ಮನಸ್ತಾಪ, ಕಲಹ, ವಿಚ್ಛೇದನ ; ಅಭಿಷೇಕ್ ಬಚ್ಚನ್ -ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು - ನಂಬ್ತಾಳಾ ಮಗಳು?

ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.

ಯಾಕೆಂದರೆ ಹೀಗೆ ಹರಿದಾಡುವ ಸುದ್ದಿಗಳಲ್ಲಿ ಅರ್ಧಕ್ಕೆ ಅರ್ಧ ಸುಳ್ಳಾಗಿರುತ್ತಾವೆ. ಇನ್ನೂ ಕೆಲ ಒಮ್ಮೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದಲೇ ಕೆಲವರು ''ಫೇಕ್ ನ್ಯೂಸ್‌''ಗಳನ್ನು ತೇಲಿ ಬಿಡುತ್ತಾರೆ. ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ.

family-first-abhishek-bachchan-reveals-aishwarya-rais-plan-to-protect-aaradhya-from-divorce-rumour

2024ರಲ್ಲಿ ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಪ್ರಕರಣ ದಾಖಲಾಗಿವೆ. ''ಸುಳ್ಳು ಸುದ್ದಿ'' ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಅರಿವು ಇದ್ದರು ಕೂಡ ಲೈಕ್ಸ್ .. ಶೇರ್‌ಗಳ ಹುಚ್ಚಿಗೆ ಬಿದ್ದ ಅನೇಕರು ''ಸುಳ್ಳು ಸುದ್ದಿ''ಯನ್ನು ಬರೆಯುತ್ತಾರೆ. ಹಂಚಿಕೊಳ್ಳುತ್ತಾರೆ. ಈ ಹಿನ್ನೆಲೆ .. ಇದೆಲ್ಲವೂ ಮಾಮೂಲು ಎಂದುಕೊಂಡ ಅನೇಕರು ಸುಮ್ಮನಾಗುತ್ತಾರೆ. ಒಂದರ್ಥದಲ್ಲಿ ಹಲವರಿಗೆ ಈ ಸುಳ್ಳು ಸುದ್ದಿಗಳನ್ನು ಕೇಳಿ ಅಭ್ಯಾಸವಾಗಿ ಬಿಟ್ಟಿರುತ್ತೆ. ಉದಾಹರಣೆಗೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್.

ಹೌದು, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ. ಅನೇಕರಿಗೆ ಗೊತ್ತಿರುವಂತೆ ಕಳೆದ ಎರಡು ಮೂರು ವರ್ಷಗಳಿಂದ ಇಬ್ಬರು ವಿಚ್ಛೇದನ ಪಡೆಯುತ್ತಾರೆ.. ದೂರವಾಗುತ್ತಾರೆ.. ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ.

ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡೆ ಕೂಡ ಹಾಗೇ ಇದೆ. ಜನ ಎಷ್ಟೇ ಮಾತನಾಡಿದರೂ ಕೂಡ ಇಬ್ಬರು ಮೌನ ಮುರಿಯುತ್ತಿಲ್ಲ. ಹೆಚ್ಚಾಗಿ ಜೊತೆಯಲ್ಲಿ ಇಬ್ಬರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಸಭೆ-ಸಮಾರಂಭಗಳಲ್ಲಿ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ ಅಷ್ಟೇ.

ಇದರಿಂದ ಹಲವರ ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹೀಗಾಗಿ ಇವರಿಬ್ಬರ ನಡುವೆ ಬಿರುಕು ಮೂಡಿದೆ ಎನ್ನುವ ವಿಚಾರವನ್ನು ಹಲವರು ನಿಜಾ ಎಂದೇ ಅಂದುಕೊಂಡಿದ್ದಾರೆ. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬಚ್ಚನ್ ವರ್ಷದ ನಂತರ ಮೌನ ಮುರಿದಿದ್ದಾರೆ. ಮನ ಬಿಚ್ಚಿ ಮಾತನಾಡಿದ್ದಾರೆ. ಸತ್ಯ ಏನು..? ತಮ್ಮ ಮಗಳು ಆರಾಧ್ಯಗೆ ತಮ್ಮ ಕುರಿತು ಹರಿದಾಡುವ ಸುದ್ದಿಗಳ ಕುರಿತು ಗೊತ್ತಾ..ಇಲ್ವಾ..? ಎನ್ನುವುದನ್ನು ಹೇಳಿದ್ದಾರೆ.

family-first-abhishek-bachchan-reveals-aishwarya-rais-plan-to-protect-aaradhya-from-divorce-rumour

ಈ ಕುರಿತು ''ಪೀಪಿಂಗ್‌ಮೂನ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಭಿಷೇಕ್ ಬಚ್ಚನ್, ನಮ್ಮ ಮಗಳು ಆರಾಧ್ಯ ಲಾಲನೆ-ಪಾಲನೆಯಲ್ಲಿ ಐಶ್ವರ್ಯ ಪಾತ್ರ ತುಂಬಾ ದೊಡ್ಡದು ಎಂದು ಹೇಳಿದ್ದಾರೆ. ಚಿತ್ರರಂಗದ ಕುರಿತು, ನಮ್ಮ ಕೆಲಸದ ಕುರಿತು, ಐಶ್ವರ್ಯ ನಮ್ಮ ಮಗಳು ಆರಾಧ್ಯಗೆ ಒಳ್ಳೆಯ ವಿಚಾರಗಳನ್ನು ಹೇಳಿದ್ದಾರೆ, ನಾವು ಇಂದು ಏನಿದ್ದೇವೆ, ಅದೆಲ್ಲದಕ್ಕೂ ಕಾರಣ ಜನ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಆರಾಧ್ಯಗೆ ತನ್ನದೇ ಆದ ಆಲೋಚನೆಗಳಿವೆ. ತುಂಬಾನೇ ಆತ್ಮವಿಶ್ವಾಸವನ್ನೊಂದಿರುವ ಬಾಲಕಿ ಅವಳು ಎಂದು ಹೇಳಿರುವ ಅಭಿಷೇಕ್ ಬಚ್ಚನ್ ಆಕೆಗೆ ಈಗ 14 ವರ್ಷ ಆದರೆ ಅವಳ ಬಳಿ ಫೋನ್ ಇಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಸ್ನೇಹಿತರು ಅವಳ ಜೊತೆ ಮಾತನಾಡಲೇಬೇಕು ಎಂದು ಬಯಸಿದರೆ ಅವರು ಆರಾಧ್ಯ ತಾಯಿ ಐಶ್ವರ್ಯಗೆ ಕರೆ ಮಾಡಬೇಕು ಎಂದು ಹೇಳಿರುವ ಅಭಿಷೇಕ್ ಬಚ್ಚನ್,ಆಕೆಯ ಕೈಗೆ ಫೋನ್ ನೀಡಬಾರದು ಎಂಬ ನಿರ್ಧಾರವನ್ನು ನಾವು ತುಂಬಾ ವರ್ಷಗಳ ಹಿಂದೆಯೇ ಮಾಡಿದ್ದೇವು ಎಂದು ಹೇಳಿದ್ದಾರೆ.

ಆಕೆಯ ಬಳಿ ಫೋನ್ ಇರದ ಕಾರಣ, ನಮ್ಮ ಕುರಿತು ಬರುವ ಊಹಾಪೋಹದ ಸುದ್ದಿಗೆ ಆಕೆಯನ್ನು ತಲುಪುವುದಿಲ್ಲ ಎಂದು ಹೇಳಿರುವ ಅಭಿಷೇಕ್ ಬಚ್ಚನ್, ಮನೆಯಲ್ಲಿ ಆರಾಧ್ಯಗೆ ನಾವು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿದ್ದೇವೆ. ಆದರೆ ಆಕೆ ಆ ವ್ಯವಸ್ಥೆ ಕೇವಲ ತನ್ನ ಶೈಕ್ಷಣಿಕ ವಿಚಾರಕ್ಕೆ ಮಾತ್ರ ಉಪಯೋಗಿಸುತ್ತಾಳೆ ಎಂದು ಹೇಳಿದ್ದಾರೆ. ಮನೆ ಕೆಲಸ ತನ್ನ ಓದಿಗೆ ಏನಾದರೂ ಸಂಶೋಧನೆ ಮಾಡಬೇಕಿದ್ದರೆ ಬಳಸುತ್ತಾಳೆ ಎಂದಿದ್ದಾರೆ.

ಇನ್ನೂ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವಾಗಲಾದರೂ ಕೂಡ ಡಿವೋರ್ಸ್ ಸುದ್ದಿ ಕಣ್ಣಿಗೆ ಬೀಳಬಹುದಲ್ಲಾ..? ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅಭಿಷೇಕ್ ಬಚ್ಚನ್, ಆಕೆ ತನ್ನ ಕಣ್ಣೆದುರು ಇರುವ ಎಲ್ಲ ಸುದ್ದಿಗಳನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಆಗಲೇ ಹೇಳಿದಂತೆ ಐಶ್ವರ್ಯ ರೈ ನಮ್ಮ ಮಗಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ಹೇಳಿಕೊಟ್ಟಿದ್ದಾಳೆ. ಓದಿದ್ದೆಲ್ಲವನ್ನೂ ನಂಬಬೇಡ ಎಂದು ಕೂಡ ಆರಾಧ್ಯಗೆ ಐಶ್ವರ್ಯ ಕಲಿಸಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದಾರೆ. ಇನ್ನಾದರೂ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ದಾಂಪತ್ಯ ಜೀವನದ ಕುರಿತು ಚರ್ಚೆ ನಿಲ್ಲುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Learn Aishwarya Rai's strategy for shielding daughter Aaradhya from reading divorce gossip, as revealed by Abhishek Bachchan in his latest statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X