ಖ್ಯಾತ ರಾಜಕಾರಣಿ ಮಗಳು ಹಣಕ್ಕಾಗಿ ಅಶ್ಲೀಲ ಫೋಟೊ, ವಿಡಿಯೋ ಮಾರಿಕೊಳ್ತಿದ್ದಾರಾ?

ಇದು ದುಡ್ಡಿನ ದುನಿಯಾ.. ಹಣಕ್ಕಾಗಿ ನಾನಾ ವೇಷ ಹಾಕುವವರು ಇದ್ದಾರೆ. ಹಣಕ್ಕಾಗಿಯೇ ಕಲಾವಿದರು ಸಿನಿಮಾಗಳಲ್ಲಿ ನಟಿಸುತ್ತಾರೆ. ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ನಾನಾ ರೀತಿ ಈಗ ಸಾಕಷ್ಟು ಜನ ಆದಾಯ ಗಳಿಸುತ್ತಿದ್ದಾರೆ.

ಸಿನಿಮಾ ನಟಿಯರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತಮಗಿರುವ ಜನಪ್ರಿಯತೆ ಬಳಸಿಕೊಂಡು ಫಾಲೋವರ್ಸ್‌ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಷನ್ ಆಪ್ಷನ್ ಸಿಕ್ಕಿದೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲೇ ಹಣ ಪಡೆದು ಚಂದಾದಾರರಿಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್ ಕೊಡುವ ಲೆಕ್ಕಾಚಾರ ಶುರುವಾಗಿದೆ. ನಟಿ ನೇಹಾ ಶರ್ಮಾ ಕೂಡ ಇನ್‌ಸ್ಟಾ ಸಬ್‌ಸ್ಕ್ರಿಪ್ಷನ್ ಬಟನ್ ಆನ್ ಮಾಡಿದ್ದಾರೆ.

Famous Actress Trolled Over Instagram Subscription as Exclusive Content Sparks Social Media Debate

ಇತ್ತೀಚೆಗೆ ತೆಲುಗು ನಿರೂಪಕಿ ವಿಷ್ಣುಪ್ರಿಯಾ ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆಕೆಯ ವಿರುದ್ಧ ದೂರು ಸಹ ದಾಖಲಾಗಿತ್ತು. ಹೀಗೆ ಸಬ್‌ಸ್ಕ್ರಿಪ್ಷನ್ ಹೆಸರಿನಲ್ಲಿ ಹಣ ಪೀಕಿ ಅರೆಬೆತ್ತಲೆ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಬಿಹಾರ ಮೂಲದ ನಟಿ, ಮಾಡೆಲ್ ನೇಹಾ ಶರ್ಮಾ ಕೂಡ ಈಗ ಇದೇ ಕಾರಣಕ್ಕೆ ಸಖತ್ ಟ್ರೋಲ್ ಆಗುತ್ತಿದ್ದಾರೆ.

19 ವರ್ಷಗಳ ಹಿಂದೆ ತೆಲುಗಿನ 'ಚಿರುತ' ಸಿನಿಮಾ ಮೂಲಕ ನೇಹಾ ಶರ್ಮಾ ಚಿತ್ರರಂಗ ಪ್ರವೇಶಿಸಿದ್ದರು. ಒಂದಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ನೇಹಾ ಸಖತ್ ಆಕ್ಟೀವ್ ಆಗಿದ್ದಾರೆ. ಐಷಾರಾಮಿ ಜೀವನ ನಡೆಸುವ ಚೆಲುವೆ ತನ್ನ ಪ್ರತಿದಿನದ ರೊಟೀನ್ ಬಗ್ಗೆ ಫೋಟೊ, ವೀಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ. ಕೊಂಚ ಬಿಂದಾಸ್ ಆಗಿಯೇ ನೇಹಾ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಕಮ್ಮಿ 2 ಕೋಟಿ ಫಾಲೋವರ್ಸ್ ಇದ್ದಾರೆ.

Famous Actress Trolled Over Instagram Subscription as Exclusive Content Sparks Social Media Debate

ಸದ್ಯ 299 ರೂಪಾಯಿ ಪಾವತಿಸಿ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡುವಂತೆ ನೇಹಾ ಶರ್ಮಾ ಇನ್‌ಸ್ಟಾಗ್ರಾಮ್‌ ಸಬ್‌ಸ್ಕ್ರಿಪ್ಷನ್ ಆಪ್ಷನ್ ಕೊಟ್ಟಿದ್ದಾರೆ. ಈ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈಗಾಗಲೇ 9 ಸಾವಿರಕ್ಕೂ ಅಧಿಕ ಜನ ಆಕೆಯ ಇನ್‌ಸ್ಟಾಗ್ರಾಮ್ ಚಂದಾದಾರರಾಗಿದ್ದಾರೆ ಎನ್ನಲಾಗ್ತಿದೆ. ಅಂದರೆ 29 ಲಕ್ಷಕ್ಕೂ ಹೆಚ್ಚು ಆದಾಯ ಸಿಗುತ್ತಿದೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಖ್ಯಾತ ರಾಜಕಾರಣಿಯ ಮಗಳಿಗೆ ಇದೆಲ್ಲಾ ಬೇಕಾ? ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ನೇಹಾ ಶರ್ಮಾ ತಂದೆ ಅಜಿತ್ ಶರ್ಮಾ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾರೆ. 3 ಬಾರಿ ಬಿಹಾರದ ಶಾಸಕರಾಗಿ ಆಯ್ಕೆ ಆಗಿದ್ದರು. 13 ಸಾವಿರ ಮತಗಳಿಂದ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರು. ಅಂದಹಾಗೆ ಅಜಿತ್ ಬಿಹಾರ ವಿಧಾನಸಭೆಯ ಮಾಜಿ ಸದಸ್ಯರು ಕೂಡ. ಆದರೆ ಅವರ ಮಗಳು ಯಾಕೆ ಹೀಗೆ ಹಣಕ್ಕಾಗಿ ಅರೆ ಬೆತ್ತಲೆ ಫೋಟೊ, ವಿಡಿಯೋ ಮಾರಿಕೊಳ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಮಾತ್ರ ಅದು ಆಕೆಯ ಇಷ್ಟ, ನಿಮಗ್ಯಾಕೆ? ಎಂದು ಬೆಂಬಲ ಸೂಚಿಸುತ್ತಿದ್ದಾರೆ.

ವಿಷ್ಣುಪ್ರಿಯಾ, ನೇಹಾ ಶರ್ಮಾ ಮಾತ್ರವಲ್ಲ ನಟಿ ವೇದಿಕಾ, ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಹೀಗೆ ಕೆಲವರು ಇನ್‌ಸ್ಟಾಗ್ರಾಮ್‌ ಸಬ್‌ಸ್ಕ್ರಿಪ್ಷನ್ ಬಟನ್ ಆನ್ ಮಾಡಿದ್ದಾರೆ. ಈಗಾಗಲೇ ಕೆಲವರು ಸಬ್‌ಸ್ಕ್ರಿಪ್ಷನ್ ಪಡೆದುಕೊಂಡಿದ್ದಾರೆ. ಕೇರಳ ಮೂಲದ ಇನ್‌ಫ್ಲುಯೆನ್ಸರ್ ಅಶ್ವನಿ ಎ ಇನ್‌ಸ್ಟಾಗ್ರಾಮ್(ಪರ್ಪಲ್ ಹಾಲ್ಸಿಯಾನ್) ಖಾತೆಗೆ ಹೆಚ್ಚು ಚಂದಾದಾರರಿದ್ದಾರೆ. ಆಕೆ ಈ ಮೂಲಕ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗ್ತಿದೆ.

Read more about: actress social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X