ಮಗುವನ್ನು ಮುದ್ದಾಡುತ್ತಿರುವ ಆಲಿಯಾ ಭಟ್: ವೈರಲ್ ವಿಡಿಯೋ ಅಸಲಿಯತ್ತೇನು?

ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಪೂರ್ ಹಾಗೂ ಭಟ್ ಫ್ಯಾಮಿಲಿ ಮನೆಗೆ ಹೊಸ ಅತಿಥಿಯ ಆಗಮನವಾದ ಸಂಭ್ರಮದಲ್ಲಿ ತೇಲುತ್ತಿದೆ. ರಣ್‌ಬೀರ್ ಕಪೂರ್ ಮಗಳ ಹೆಸರೇನು? ಜ್ಯೂನಿಯರ್ ಆಲಿಯಾ ಹೇಳಿದ್ದಾಳೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

7 ತಿಂಗಳ ಹಿಂದೆಯಷ್ಟೆ ನಟ ರಣ್‌ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಹಸೆಮಣೆ ಏರಿದ್ದರು. ಮದುವೆಯಾದ ಇಷ್ಟು ಬೇಗ ಮಗುನಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇನ್ನು ಅಭಿಮಾನಿಗಳ ಜೊತೆಗೆ ಸೆಲೆಬ್ರೆಟಿಗಳು ಕೂಡ ದಂಪತಿಗೆ ಶುಭ ಕೋರಿದ್ದಾರೆ. ನವೆಂಬರ್‌ 6 ರಂದು ಮುಂಬೈನ ಕೆಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಟಿ ಆಲಿಯಾ ಭಟ್‌ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಮಗುವಿಗೆ ಏನು ಹೆಸರು ಇಡುತ್ತಾರೆ ಎನ್ನುವ ಚರ್ಚೆ ನಡೀತಿದೆ.

ಆಲಿಯಾ ಭಟ್ ಮಗುವನ್ನು ಮುದ್ದಾಡುತ್ತಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿ ಕೆಲವರು ಜ್ಯೂನಿಯರ್ ಆಲಿಯಾ ಕ್ಯೂಟ್ ಆಗಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅದು ಆಲಿಯಾ ಅಲ್ಲ ಎನ್ನುವುದು ಈಗ ಗೊತ್ತಾಗಿದೆ.

ಕ್ಯೂಟ್ ವಿಡಿಯೋ ವೈರಲ್

ಕ್ಯೂಟ್ ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಫೇಕ್ ವಿಡಿಯೋ, ಫೋಟೊಗಳಿಗೆ ಬರವಿಲ್ಲ. ಆಲಿಯಾ ಭಟ್ ಮಗುವಿನ ವಿಚಾರದಲ್ಲೂ ಇದೇ ಆಗಿದೆ. ದಂಪತಿ ಇನ್ನು ತಮ್ಮ ಮಗುವಿನ ಫೋಟೊವನ್ನು ಎಲ್ಲೂ ಹಂಚಿಕೊಂಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ಚಕ್ಕರ್ ಹೊಡಿತಿದೆ. ಮೆಲ್ನೋಟಕ್ಕೆ ಆ ವಿಡಿಯೋದಲ್ಲಿರುವ ಮಹಿಳೆ ಆಲಿಯಾ ಭಟ್ ರೀತಿಯಲ್ಲಿ ಕಾಣುತ್ತಾಳೆ. ಹಾಗಾಗಿ ಅದು ಆಸ್ಪತ್ರೆಯಲ್ಲಿರುವ ಆಲಿಯಾ ಭಟ್ ಹಾಗೂ ಮಗುವಿನ ವಿಡಿಯೋ ಎಂದು ವೈರಲ್ ಮಾಡಲಾಗಿದೆ. ಕೆಲವರು ಇದನ್ನು ನಂಬಿದ್ದಾರೆ. ಆದರೆ ಆಕೆ ಆಲಿಯಾ ಭಟ್ ಅಲ್ಲ, ಅದು ಆಲಿಯಾ ಮಗು ಕೂಡ ಅಲ್ಲ. ಯಾರೋ ವಿಡಿಯೋ ಮಾರ್ಫಿಂಗ್ ಮಾಡಿರೋದು ಗೊತ್ತಾಗುತ್ತಿದೆ.

3 ವರ್ಷದ ಹಿಂದೆ ಮಗು ಹೆಸರು ಫಿಕ್ಸ್!

3 ವರ್ಷದ ಹಿಂದೆ ಮಗು ಹೆಸರು ಫಿಕ್ಸ್!

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ತಮ್ಮ ಮಗಳಿಗೆ ಏನು ಹೆಸರು ಇಡುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ. 3 ವರ್ಷದ ಹಿಂದೆ ಕಿರುತೆರೆ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಭಾಗಿ ಆಗಿದ್ದರು. ಅಲ್ಲಿ ಬಾಲಕನೊಬ್ಬನ ಜೊತೆ ಆಲಿಯಾ ಮಾತನಾಡುತ್ತಾ ತಮ್ಮ ಹೆಸರಿನ ಸ್ಪೆಲ್ಲಿಂಗ್ ಹೇಳುವಂತೆ ಕೇಳಿದ್ದರು. ಆ ಬಾಲಕ Alia ಎಂದು ಹೇಳುವ ಬದಲಿಗೆ Almaa ಎಂದು ಹೇಳಿದ್ದ. ಇದು ಆಲಿಯಾಗೆ ಬಹಳ ತಮಾಷೆ ಎನಿಸಿತ್ತು. ನಂತರ, 'ಈ ಹೆಸರು ಬಹಳ ಚೆನ್ನಾಗಿದೆ ನನ್ನ ಮಗಳಿಗೆ ಇದೇ ಹೆಸರು ಇಡುತ್ತೇನೆ' ಎಂದಿದ್ದರು. ಈಗ ಆಲಿಯಾಗೆ ಹೆಣ್ಣು ಮಗುನೇ ಹುಟ್ಟಿದೆ. ಹಾಗಾಗಿ ಆಲಿಯಾ ಅಂದು ಹೇಳಿದ ಮಾತನ್ನ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಎರಡೂವರೆ ತಿಂಗಳಿಗೆ ಗುಡ್‌ ನ್ಯೂಸ್

ಎರಡೂವರೆ ತಿಂಗಳಿಗೆ ಗುಡ್‌ ನ್ಯೂಸ್

ಮದುವೆಯಾದ ಎರಡೂವರೆ ತಿಂಗಳಿಗೆ ಆಲಿಯಾ ಭಟ್ ಗರ್ಭಿಣಿ ಆಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೂನ್ 27ರಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ತಿಳಿಸಿದ್ದರು. ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿಯಾಗಿ ಇದ್ದಾಗಲೇ ಹಸೆಮಣೆ ಏರಿದ್ದ ಆಲಿಯಾ ಇಷ್ಟು ಬೇಗ ತಾಯಿ ಆಗುತ್ತಿದ್ದಾರಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಮದುವೆಯಾಗಿ ಎರಡೂವರೆ ತಿಂಗಳಿಗೆ ಗರ್ಭಿಣಿ ಎನ್ನುವ ಮತ್ತಷ್ಟು ಚರ್ಚೆ ಹುಟ್ಟಾಕ್ಕಿದ್ದು ಸುಳ್ಳಲ್ಲ.

ಪ್ರೀತಿಸಿ ಮದುವೆ ಆಗಿದ್ದ ಜೋಡಿ

ಪ್ರೀತಿಸಿ ಮದುವೆ ಆಗಿದ್ದ ಜೋಡಿ

'ಬ್ರಹ್ಮಾಸ್ತ್ರ' ಸಿನಿಮಾ ಶೂಟಿಂಗ್ ಸಮಯದಲ್ಲಿ ರಣ್‌ಬೀರ್ ಹಾಗೂ ಆಲಿಯಾ ಹತ್ತಿರವಾಗಿದ್ದರು. ನನಗೆ 9 ವರ್ಷ ಇರುವಾಗಲೇ ಆತನ ಮೇಲೆ ಕ್ರಶ್ ಆಗಿತ್ತು ಎಂದು ಆಲಿಯಾ ಭಟ್ ಹೇಳಿಕೊಂಡಿದ್ದಾರೆ. ಇನ್ನು ರಣ್‌ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಡವ್ವಿಡವ್ವಿ ಗುಟ್ಟಾಗಿ ಏನು ಉಳಿದಿರಲಿಲ್ಲ. ಎರಡ್ಮೂರು ವರ್ಷ ಪ್ರೀತಿಸಿದ್ದ ಆಲಿಯಾ- ರಣ್‌ಬೀರ್ ಜೋಡಿ ಈ ವರ್ಷ ಏಪ್ರಿಲ್ 14ರಂದು ಕೆಲವೇ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು.

More from Filmibeat

English summary
Fake Video of Alia Bhatt with a baby on hospital bed Goes Viral. The Bollywood couple welcomed their first child, a daughter, on Sunday. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X