'ಕೂಲಿ' ಚಿತ್ರದಲ್ಲಿ ನಟಿಸಿ ತಪ್ಪು ಮಾಡಿಬಿಟ್ಟೆ ಅಂದ್ರಾ ಆಮೀರ್ ಖಾನ್?

ರಜನಿಕಾಂತ್ ನಟನೆಯ 'ಕೂಲಿ' ಇದೀಗ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಸ್ಮಾಲ್‌ಸ್ಕ್ರೀನ್‌ನಲ್ಲಿ ಕೂಡ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲವರು ಅದ್ಭುತ ಅಂದ್ರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ನಾಗಾರ್ಜುನ, ಆಮೀರ್ ಖಾನ್, ಉಪೇಂದ್ರ ನಟಿಸಿದ್ದು ಕೂಡ ಚಿತ್ರಕ್ಕೆ ಹೆಚ್ಚಿನ ಸಹಾಯ ಏನು ಮಾಡಲಿಲ್ಲ.

ಮಿಶ್ರಪ್ರತಿಕ್ರಿಯೆ ನಡುವೆಯೂ 'ಕೂಲಿ' ಸಿನಿಮಾ 500 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಹಿಂದಿ ಬೆಲ್ಟ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯಲು ಆಮೀರ್ ಖಾನ್ ಗೆಸ್ಟ್ ಅಪಿಯರೆನ್ಸ್ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಆರಂಭದಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೊನೆ ಕೊನೆಗೆ ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ಕೂಡ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಸಿನಿರಸಿಕರು ಹುಬ್ಬೇರಿಸಿದ್ದರು.

False Report About Aamir Khan s Coolie Statement Spreads on Social Media

ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಅಂದಾಗ್ಲೇ ನಿರೀಕ್ಷೆ ದುಪ್ಪಟ್ಟಾಗಿತ್ತು. ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಜೊತೆಯಾದ ಮೇಲೆ ಹೈಪ್ ಹೆಚ್ಚಾಗಿತ್ತು. ಆದರೆ ಆ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಸೋತಿತ್ತು. ದಹಾ ಎಂಬ ಪಾತ್ರದಲ್ಲಿ ಆಮೀರ್ ಮಿಂಚಿದ್ದಾರೆ. ಚಿತ್ರದ ಕೊನೆ ಕೊನೆಗೆ ಅವರು ತೆರೆಮೇಲೆ ಅಬ್ಬರಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಸದ್ಯ ಆಮೀರ್ ಖಾನ್ ಬಗ್ಗೆ ಸುಳ್ಳು ಸುದ್ದಿ ವೈರಲ್ ಆಗ್ತಿದೆ. 'ಕೂಲಿ' ಚಿತ್ರದಲ್ಲಿ ನಟಿಸಿ ತಪ್ಪು ಮಾಡಿಬಿಟ್ಟೆ ಎಂದು ಖುದ್ದು ಆಮೀರ್ ಹೇಳಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹರಿದಾಡುತ್ತಿದೆ. ಯಾವುದೇ ಪತ್ರಿಕೆಗೆ ಸಂದರ್ಶನ ನೀಡಿ ಅವರು ಈ ಮಾತು ಹೇಳಿದ್ದಾರೆ ಎಂದು ಪೇಪರ್ ಕಟ್ಟಿಂಗ್ ಸ್ಕ್ರೀನ್‌ಶಾಟ್ ವೈರಲ್ ಆಗ್ತಿದೆ. ಆದರೆ ಇದೆಲ್ಲಾ ಸುಳ್ಳು ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಆಮೀರ್ ಖಾನ್ ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಯಾರೋ ಕಿಡಿಗೇಡಿಗಳು ಸುಖಾಸುಮ್ಮನೆ ಹಬ್ಬಿಸಿರುವ ಸುಳ್ಳು ಸುದ್ದಿ ಇದು ಎಂದು ಹೇಳಲಾಗ್ತಿದೆ. ಅಂದಹಾಗೆ ಆಮೀರ್ ಹಾಗೂ ಲೋಕೇಶ್ ಒಟ್ಟಾಗಿ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. 'ಕೂಲಿ' ಸೋಲಿನ ಬಳಿಕ ಆ ಸಿನಿಮಾ ಕೂಡ ನಿಂತು ಹೋಗಿದೆ ಅಂತೆಲ್ಲಾ ಊಹಾಪೋಹ ಸುದ್ದಿಗಳನ್ನು ಹಬ್ಬಿಸಲಾಗಿದೆ. ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಆಮೀರ್ ಖಾನ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಮೊದಲಿನ ರೀತಿ ಅವರ ಸಿನಿಮಾಗಳು ಸದ್ದು ಮಾಡ್ತಿಲ್ಲ. ಇಂತಹ ಸಮಯದಲ್ಲೇ 'ಕೂಲಿ' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸೋಕೆ ಒಪ್ಪಿದ್ದರು. ಲೋಕೇಶ್ ಕೆಲಸ ನೋಡಿ ಮೆಚ್ಚಿರುವ ಅವರು ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದೊಡ್ಡಮಟ್ಟದಲ್ಲಿ ಆ ಸಿನಿಮಾ ಪ್ಲ್ಯಾನ್ ಆಗ್ತಿದೆ. ಈ ಮೂಲಕ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಬಾಲಿವುಡ್ ಪ್ರವೇಶಿಸಲಿದ್ದಾರೆ.

ನಿರ್ದೇಶಕ ಲೋಕೇಶ್ ಕನಕರಾಜ್ ಹೀರೊ ಆಗುವ ಸಾಹಸ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಎಂದು ಹೇಳಲಾಗ್ತಿದೆ. ಆ ಸಿನಿಮಾ ಬಳಿಕವೇ ಆಮೀರ್ ಖಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ. ಸನ್ ಪಿಕ್ಚರ್ಸ್ ಸಂಸ್ಥೆ 'ಕೂಲಿ' ಚಿತ್ರ ನಿರ್ಮಾಣ ಮಾಡಿತ್ತು. ಚಿತ್ರದಲ್ಲಿ ಮಲಯಾಳಂ ನಟ ಸೌಬಿನ್ ಸಾಹಿರ್ ಹಾಗೂ ಕನ್ನಡ ನಟಿ ರಚಿತಾ ರಾಮ್ ಪಾತ್ರಗಳ ಬಗ್ಗೆ ಭಾರೀ ಮೆಚ್ಚುಗೆಯಾಗಿತ್ತು.

ಸಿನಿಮಾ ನೋಡಿದ ಕೆಲವರು ರಜನಿಕಾಂತ್ ಚಿತ್ರದ ಹೀರೊ ಅಲ್ಲ ಸೌಬಿನ್ ಹಾಗೂ ರಚ್ಚು ತಮ್ಮ ಪವರ್‌ಫುಲ್ ಪಾತ್ರಗಳಿಂದ ಹೀರೊಗಳಾಬಿಟ್ಟಿದ್ದಾರೆ ಎಂದಿದ್ದರು. ಭಾರೀ ಮೊತ್ತಕ್ಕೆ ಪ್ರೈಂ ವೀಡಿಯೋ ಸಂಸ್ಥೆ 'ಕೂಲಿ' ಓಟಿಟಿ ರೈಟ್ಸ್ ಖರೀದಿಸಿ ಸ್ಟ್ರೀಮಿಂಗ್ ಮಾಡ್ತಿದೆ.

More from Filmibeat

English summary
No, Aamir Khan Did Not Regret Acting in ‘Coolie’ – Viral Claim Debunked
Read more about: rajinikanth aamir khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X