷದ ಜನ್ಮದಿನದ ಸಮಾರಂಭದಲ್ಲಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಈ ವೇದಿಕೆಯಲ್ಲಿ ಐಶ್ವರ್ಯಾ ರೈ ಮಾಡಿದ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ತಮ್ಮ ಭಾಷಣದಲ್ಲಿ ಐಶ್ವರ್ಯಾ ಮಾನವೀಯ ಮೌಲ್ಯ, ಪ್ರೀತಿ ಮತ್ತು ಸಮಾಜದಲ್ಲಿನ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. "ಒಂದೇ ಜಾತಿ.. ಅದು ಮಾನವೀಯತೆ. ಒಂದೇ ಧರ್ಮ.. ಅದು ಪ್ರೀತಿ. ಒಂದೇ ಭಾಷೆ.. ಅದು ಹೃದಯದ ಭಾಷೆ. ಹಾಗೂ ಒಂದೇ ದೇವರು.. ಅವನು ಸರ್ವವ್ಯಾಪಿ" ಎಂದು ಹೇಳಿ ಮೆಚ್ಚುಗೆ ಗಳಿಸಿದ್ದಾರೆ.

ಮೋದಿ ಪಾದಕ್ಕೆ ನಮಸ್ಕರಿಸಿದ ಐಶ್ವರ್ಯಾ

ಇದೇ ವೇಳೆ ಐಶ್ವರ್ಯಾ ರೈ ಬಚ್ಚನ್ ಪ್ರಧಾನಿ ನರೇಂದ್ರ ಮೋದಿಯವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸತ್ಯ ಸಾಯಿ ಬಾಬಾ ಕಾರ್ಯಕ್ರಮದಲ್ಲಿ ನಡೆದ ಈ ಎರಡು ಘಟನೆಗಳನ್ನು ಕೇವಲ ಧಾರ್ಮಿಕ ದೃಷ್ಟಿಯಿಂದ ನೋಡದೆ ರಾಜಕೀಯ ದೃಷ್ಟಿಯಿಂದಲೂ ವಿಶ್ಲೇಷಿಸಲಾಗುತ್ತಿದೆ. ನಟಿ ಐಶ್ವರ್ಯಾ ರೈ ಭಾರತೀಯ ಜನತಾ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋ ಹರಿದಾಡುತ್ತಿದೆ. ಅದರಲ್ಲಿ ಬಚ್ಚನ್ ಕುಟುಂಬದ ರಾಜಕೀಯ ನಂಟನ್ನು ಬಿಂಬಿಸಲಾಗುತ್ತಿದೆ. ಆ ವಿಡಿಯೋದಲ್ಲಿ 'ನನ್ನ ಕುಟುಂಬದವರು' ಎಂಬ ಶೀರ್ಷಿಕೆ ನೀಡಲಾಗಿದ್ದು, ಅದರಲ್ಲಿ ಬಚ್ಚನ್ ಕುಟುಂಬದ ರಾಜಕೀಯ ನಂಟನ್ನು ತೋರಿಸಲಾಗಿದೆ. ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರ ಜೊತೆ ಇರುವ ಫೋಟೊಗಳನ್ನು ಬಿಂಬಿಸಲಾಗಿದೆ. ಈಗ ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದ ಐಶ್ವರ್ಯಾ ರೈ ವಿಡಿಯೋವನ್ನು ಹಾಕಿ, ಬಿಜೆಪಿ ಜೊತೆ ಗುರುತಿಸಿಕೊಂಡಿರುವಂತೆ ಬಿಂಬಿಸಲಾಗಿದೆ.

ಅಸಲಿಯತ್ತೇನು?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ ಈ ಮಾತುಗಳು ಊಹಾಪೋಹಗಳಷ್ಟೇ. ಇವುಗಳಿಗೆ ಯಾವುದೇ ಗಟ್ಟಿಯಾದ ಆಧಾರ ಇಲ್ಲ. ಇದೂವರೆಗೆ ನಟಿ ಐಶ್ವರ್ಯಾ ರೈ ಬಚ್ಚನ್ ಆಗಲಿ ಅಥವಾ ಅವರ ಕುಟುಂಬದ ಕಡೆಯಿಂದಾಗಲಿ ಈ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಅವರು ನಿಜವಾಗಿಯೂ ರಾಜಕೀಯ ರಂಗಕ್ಕೆ ಕಾಲಿಡುತ್ತಾರೆಯೇ ಅಥವಾ ತಮ್ಮ ಸಿನಿಮಾ ಜೀವನ ಮುಂದುವರೆಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

More from Filmibeat

English summary
Fact Check: Aishwarya Rai Bachchan Joining BJP After Participating with PM Modi in an Event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X