For Quick Alerts
  ALLOW NOTIFICATIONS  
  For Daily Alerts

  ಮಗಳು-ಪತ್ನಿ ಜೊತೆ ಚಿತ್ರೀಕರಣದಲ್ಲಿ ತೊಡಗಿದ ಅಮಿತಾಬ್ ಬಚ್ಚನ್

  |

  ನಟ ಅಮಿತಾಬ್ ಬಚ್ಚನ್ ಕುಟುಂಬದ ಬಹುತೇಕರು ಸ್ಟಾರ್ ನಟರು. ಅಮಿತಾಬ್ ಪತ್ನಿ ಜಯಾ ಈಗಲೂ ನಟಿಸುತ್ತಿದ್ದಾರೆ. ಐಶ್ವರ್ಯಾ ರೈ ಸಹ. ಅಭಿಷೇಕ್ ಬಚ್ಚನ್ ರ ಲೂಡೊ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಅಮಿತಾಬ್ ಮಗಳು ಸಹ ನಟನೆಗೆ ಇಳಿದಿದ್ದಾರೆ.

  ಅಮಿತಾಬ್ ಮಗಳು ಶ್ವೇತ ಬಚ್ಚನ್ ನಂದಾ, ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಚಿತ್ರೀಕರಣದ ಸೆಟ್‌ನಲ್ಲಿ ಸೆಲ್ಫಿ ತೆಗೆದು ಪ್ರಕಟಿಸಿದ್ದಾರೆ ಅಮಿತಾಬ್.

  ಜಯಾ ಬಚ್ಚನ್, ಶ್ವೇತಾ ಬಚ್ಚನ್‌ ನಂದಾ ಗೆ ಗಮನಕ್ಕೆ ಬಾರದಂತೆ ಸೆಲ್ಫಿ ತೆಗೆದು ಪ್ರಕಟಿಸಿರುವ ಅಮಿತಾಬ್ ಬಚ್ಚನ್, 'ಫ್ಯಾಮಿಲಿ ಅಟ್ ವರ್ಕ್' ಎಂದು ಕ್ಯಾಪ್ಷನ್ ನೀಡಿ ಇನ್‌ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಾರೆ. ಚಿತ್ರಕ್ಕೆ ಹಲವು ಲೈಕ್ ಮತ್ತು ಕಮೆಂಟ್‌ಗಳು ಬಂದಿವೆ.

  6 ಗಂಟೆ ಆದ್ರೆ ಒಂದು ಸಲ ಗಡಿಯಾರ ನೋಡಿ ಸಿಗ್ನಲ್ ಕೊಡ್ತಾ ಇದ್ರು ರಾಜ್ ಕುಮಾರ್ | Jaggesh and DR Rajkumar

  ಅಮಿತಾಬ್ ಬಚ್ಚನ್ ನಟನೆಯ ಬ್ರಹ್ಮಾಸ್ತ್ರ, ಝುಂಡ್, ಚೆಹರೆ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಈ ನಡುವೆ ಅಜಯ್ ದೇವಗನ್-ರಾಕುಲ್ ಪ್ರೀತ್ ಸಿಂಗ್ ನಟನೆಯ 'ಮೇ ಡೇ' ಸಿನಿಮಾದಲ್ಲಿ ಅಮಿತಾಬ್ ನಟಿಸಲಿದ್ದಾರೆ. ಪ್ರಭಾಸ್ಸ-ದೀಪಿಕಾ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಕಿರುತೆರೆಯಲ್ಲಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಸಹ ನಿರೂಪಿಸಿಕೊಡುತ್ತಿದ್ದಾರೆ.

  English summary
  Actor Amitabh Bachchan shares selfie with wife Jaya Bachchan and daughter Shwetha Bachchan Nanda from the shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X