»   » ಕಾಂಡೋಮ್ ಜಾಹೀರಾತಿನಲ್ಲಿ 'ಫ್ಯಾಮಿಲಿವಾಲಾ'

ಕಾಂಡೋಮ್ ಜಾಹೀರಾತಿನಲ್ಲಿ 'ಫ್ಯಾಮಿಲಿವಾಲಾ'

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಸಿಕರ ಹೃದಯ ಕದ್ದ ನಟ ಈಗ ಕಾಂಡೋಮ್ ಜಾಹೀರಾತಿನ ಮೂಲಕ ಎಲ್ಲರ ಗಮನಸೆಳೆಯರು ಬರುತ್ತಿದ್ದಾರೆ. ಇದಕ್ಕೆ ಅವರು ಪಡೆರುವ ಸಂಭಾವನೆ ಸಹ ಕೋಟಿಗಳಲ್ಲೇ ಇದೆ. ಮೂಲಗಳ ಪ್ರಕಾರ ರು.5 ಚಿಲ್ಲರೆ ಕೋಟಿ ಎನ್ನಲಾಗಿದೆ.

ಈತ ಬೇರಾರು ಅಲ್ಲ ಸದ್ಯಕ್ಕೆ 'ಫ್ಯಾಮಿಲಿವಾಲಾ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ಅರ್ಜುನ್ ರಾಮ್ ಪಾಲ್. ಇತ್ತೀಚೆಗೆ ತೆರೆಕಂಡ 'ಡಿ-ಡೇ' ಎಂಬ ಚಿತ್ರದಲ್ಲಿ ರುದ್ರ ಪ್ರತಾಪ್ ಸಿಂಗ್ ಪಾತ್ರದಲ್ಲಿ ಅರ್ಜುನ್ ಗಮನಸೆಳೆದಿದ್ದರು.


ನಲವತ್ತರ ಹರೆಯದ ಅರ್ಜುನ್ ರಾಮ್ ಪಾಲ್ ಅವರಿಗೆ ತನ್ನದೇ ಆದಂತಹ ಪ್ರೇಕ್ಷಕ ವರ್ಗವಿದೆ. ಅದರಲ್ಲಿ ಹೆಚ್ಚಾಗಿ ಹೆಂಗಳೆಯರೇ ಎಂಬುದು ವಿಶೇಷ. ಈಗ ಕಾಂಡೋಮ್ ಜಾಹೀರಾತಿಗಾಗಿ ಅವರು ಬೇಡಿಕೆ ಇಟ್ಟಿದ್ದು ರು.6 ಕೋಟಿಯಂತೆ. ಕಡೆಗೆ ಹಾಗೂ ಹೀಗೂ ಚೌಕಾಸಿ ಮಾಡಿದ ಕಂಪನಿ ಐದು ಚಿಲ್ಲರೆ ಕೋಟಿಗೆ ಡೀಲ್ ಕುದುರಿಸಿದೆ.

ಜನಪ್ರಿಯ ನಟನೊಬ್ಬ ಕಾಂಡೋಮ್ ಜಾಹೀರಾತಿಗಾಗಿ ಈ ಪಾಟಿ ದುಡ್ಡು ಎಣಿಸುತ್ತಿರುವುದು ಬಾಲಿವುಡ್ ನಲ್ಲಿ ಇದೇ ಮೊದಲು. ಯಾವ ಬ್ರ್ಯಾಂಡ್ ಕಾಂಡೋಮ್ ಅದು ಎಂಬುದು ಇನ್ನೂ ಸದ್ಯಕ್ಕೆ ಬಹಿರಂಗವಾಗಿಲ್ಲ. ರಾಕ್ ಆನ್ 2 ಮತ್ತು ರಾಯ್ ಎಂಬೆರಡು ಚಿತ್ರಗಳಲ್ಲೂ ಅರ್ಜುನ್ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
The Familywala actor Arjun Rampal will soon be seen advertising for a condom brand. The reports say that an amount of Rs. 6 crore is asked to promote the particular condom brand. 
Please Wait while comments are loading...