ನಕಲಿ ವಿಡಿಯೋ ಹರಿಬಿಟ್ಟು ಶಾರುಖ್ ಖಾನ್ ವಿರುದ್ಧ ಅಪಪ್ರಚಾರ

By ಫಿಲ್ಮಿಬೀಟ್ ಡೆಸ್ಕ್

ನಿನ್ನೆಯಷ್ಟೆ (ಜನವರಿ 25) ಬಿಡುಗಡೆ ಆದ ಶಾರುಖ್ ಖಾನ್ ನಟನೆಯ 'ಪಠಾಣ್' ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದಿದೆ.

ಹಿಟ್ ಸಿನಿಮಾ ಇಲ್ಲದೆ ಒಣಗಿದ್ದ ಬಾಲಿವುಡ್‌ಗೆ ಚೈತನ್ಯ ಮೂಡಿಸಿರುವ ಶಾರುಖ್ ಖಾನ್‌ರ 'ಪಠಾಣ್', ಬಣಗುಟ್ಟುತ್ತಿದ್ದ ಚಿತ್ರಮಂದಿರಗಳಿಗೆ ಜನಸಾಗರ ಹರಿದುಬರುವಂತೆ ಮಾಡಿದ್ದಾರೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ, ಶಾರುಖ್ ಖಾನ್ ಸಿನಿಮಾಕ್ಕೆ ಜನ ಬಂದಿಲ್ಲವೆಂದು, ಸಿನಿಮಾ ಬಹಳ ಕೆಟ್ಟದಾಗಿಯೆಂದು ಕೆಲವರು ಹೇಳುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ.

ಶಾರುಖ್ ಖಾನ್‌ರ ಸಿನಿಮಾ ಬಹಳ ಕೆಟ್ಟದಾಗಿದೆ ಎಂದು ಕೆಲವು ಮಹಿಳೆಯರು ಹೇಳುತ್ತಿರುವ, ಇನ್ನೊಬ್ಬ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದಾತ ಶಾರುಖ್ ಖಾನ್‌ರ ಈ ಸಿನಿಮಾ ಅತ್ಯಂತ ಕೆಟ್ಟ ಸಿನಿಮಾ ಎಂದು ತೆಗಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, 'ಪಠಾಣ್' ಸಿನಿಮಾದ ಪಬ್ಲಿಕ್ ರಿಯಾಕ್ಷನ್ ಇದು ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ನಕಲಿ ವಿಡಿಯೋಗಳನ್ನು ಹರಿ ಬಿಡಲಾಗುತ್ತಿದೆ

ನಕಲಿ ವಿಡಿಯೋಗಳನ್ನು ಹರಿ ಬಿಡಲಾಗುತ್ತಿದೆ

ಆದರೆ ಅಸಲಿಗೆ ಈ ವಿಡಿಯೋಗಳು ಈಗಿನದ್ದಲ್ಲ. ಇವು ಐದು ವರ್ಷದ ಹಿಂದಿನ ವಿಡಿಯೋಗಳು. ಶಾರುಖ್ ಖಾನ್‌ರ ಫ್ಲಾಪ್ ಸಿನಿಮಾ 'ಜೀರೋ' ಬಿಡುಗಡೆ ಆದಾಗಿನ ವಿಡಿಯೋಗಳನ್ನು ಈಗ 'ಪಠಾಣ್' ಸಿನಿಮಾದ ಪಬ್ಲಿಕ್ ರಿಯಾಕ್ಷನ್ ಎಂಬ ಸುಳ್ಳು ಕ್ಯಾಪ್ಷನ್ ಜೊತೆಗೆ ಹರಿಬಿಡಲಾಗುತ್ತಿದೆ.

'ಫ್ಲಾಪ್' ಆಗಿದ್ದ ಜೀರೋ ಸಿನಿಮಾ

'ಫ್ಲಾಪ್' ಆಗಿದ್ದ ಜೀರೋ ಸಿನಿಮಾ

ಶಾರುಖ್ ಖಾನ್ ನಟನೆಯ 'ಜೀರೋ' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಜನರ ನಿರೀಕ್ಷೆಯನ್ನು ಚೂರು ಮಾಡಿತ್ತು. ಹಾಗಾಗಿ ಸಹಜವಾಗಿಯೇ ಪ್ರೇಕ್ಷಕರು ಸಿನಿಮಾದ ವಿರುದ್ಧ ಮಾತನಾಡಿದ್ದರು. ಆದರೆ ಆಗ ಮಾತನಾಡಿದ್ದ ವಿಡಿಯೋವನ್ನು ಇಟ್ಟುಕೊಂಡು ಈಗ ಅದು 'ಪಠಾಣ್' ಸಿನಿಮಾದ ಪ್ರೇಕ್ಷಕರ ರಿಯಾಕ್ಷನ್ ಎಂದು ಹೇಳಿ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಕೆಲವು ಫ್ಯಾಕ್ಟ್ ಚೆಕ್ ವೆಬ್‌ಸೈಟ್‌ಗಳು ಹಾಗೂ ಶಾರುಖ್ ಅಭಿಮಾನಿಗಳು ಈ ಸುಳ್ಳು ಸುದ್ದಿಗಳನ್ನು ಜನರ ಮುಂದೆ ಬಹಿರಂಗ ಮಾಡಿದ್ದಾರೆ.

ಶಾರುಖ್ ಖಾನ್ ವಿರುದ್ಧ ಅಸಹಿಷ್ಣುತೆ

ಶಾರುಖ್ ಖಾನ್ ವಿರುದ್ಧ ಅಸಹಿಷ್ಣುತೆ

ಶಾರುಖ್ ಖಾನ್‌ರ ವಿರುದ್ಧ ಕೆಲವು ಸಂಘಟನೆಗಳು ಮೊದಲಿನಿಂದಲೂ ವಿನಾಕಾರಣ ದ್ವೇಷ ಬೆಳೆಸಿಕೊಂಡೆ ಬಂದಿವೆ. ಶಾರುಖ್ ಖಾನ್‌ರ ಈ ಹಿಂದಿನ ಸಿನಿಮಾಗಳಿಗೂ ಇದೇ ರೀತಿ ಸುಳ್ಳು ಸುದ್ದಿ, ನಕಲಿ ವಿಮರ್ಶೆಗಳ ಮೂಲಕ ಸಮಸ್ಯೆ ನೀಡುವ ಪ್ರಯತ್ನಗಳು ನಡೆದಿದ್ದವು. ಈ ಸಿನಿಮಾದ ಬಿಡುಗಡೆ ಮುನ್ನವೂ ಪ್ರತಿಭಟನೆಗಳು ನಡೆದವು, ಬಿಡುಗಡೆ ದಿನವೂ ನಡೆದವು. ಆದರೆ ಎಲ್ಲ ಅಡೆ-ತಡೆಗಳನ್ನು ಮೀರಿ ಶಾರುಖ್ ಖಾನ್ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಇದೀಗ 'ಪಠಾಣ್' ಸಿನಿಮಾ ಮೂಲಕ ಮತ್ತೊಮ್ಮೆ ಗೆದ್ದಿದ್ದಾರೆ. ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.

ಭಾರಿ ಕಲೆಕ್ಷನ್ ಮಾಡುವ ನಿರೀಕ್ಷೆ

ಭಾರಿ ಕಲೆಕ್ಷನ್ ಮಾಡುವ ನಿರೀಕ್ಷೆ

'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಜಾನ್ ಅಬ್ರಹಾಂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದು, ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಭರ್ಜರಿ ಕ್ಯಾಮಿಯೋ ಮಾಡಿದ್ದಾರೆ. ಸಿನಿಮಾ ನೂರಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಕಂಡಿದ್ದು, ದೊಡ್ಡ ಮೊತ್ತದ ಕಲೆಕ್ಷನ್ ಅನ್ನು ಬಾಕ್ಸ್ ಆಫೀಸ್‌ನಲ್ಲಿ ಮಾಡುವ ನಿರೀಕ್ಷೆ ಹುಟ್ಟಿಸಿದೆ.

More from Filmibeat

English summary
Some people using fake and old videos to defame Shah Rukh Khan's new super hit movie Pathaan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X