ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಿ ಪಾಪ ಕರ್ಮಗಳಿಂದ ಮುಕ್ತಿ ಪಡೆದರಾ ಸನ್ನಿ ಲಿಯೋನ್ ...?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ.
ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ, ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುತ್ತೆ. ಇದಕ್ಕೆ ಸನ್ನಿ ಲಿಯೋನ್ ಕುರಿತು ಹಬ್ಬಿರುವ ಸುದ್ದಿ ಸದ್ಯದ ಎಕ್ಸಾಂಪಲ್.

ಹೌದು, ವಯಸ್ಕರ ಚಿತ್ರಗಳ ಮೂಲಕವೇ ಗುರುತಿಸಿಕೊಂಡು ಪಡ್ಡೆ ಹೈಕ್ಳಿಗೆ ತನ್ನ ಮೈಮಾಟದ ಸಿಹಿ ಹಂಚಿದ್ದ ಚೆಲುವೆ ಸನ್ನಿ ಲಿಯೋನ್. ನೀಲಿ ಜಗತ್ತನ್ನು ತೊರೆದು ಆ ನಂತರ ಬಣ್ಣದ ಪ್ರಪಂಚಕ್ಕೆ ಬಂದ ಸನ್ನಿ ಲಿಯೋನ್ ಒಂದು ಕಾಲದಲ್ಲಿ ಬೇಡಿಕೆಯಲ್ಲಿರುವ ಚೆಲುವೆಯರಿಗೆಲ್ಲ ಸೆಡ್ಡು ಹೊಡೆದು ಅನೇಕ ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಸನ್ನಿ ಲಿಯೋನ್‌ಗೆ ಬೇಡಿಕೆ ಇದೆ.
ಇಂಥಾ ಸನ್ನಿ ಲಿಯೋನ್ ಸದ್ಯ ನಡೆಯುತ್ತಿರುವ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ, ಪುಣ್ಯ ಸ್ನಾನ ಮಾಡಿ ತಮ್ಮೆಲ್ಲ ಪಾಪ ಕರ್ಮಗಳನ್ನು ತೊಳೆದುಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಗುಲಾಬಿ ಬಣ್ಣದ ಚೂಡಿದಾರ ಹಾಕಿಕೊಂಡು ಹಣೆಗೆ ಕುಂಕುಮ ಮತ್ತು ಪಟ್ಟಿಯನ್ನು ಬಳಿದುಕೊಂಡಿರುವ ವಿಡಿಯೋವನ್ನು ತೇಲಿ ಬಿಡಲಾಗಿದೆ.
ಇನ್ನೂ ಇದೇ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿಯೊಬ್ಬ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಿ ಸನ್ನಿ ಲಿಯೋನ್ ಪಾಪ ತೊಳೆದುಕೊಂಡಳು ಎಂದು ಬರೆದುಕೊಂಡಿದ್ದಾನೆ. ಇದೆಲ್ಲವನ್ನು ನೋಡಿದ ಅನೇಕರು ಸನ್ನಿ ಲಿಯೋನ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿರುವುದು ನಿಜಾ ಎಂದೇ ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಈ ಸುದ್ದಿ ಸಂಪೂರ್ಣ ಸುಳ್ಳು.
ಹೌದು, ಅಸಲಿಗೆ ಸನ್ನಿ ಲಿಯೋನ್ 2023ರಲ್ಲಿ ತಮ್ಮ ಆಲ್ಬಂ ಹಾಡೊಂದರ ಪ್ರಚಾರ ಮಾಡಲು ವಾರಣಾಸಿಗೆ ತೆರಳಿದ್ದರು. ಈ ಸಮಯದಲ್ಲಿ ಬಾಬಾ ವಿಶ್ವನಾಥ್‌ರನ್ನು ಭೇಟಿ ಮಾಡಿದ್ದರು. ಗಂಗಾ ಆರತಿಯನ್ನು ಕೂಡ ಕಣ್ತುಂಬಿಕೊಂಡಿದ್ದರು. ಆಗ ಈ ವಿಡಿಯೋ ನೂಕು ನುಗ್ಗಲಿನ ವಾತಾವರಣ ಕೂಡ ಕಂಡು ಬಂದಿತ್ತು. ಖುದ್ದು ಸನ್ನಿ ಲಿಯೋನ್ ಡಿಸೆಂಬರ್ 3 2023ರಂದು ತಮ್ಮ ಈ ಆಧ್ಯಾತ್ಮಿಕ ಪ್ರವಾಸದ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋವನ್ನು ಈಗ ವೈರಲ್ ಮಾಡಲಾಗುತ್ತಿದೆ. ಮಹಾಕುಂಭ ಮೇಳದಲ್ಲಿ ಸನ್ನಿ ಲಿಯೋನ್ ಭಾಗವಹಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.
ಸದ್ಯ ತಮ್ಮ ಬಗ್ಗೆ ಹಬ್ಬಿಸಲಾದ ಈ ಸುಳ್ಳು ಸುದ್ದಿಯ ಕುರಿತು ಸನ್ನಿ ಲಿಯೋನ್ ಮಾಧ್ಯಮಗಳಲ್ಲಿ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ವಿಚಾರದ ಕುರಿತು ಸ್ಪಷ್ಟೀಕರಣವನ್ನು ನೀಡಿಲ್ಲ. ಇನ್ನುಳಿದಂತೆ ಸನ್ನಿ ಲಿಯೋನ್ ವೃತ್ತಿ ಜೀವನದ ವಿಚಾರಕ್ಕೆ ಬಂದರೆ ಸನ್ನಿ ಅಭಿನಯಿಸಿದ್ದ 'ಬ್ಯಾಡ್ ಆಸ್ ರವಿಕುಮಾರ್' ಚಿತ್ರ ಫೆಬ್ರವರಿ 7ರಂದು ತೆರೆಗೆ ಬಂದಿತ್ತು. ಇನ್ನು ಎರಡು ವರ್ಷದ ಹಿಂದೆ ಘೋಷಣೆಯಾಗಿದ್ದ ಬ್ಯಾಟೆಲ್ ಆಫ್ ಭೀಮಾ ಕೋರೆಗಾಂವ್ ಚಿತ್ರ ಇನ್ನು ಬಿಡುಗಡೆಯಾಬೇಕಿದೆ. ಈ ವರ್ಷ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.


Click it and Unblock the Notifications











