ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ ನಿಶ್ಚಿತಾರ್ಥನಾ? ಶಾರುಖ್ ಮಾತನ್ನು ಗಂಭೀರವಾಗಿ ಪರಿಗಣಿಸಿದರೇ ಸಾನಿಯಾ?

By ಫಿಲ್ಮಿಬೀಟ್ ಡೆಸ್ಕ್

ವಿಚ್ಛೇದನದ ಪ್ರಕರಣಗಳು ಕೇವಲ ಸಿನಿಮಾರಂಗದಲ್ಲಷ್ಟೇ ಅಲ್ಲ. ಕ್ರೀಡಾ ಲೋಕದಲ್ಲೂ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದಿರೋದು ಸಾನಿಯಾ ಮಿರ್ಜಾ ವಿಚ್ಛೇದನ ಪ್ರಕರಣ. ಹೌದು, ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಡಿವೋರ್ಸ್ ಅನ್ನೋ ವಿಷಯ ಶಾಕ್ ಕೊಟ್ಟಿದ್ದವು.

ಸಾನಿಯಾ ಮಿರ್ಜಾ ದಾಂಪತ್ಯ ಮುರಿದು ಬಿದ್ದ ದಿನದಿಂದ ಅವರು ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ ಅನ್ನೋ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಕೆಲವು ದಿನಗಳಿಂದ ಸಾನಿಯಾ ಮಿರ್ಜಾ ಎರಡನೇ ಮದುವೆ ಬಗ್ಗೆ ಸುದ್ದಿಯೊಂದು ದಿಢೀರನೇ ಹಬ್ಬುವುದಕ್ಕೆ ಶುರುವಾಗಿತ್ತು. ಆದರೆ, ಸಾನಿಯಾ ಮಿರ್ಜಾ ಈ ಬಗ್ಗೆ ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ಹೀಗಿದ್ದೂ ಇಂತಹದ್ದೊಂದು ಸುದ್ದಿ ಓಡಾಡಿತ್ತು.

Sania Mirza and Mohammed Shami engagement rumours

ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹೆಸರು ಮೊಹಮ್ಮದ್ ಶಮಿ ಜೊತೆ ತಳುಕು ಹಾಕಿಕೊಂಡಿದೆ. ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದೆ ಅನ್ನೋ ಮಾತು ಕೇಳಿ ಬಂದಿತ್ತು. ಹಾಗೇ ಅವರ ನಿಶ್ಚಿತಾರ್ಥದ ದಿನವೂ ಕೂಡ ಬಹಿರಂಗವಾಗಿದೆ. ಇದೇ ವರ್ಷ ಆಗಸ್ಟ್ 20ರಂದು ನಿಶ್ವಿತಾರ್ಥ ಮಾಡಿಕೊಳ್ಳಬಹುದು ಎಂಬ ಸುದ್ದಿ ಹಬ್ಬಿತ್ತು.

ಇಂತಹದ್ದೊಂದು ಸುದ್ದಿಯಂತೂ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಆದರೆ, ಸಾನಿಯಾ ಮಿರ್ಜಾ ಆಗಲಿ, ಮೊಹಮ್ಮದ್ ಶಮಿ ಆಗಲಿ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಅಲ್ಲದೆ ಇದು ಕೇವಲ ಗಾಳಿ ಸುದ್ದಿಯಾಗಿದ್ದರೂ, ಅದನ್ನೂ ಇವರಿಬ್ಬರೂ ಸ್ಪಷ್ಟ ಪಡಿಸಿಲ್ಲ. ಇದೆಲ್ಲ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಎನ್ನಲಾಗಿದೆ.

ಸಾನಿಯಾ ಮಿರ್ಜಾರನ್ನು ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಎರಡನೇ ಮದುವೆ ಆಗಿದ್ದರು. ಹೀಗಿದ್ದರೂ, ಎರಡನೇ ಪತ್ನಿ ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿದ್ದು, ಮೂರನೇ ಮದುವೆ ಆಗಿದ್ದಾರೆ. ಪಾಕಿಸ್ತಾನದ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ಬಾರಿ ಮದುವೆ ಆಗಿದ್ದಾರೆ. ಶೋಯೆಬ್ ಮಲ್ಲಿಕ್ ಈ ನಡೆಯನ್ನು ಭಾರತ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನದ ಜನರು ಕೂಡ ಸಾನಿಯಾ ಮಿರ್ಜಾಗೆ ಬೆಂಬಲ ಕೊಟ್ಟಿದ್ದರು.

37 ವರ್ಷದ ಸಾನಿಯಾ ಮಿರ್ಜಾ ತನ್ನ ಮಗ ಇಜ್ಹಾನ್ ಜೊತೆಗೆ ಇದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಸಾನಿಯಾ ಮಿರ್ಜಾ ಭಾಗವಹಿಸಿದ್ದರು. ಈ ವೇಳೆ ಶಾರುಖ್ ಖಾನ್ ಒಂದು ಹೇಳಿಕೆ ಕೊಟ್ಟಿದ್ದರು. ಸಾನಿಯಾ ಮಿರ್ಜಾ ಬಯೋಪಿಕ್ ಏನಾದರೂ ಆದರೆ, ಅದರಲ್ಲಿ ಸಾನಿಯಾ ಮಿರ್ಜಾ ಅವರ ಲವರ್ ಪಾತ್ರದಲ್ಲಿ ನಟಿಸಲು ಇಷ್ಟ ಪಡುತ್ತೇನೆ ಎಂದಿದ್ದರು. ಆ ವೇಳೆ ಸಾನಿಯಾ ಮಿರ್ಜಾ ಪ್ರತಿಕ್ರಿಯೆ ನೀಡಿದ್ದರು.

ಶಾರುಖ್ ಖಾನ್ ಹೇಳಿಕೆಗೆ ಸಾನಿಯಾ ಮಿರ್ಜಾ ಇನ್ನೂ ಪ್ರೀತಿಯ ಹುಡುಕಾಟದಲ್ಲಿ ಇದ್ದೇನೆ ಎಂದಿದ್ದರು. ಇದೇ ಬೆನ್ನಲ್ಲೇ ಈಗ ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಜೊತೆ ಹೆಸರು ತಳುಕು ಹಾಕಿಕೊಂಡಿದೆ. ಇತ್ತ ಮೊಹಮ್ಮದ್ ಶಮಿ ಕೂಡ ತನ್ನ ಪತ್ನಿ ಹಸಿನ್ ಜಹಾನ್‌ರಿಂದ ಬೇರೆಯಾಗಿದ್ದಾರೆ. 33 ವರ್ಷದ ಆಟಗಾರ ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

More from Filmibeat

English summary
Fact Check on Sania Mirza and Mohammed Shami engagement rumours date lock and other details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X