ಮದುವೆಯ ದಿನ 3ನೇ ಹೆಂಡತಿ ಗೌರಿ ಎದುರೇ 2ನೇ ಹೆಂಡತಿ ಕಿರಣ್‌ಗೆ ಕಿಸ್ ಮಾಡಿದ್ರಾ ಆಮಿರ್ ಖಾನ್ ?

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹೇಗಾದರೂ ಸರಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಚಿತ್ತ ಕದಿಯಬೇಕು ಎನ್ನುವುದಷ್ಟೇ ಹಲವರ ಉದ್ದೇಶ. ತಮ್ಮ ಈ ಉದ್ದೇಶ ಈಡೇರಿಸಿಕೊಳ್ಳಲು ದಿನ ನಿತ್ಯ ಇಲ್ಲಿ ಹಲವರು ಹಲವು ರೀತಿಯ ಸರ್ಕಸ್ ಮಾಡುತ್ತಾರೆ. ಲೈಕ್.. ಶೇರ್.. ವ್ಯೂವ್ಸ್ ಮತ್ತು ಸಬ್‌ಸ್ಕ್ರೈಬರ್ಸ್‌ ಹುಚ್ಚಿನಲ್ಲಿ ನಾನಾ ತರಹದ ಸುಳ್ಳು ಸುದ್ದಿಗಳನ್ನು ತೇಲಿ ಬಿಡುತ್ತಾರೆ.

ಇನ್ನು ನಮ್ಮ ನಿಮ್ಮ ನಡುವೆ ಇರುವ ಹಲವರು, ಬದುಕಿನ ಗಡಿಬಿಡಿಯಲ್ಲಿ ಯಾವುದು ನಿಜಾ.. ಯಾವುದು ಸುಳ್ಳು.. ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಪ್ರತ್ಯಕ್ಷವಾಗಿ ಕಂಡರು ಅದನ್ನೊಮ್ಮೆ ಪ್ರಮಾಣಿಸಿ ನೋಡುವ ವ್ಯವಧಾನ ಯಾರ ಬಳಿಯೂ ಇರುವುದಿಲ್ಲ. ಹೀಗಾಗಿ ತಮಗೆ ಅರಿವು ಇಲ್ಲದಂತೆ ಈ ಸುಳ್ಳು ಸುದ್ದಿಯ ಸುಳಿಯಲ್ಲಿ ಹಲವರು ಸಿಲುಕುತ್ತಾರೆ. ತಮ್ಮ ಕಣ್ಣಿಗೆ ಕಂಡಿದ್ದೇ ಸತ್ಯ ಎಂದುಕೊಂಡು ಶೇರ್ ಮಾಡುತ್ತಾರೆ. ಇದಕ್ಕೆ ಆಮಿರ್ ಖಾನ್ ಅವರ ವೈರಲ್ ವಿಡಿಯೋ ಸದ್ಯದ ಮತ್ತೊಂದು ಸಾಕ್ಷಿ.

fact-check-did-aamir-khan-kiss-ex-wife-kiran-rao-at-his-3rd-wedding-heres-the-truth

ಹೌದು, ಇಂದು (ಜುಲೈ 5 ) ಆಮಿರ್ ಖಾನ್ ಮೂರನೇ ಬಾರಿ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಆದರೆ.. ಇದೇ ಸಮಯದಲ್ಲಿ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ವೈರಲ್ ಆದ ಈ ವಿಡಿಯೋದಲ್ಲಿ ಮದುವೆ ಸಂಭ್ರಮದಲ್ಲಿರುವ ಆಮಿರ್ ಖಾನ್ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಎಲ್ಲರೆದುರೇ ಕಿಸ್ ಮಾಡಿದ್ದಾರೆ. ತಮ್ಮ 3ನೇ ಮದುವೆ ಸಂಭ್ರಮದಲ್ಲಿ ಆಮಿರ್ ಖಾನ್ ತಮ್ಮ ಭಾವಿ ಪತ್ನಿಯ ಎದುರು ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಕಿಸ್ ಮಾಡಿದರು ಎಂಬ ಕ್ಯಾಪ್ಷನ್ ಅಡಿ ಸದ್ಯ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗ ಸರ್ಕ್ಯುಲೇಟ್ ಮಾಡುತ್ತಿದೆ.

ಆಗಲೇ ಹೇಳಿದಂತೆ ಸತ್ಯಾಸತ್ಯತೆಯನ್ನು ತಿಳಿಯದೆ ಹಲವರು, ಇದೇನಪ್ಪಾ ಇವರ ಲೈಫ್ ಸ್ಟೈಲ್ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಕೆಟ್ಟಾಕೊಳಕು ಭಾಷೆಯಲ್ಲಿ ಆಮಿರ್ ಖಾನ್ ಅವರನ್ನು ನಿಂದಿಸುತ್ತಿದ್ದಾರೆ. ಆದರೆ ಈ ವೈರಲ್ ವಿಡಿಯೋ ಅಸಲಿಯತ್ತೇ ಬೇರೆ.

ಕಿರಣ್‌ಗೆ ಆಮಿರ್ ಖಾನ್ ಕಿಸ್ ಮಾಡಿದ್ದು ನಿಜಾ

ವೈರಲ್ ಆದ ಈ ವಿಡಿಯೋದ ಜಾಡು ಹಿಡಿದು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಹೋದಾಗ, ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರ ಈ ವಿಡಿಯೋ ಯಾವುದೇ ಎಐ ತಂತ್ರಜ್ಞಾನದಿಂದ ಉತ್ಪತ್ತಿಯಾಗಿದ್ದಲ್ಲ. ಬದಲಿಗೆ ನಿಜಾ ಎನ್ನುವುದು ಗೊತ್ತಾಗಿದೆ. ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಆಮಿರ್ ಕಿಸ್ ಮಾಡಿದ್ದು ನಿಜ. ಆಮಿರ್ ಖಾನ್ ಅವರ ಈ ವರ್ತನೆಯಿಂದ ಪಕ್ಕದಲ್ಲಿದ್ದ ಮಹಿಳೆ ಹುಬ್ಬೇರಿಸಿದ್ದು ನಿಜ.

fact-check-did-aamir-khan-kiss-ex-wife-kiran-rao-at-his-3rd-wedding-heres-the-truth

ಆದರೆ ''ಫಿಲ್ಮಿಬೀಟ್ ಕನ್ನಡ'' ನಡೆಸಿದ ಫ್ಯಾಕ್ಟ್ ಚೆಕ್ ಪ್ರಕಾರ ಈ ವಿಡಿಯೋ ಇಂದು ಅಥವಾ ನಿನ್ನೆ ಮೊನ್ನೆಯದ್ದಲ್ಲ. ಆಮಿರ್ ಖಾನ್ ಮತ್ತು ಗೌರಿ ಮದುವೆ ಸಮಾರಂಭದಲ್ಲಿ ಸೆರೆ ಹಿಡಿಯಲಾಗಿರುವ ದೃಶ್ಯವೂ ಇದಲ್ಲ. ಈ ಹಿನ್ನೆಲೆ ತಮ್ಮ ಹೊಸ ಹೆಂಡ್ತಿ ಗೌರಿ ಎದುರೇ ಆಮಿರ್ ತಮ್ಮ ಎರಡನೇ ಹೆಂಡ್ತಿ ಕಿರಣ್‌ಗೆ ಕಿಸ್ ಮಾಡಿದರು ಎಂಬ ಮಸಾಲೆ ಭರಿತ ಸುದ್ದಿ ಕೇವಲ ಸುಳ್ಳು.

ಹಾಗಿದ್ದರೆ ಸತ್ಯ ಏನು..?

ಆಗಲೇ ಹೇಳಿದಂತೆ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರ ಈ ವಿಡಿಯೋ ಇಂದು ನಿನ್ನೆಯದಲ್ಲ. ಬದಲಿಗೆ ಎರಡು ವರ್ಷ ಹಳೆಯದ್ದು. ಈ ವಿಡಿಯೋಗೂ ಅಮೀರ್ ಖಾನ್ ಅವರ 3ನೇ ಮದುವೆಗೂ ಯಾವುದೇ ಸಂಬಂಧನೇ ಇಲ್ಲ! ಹೌದು, ಅಸಲಿಗೆ ಎರಡು ವರ್ಷಗಳ ಹಿಂದೆ ಆಮಿರ್ ಖಾನ್ ಅವರ ಮುದ್ದಿನ ಮಗಳು ಇರಾ ಖಾನ್ ಅವರ ಮದುವೆ ನಡೆದಿತ್ತು.ನೂಪುರ್ ಶಿಖರೆ ಜೊತೆ ಇರಾ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು.

ಹಾಗೇ ನೋಡಿದರೆ ಇರಾ ಖಾನ್, ಆಮಿರ್ ಖಾನ್ ಮತ್ತು ರೀನಾ ದತ್ತಾ ಅವರ ಮಗಳಾದರು ಕಿರಣ್ ರಾವ್ ಕೂಡ ಈ ಮದುವೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ವೈರಲ್ ಆದ ವಿಡಿಯೋವನ್ನು ಸರಿಯಾಗಿ ಗಮನಿಸಿದರೆ ಅಲ್ಲಿ ಬರೀ ಕಿರಣ್ ರಾವ್ ಮಾತ್ರವಲ್ಲ, ಅಮೀರ್ ಖಾನ್ ಅವರ ಹಿರಿಯ ಮಗ ಜುನೈದ್ ಮತ್ತು ಇರಾ ಖಾನ್ ಅವರ ಅತ್ತೆ ಕೂಡ ಇರೋದನ್ನು ಕಾಣಬಹುದು. ಮಗಳ ಮದುವೆಯ ಸಂಭ್ರಮದಲ್ಲಿ ಆಮಿರ್ ಖಾನ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್‌ಗೆ ಎಲ್ಲರೆದುರು ಮುತ್ತು ಕೊಟ್ಟಿದ್ದರು.

ಎರಡು ವರ್ಷದ ಹಿಂದಿನ ಈ ಹಳೆಯ ವಿಡಿಯೋವನ್ನು ಹೆಕ್ಕಿ ತೆಗೆದಿರುವ ಕೆಲವರು ಈಗ ಹಳೆಯದನ್ನು ಹೊಸದು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗೌರಿ ಮತ್ತು ಆಮಿರ್ ಮದುವೆಯ ಸಂಭ್ರಮವನ್ನು ಎನ್‌ಕ್ಯಾಶ್ ಮಾಡಿಕೊಂಡು ತಮ್ಮ ವ್ಯೂವ್ಸ್ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಒಟ್ನಲ್ಲಿ ಲೈಕ್ಸ್, ಕಮೆಂಟ್ಸ್ ಆಸೆಯಲ್ಲಿ ಕೆಲವರು ಹಳೆಯ ವಿಡಿಯೋವನ್ನು ಮತ್ತೆ ತೇಲಿ ಬಿಟ್ಟಿದ್ದಾರೆ. ಈ ವಿಡಿಯೋಗೂ ಮತ್ತು ಗೌರಿ ಜೊತೆಗಿನ ಆಮಿರ್ ಖಾನ್ ಮದುವೆಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ''ಫಿಲ್ಮಿಬೀಟ್ ಕನ್ನಡ'' ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ಸಾಬೀತು ಆಗಿದೆ.

English summary
Fact Check: The truth behind the viral video claiming Aamir Khan greeted ex-wife Kiran Rao with a kiss at his wedding to Gauri Spratt. Read the facts!
Read more about: viral video aamir khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X