ದೀಪಿಕಾ ಹೃದಯಕ್ಕೇನಾಗಿಲ್ಲ, ಸುಳ್ಳು ಸುದ್ದಿ ನಂಬಿ ಹೃದಯ ಬಡಿತ ಹೆಚ್ಚಿಸಿಕೊಳ್ಳದಿರಿ

ಹೈದರಾಬಾದ್‌ನಲ್ಲಿ ಪ್ರಭಾಸ್ ಜೊತೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೋಣೆಯ ಹೃದಯ ಬಡಿತದಲ್ಲಿ ಅಸಹಜ ಏರಿಳಿತ ಆದ ಕಾರಣ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಮಂಗಳವಾರ ಸಂಜೆ ಹರಿದಾಡಿತ್ತು. ಆದರಿದು ಸುಳ್ಳಾಗಿದೆ.

ಕಳೆದ ಕೆಲವು ದಿನಗಳಿಂದ ದೀಪಿಕಾ ಪಡುಕೋಣೆ ಹೈದರಾಬಾದ್‌ನಲ್ಲಿ ಪ್ರಭಾಸ್ ಸಿನಿಮಾ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ದೀಪಿಕಾ ದಿಢೀರನೇ ಅನಾರೋಗ್ಯಕ್ಕೆ ತುತ್ತಾಗಿ ಕಾಮಿನೇನಿ ಆಸ್ಪತ್ರೆಗೆ ದಾಖಲಾಗಿದ್ದರು, ವೈದ್ಯರು ತುರ್ತು ಚಿಕಿತ್ಸೆ ನೀಡಿ ಎರಡು ದಿನಗಳ ವಿಶ್ರಾಂತಿಗೆ ಸೂಚಿಸಿದ್ದರು. ವಿಶ್ರಾಂತಿಯ ಬಳಿಕ ದೀಪಿಕಾ ಚಿತ್ರೀಕರಣಕ್ಕೆ ಮರಳಿದ್ದಾರೆ ಎಂಬ ಸುದ್ದಿ ಮಂಗಳವಾರ ಸಂಜೆ ವೈರಲ್ ಆಗಿತ್ತು. ಆದರೆ ಇದು ಸುಳ್ಳೆಂದು ಖಾತ್ರಿಯಾಗಿದೆ. ದೀಪಿಕಾ ಪಡುಕೋಣೆ ಚಿತ್ರೀಕರಣದಲ್ಲಿದ್ದು ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ ಎನ್ನಲಾಗಿದೆ.

ಸಿನಿಮಾ ನಟ, ನಟಿಯರು, ರಾಜಕಾರಣಿಗಳ ಬಗ್ಗೆ ಇಂಥಹಾ ಗಾಳಿ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಅಂತೆಯೇ ಈಗ ದೀಪಿಕಾ ಪಡುಕೋಣೆಯ ಬಗ್ಗೆ ಗಾಳಿ ಸುದ್ದಿ ಹರಿದಾಡಿದೆ. ಆದರೆ ಅದು ಸುಳ್ಳೆಂಬುದು ಖಾತ್ರಿಯಾಗಿದೆ.

Fake News Got Viral That Deepika Padukone Admitted To Hospital

ದೀಪಿಕಾ ಪಡುಕೋಣೆಗೆ ಹೃದಯ ಸಮಸ್ಯೆ ಎದುರಾಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಿತರಾಗಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆತಂಕ, ಕಾಳಜಿ ವ್ಯಕ್ತಪಡಿಸಿದ್ದರು. ಆದರೆ ಅದು ಸುಳ್ಳು ಸುದ್ದಿ ಎಂದು ತಿಳಿದು ನಿಟ್ಟಿಸುರಿಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಭಾರತದ ಬಹು ಬ್ಯುಸಿ ಮತ್ತು ದುಬಾರಿ ನಟಿ. ಕೆಲಸದ ಬಗ್ಗೆ ಅತೀವ ಶ್ರದ್ಧೆಯುಳ್ಳ ನಟಿಯೂ ಹೌದು. ಏಕಕಾಲದಲ್ಲಿ ಮೂರು-ನಾಲ್ಕು ಸಿನಿಮಾಗಳ ಚಿತ್ರೀಕರಣ ಜೊತೆಗೆ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ದೀಪಿಕಾರಿಗೆ ಇದೇ ಕಾರಣದಿಂದ ಆರೋಗ್ಯ ಸಮಸ್ಯೆ ಕಾಣಿಸಿದ್ದರೂ ಇರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಅದು ಸುಳ್ಳಾಗಿದೆ.

ಎಷ್ಟೇ ಬ್ಯುಸಿಯಾಗಿದ್ದರೂ ನಟಿ ದೀಪಿಕಾ ಪಡುಕೋಣೆ ಆರೋಗ್ಯದ ಬಗ್ಗೆ ಸದಾ ಕಾಳಜಿವಹಿಸುತ್ತಾರೆ. ಕಠಿಣವಾದ ಡಯೆಟ್ ಫಾಲೋ ಮಾಡುವ ದೀಪಿಕಾ ವ್ಯಾಯಾಮವನ್ನು ಸಹ ಚಾಚೂ ತಪ್ಪದೆ ಮಾಡುತ್ತಾರೆ. ಆರೋಗ್ಯದ ಬಗ್ಗೆ ಅತೀವ ಕಾಳಜಿವಹಿಸುವ ದೀಪಿಕಾ ಅದಕ್ಕಾಗಿ ವಿಶೇಷ ತಂಡವನ್ನೇ ಹೊಂದಿದ್ದಾರೆ ಎನ್ನುವ ಮಾತುಗಳೂ ಇವೆ.

ನಟಿ ದೀಪಿಕಾ ಪಡುಕೋಣೆ ಪ್ರಸ್ತುತ ಪ್ರಭಾಸ್ ನಟನೆಯ ಹೊಸ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸುತ್ತಿದ್ದು, ಸಿನಿಮಾವನ್ನು 'ಮಹಾನಟಿ' ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕಾರಣ ಕೆಲವು ದಿನಗಳ ಹಿಂದಷ್ಟೆ ದೀಪಿಕಾ ಪಡುಕೋಣೆ ತಮ್ಮ ಕುಟುಂಬದೊಟ್ಟಿಗೆ ತಿರುಪತಿಗೆ ಸಹ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದರು.

ಪ್ರಭಾಸ್ ಜೊತೆಗಿನ ಸಿನಿಮಾದ ಜೊತೆಗೆ ಹೃತಿಕ್ ರೋಷನ್ ಜೊತೆಗೆ 'ಫೈಟರ್' ಹೆಸರಿನ ಆಕ್ಷನ್ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಜೊತೆಗೆ 'ಪಠಾಣ್' ಸಿನಿಮಾದಲ್ಲಿಯೂ ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆ ಸಿನಿಮಾದಲ್ಲಿ ಜಾನ್ ಅಬ್ರಹಾಂ ಸಹ ಇದ್ದಾರೆ.

More from Filmibeat

English summary
Fake news spread that Deepika Padukone admitted to Hospital due to chest pain and heart problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X