ಮದುವೆಯಾಗಿ 33 ವರ್ಷಗಳ ಬಳಿಕ ಇಸ್ಲಾಂ ಸ್ವೀಕರಿಸಿದರೇ ಶಾರುಖ್ ಪತ್ನಿ? ವೈರಲ್ ಫೋಟೊ ಹಿಂದಿ ಅಸಲಿಯತ್ತೇನು?
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಬಾಲಿವುಡ್‌ನ ಶ್ರೀಮಂತ ಜೋಡಿಯಷ್ಟೇ ಅಲ್ಲ, ಅತೀ ಪ್ರಭಾವಿ ದಂಪತಿ ಕೂಡ ಹೌದು. ಸುಮಾರು 7 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಶಾರುಖ್ ಖಾನ್ ಬಾಲಿವುಡ್‌ನ ಶ್ರೀಮಂತ ನಟ. ಇವರೊಂದಿಗೆ ಪತ್ನಿ ಗೌರಿ ಖಾನ್ ಕೂಡ ಸಿನಿಮಾ ನಿರ್ಮಾಣ, ಇಂಟಿರಿಯರ್ ಡಿಸೈನ್ ಅಂತ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ಈ ಪವರ್‌ಫುಲ್ ಜೋಡಿ ಚಿತ್ರರಂಗಕ್ಕೆ ಮಾದರಿಯಾಗಿದ್ದಾರೆ. ಇಬ್ಬರದ್ದು ಬೇರೆ ಧರ್ಮ ಆಗಿದ್ದರೂ, ಎರಡ ಧರ್ಮಗಳಿಗೂ ಗೌರವ ಕೊಟ್ಟು ಸಂಸಾರ ನಡೆಸಿಕೊಂಡು ಬಂದಿದ್ದಾರೆ. ಶಾರುಖ್ ಖಾನ್ ಇಸ್ಲಾಂ ಧರ್ಮ ಅನುಸರಿಸಿದರೆ, ಗೌರಿ ಖಾನ್ ಹಿಂದೂ ಧರ್ಮವನ್ನು ಪಾಲಿಸುತ್ತಾರೆ. ಇಬ್ಬರೂ ತಮ್ಮ ಮಕ್ಕಳಿಗೂ ಕೂಡ ಹಿಂದೂ ಹಾಗೂ ಇಸ್ಲಾಂ ಧರ್ಮದ ಹೆಸರುಗಳನ್ನೇ ಇಟ್ಟಿದ್ದಾರೆ.

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಇಬ್ಬರೂ ಪ್ರೀತಿ ಮದುವೆ ಆಗಿದ್ದರು. 1991ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ 33 ವರ್ಷಗಳ ಕಾಲ ಯಶಸ್ವಿ ವೈವಾಹಿಕ ಜೀವನ ನಡೆದಿದ್ದಾರೆ. ಇತ್ತೀಚೆಗೆ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಚ್ಚೇದನಕ್ಕೆ ಮುಂದಾಗುತ್ತಿದ್ದಾರೆ. ಹೀಗಿರುವಾಗ ಮೂರು ದಶಕಗಳಿಗೂ ಅಧಿಕ ಕಾಲ ಸಂಸಾರ ನಡೆಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಇದೇ ವೇಳೆ ಗೌರಿ ಖಾನ್ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಜೊತೆ ಫೋಟೊಗಳು ಕೂಡ ವೈರಲ್ ಆಗುತ್ತಿವೆ. ಅಸಲಿಗೆ ಈ ಫೋಟೊಗಳ ಗುಟ್ಟೇನು?
ಇಸ್ಲಾಂಗೆ ಮತಾಂತರಗೊಂಡರೇ ಗೌರಿ ಖಾನ್?
ಇತ್ತೀಚೆಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆಂದು ಹೇಳುವ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಶಾರುಖ್ ಖಾನ್ ಅಣತಿಯ ಮೇರೆಗೆ ಗೌರಿ ಖಾನ್ ಮೆಕ್ಕಾದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಕೆಲವು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಈ ಫೋಟೋ ಅಸಲಿಯತ್ತೇನು?
ಗೌರಿ ಖಾನ್ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎನ್ನಲಾಗುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಇದು ಎಐ ತಂತ್ರಜ್ಞಾನ ಬಳಸಿ ಕ್ರಿಯೇಟ್ ಮಾಡಿದ ಫೋಟೊಗಳು. ವಿವಾದ ಹುಟ್ಟಾಕುವುದಕ್ಕೆ ಅಂತಲೇ ಇಂತಹ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ ಅನ್ನೋ ಸುದ್ದಿ ಹರಿದಾಡಿದೆ. ಈ ಫೋಟೋಗಳನ್ನು ಬಗ್ಗೆ ತಾರಾ ಜೋಡಿ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ.
ಇದೇ ಮೊದಲೇನು ಅಲ್ಲ
ಎಐ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಂಡು ಸ್ಟಾರ್‌ಗಳನ್ನು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದು ಇದೇ ಮೊದಲೇನಲ್ಲ.. ಈ ಹಿಂದೆ ದೀಪಿಕಾ ಪಡುಕೋಣೆ, ಟೈಲರ್ ಶಿಫ್ಟ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ನಕಲಿ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಆಗಲೂ ಸಿನಿಮಾ ಮಂದಿ ವಿರೋಧವನ್ನು ವ್ಯಕ್ತಪಡಿಸಿದ್ದರು.
ಗೌರಿ ಖಾನ್ ಹಿನ್ನೆಲೆಯೇನು?
ಗೌರಿ ಖಾನ್ ಪಂಜಾಬ್ ಮೂಲದ ಹಿಂದೂ ಧರ್ಮಕ್ಕೆ ಸೇರಿದವರು. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ 1991 ಅಕ್ಟೋಬರ್ 25ರಂದು ವಿವಾಹವಾಗಿದ್ದರು. ಆಗಿನ್ನೂ ಶಾರುಖ್ ಖಾನ್‌ಗೆ ಸ್ಟಾರ್ ಆಗಿರಲಿಲ್ಲ. ಮದುವೆಯಾದಲ್ಲಿಂದ ಇಬ್ಬರೂ ಎರಡೂ ಧರ್ಮವನ್ನು ಗೌರವದಿಂದ ಕಾಣುತ್ತಿದ್ದಾರೆ. ಈ ದಂಪತಿ ಮೂವರು ಮಕ್ಕಳಿದ್ದಾರೆ. ಮೊದಲನೇ ಪುತ್ರ ಆರ್ಯನ್ ಖಾನ್, ಮಗಳು ಸುಹಾನಾ ಖಾನ್ ಹಾಗೂ ಎರಡನೇ ಪುತ್ರ ಅಬ್‌ರಾಮ್ ಖಾನ್.


Click it and Unblock the Notifications











