For Quick Alerts
  ALLOW NOTIFICATIONS  
  For Daily Alerts

  ರಾಜು ಶ್ರೀವತ್ಸವ್ ಮೆದುಳು ಕೆಲಸ ಮಾಡುತ್ತಿಲ್ಲ: ಆರೋಗ್ಯ ಮತ್ತಷ್ಟು ಗಂಭೀರ!

  |

  ಭಾರತ ಕಂಡ ಸುಪ್ರಸಿದ್ಧ ಹಾಸ್ಯ ಕಲಾವಿದ ಹಾಗೂ ಬಾಲಿವುಡ್ ನಟ ರಾಜು ಶ್ರೀವತ್ಸವ್ ಅವರಿಗೆ (ಆಗಸ್ಟ್ 10) ರಂದು ಹೃದಯಾಘಾತವಾಗಿತ್ತು. ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದ ರಾಜು ಶ್ರೀವತ್ಸವ್ ಹೋಟೆಲ್‌ ತಂಗಿದ್ದರು. ಈ ವೇಳೆ ಜಿಮ್‌ನಲ್ಲಿ ಹೃದಯಾಘಾತದಿಂದ ಕುಸಿಬಿದ್ದಿದ್ದರು.

  ತಕ್ಷಣವೇ ರಾಜು ಶ್ರೀವತ್ಸವ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಸ್ಟ್ 10 ರಿಂದ ರಾಜು ಶ್ರೀವತ್ಸವ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆಯನ್ನು ನೀಡಲಾಗಿತ್ತು. ಆದ್ರೀಗ ರಾಜು ಶ್ರೀವತ್ಸವ್ ಅವರ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎಂದು ಹೇಳಲಾಗುತ್ತಿದೆ.

  ರಾಜು ಶ್ರೀವತ್ಸವ್ ಆರೋಗ್ಯ ಮತ್ತಷ್ಟು ಗಂಭೀರ

  ರಾಜು ಶ್ರೀವತ್ಸವ್ ಆರೋಗ್ಯದ ಬಗ್ಗೆ ಅವರ ಸ್ನೇಹಿತ ಡಾ. ಅನೀಲ್ ಮುರಾರ್ಕ ಮಾಹಿತಿ ನೀಡಿದ್ದಾರೆ. ರಾಜು ಶ್ರೀವತ್ಸವ್ ಅವರ ಮೆದುಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಲೈಫ್‌ ಸಪೋರ್ಟ್‌ನಲ್ಲಿಯೇ ಇಡಲಾಗಿದೆ ಎಂದು ಈ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ.

  ಬಾಲಿವುಡ್ ನಟ ಶೇಖರ್ ಸುಮನ್ ಕೂಡ ರಾಜು ಶ್ರೀವತ್ಸವ್ ಅವರ ಆರೋಗ್ಯದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. " ರಾಜು ಶ್ರೀವತ್ಸವ್ ಕಳೆದ 46 ಗಂಟೆಗಳಿಂದ ಪ್ರಜ್ಞಾಹೀನರಾಗಿದ್ದಾರೆ." ಎಂದು ಶೇಖರ್ ಸುಮನ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  ಕೊಲ್ಕತ್ತಾಯಿಂದ ವೈದ್ಯರ ಆಗಮನ

  ರಾಜು ಶ್ರೀವತ್ಸವ್ ಅವರ ಆರೋಗ್ಯ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ದೇಶ ಅತ್ಯುನ್ನತ ನ್ಯೂರಾಲಜಿಸ್ಟ್ ಡಾ. ಪದ್ಮಾ ಶ್ರೀವತ್ಸವ್ ಅವರನ್ನು ಕೊಲ್ಕತ್ತಾದಿಂದ ಕರೆಸಲಾಗಿದೆ. ನಿನ್ನೆ( ಆಗಸ್ಟ್ 17) ರಾತ್ರಿಯಿಂದ ರಾಜು ಅವರ ರಕ್ತದೊತ್ತಡದಲ್ಲಿ ಏರು-ಪೇರಾಗಿತ್ತು. ಸದ್ಯ ಏಮ್ಸ್ ವೈದ್ಯರು ರಾಜು ಶ್ರೀವತ್ಸವ್ ಅವರ ರಕ್ತದೊತ್ತಡವನ್ನು ಹತೋಟಿಗೆ ತಂದಿದ್ದಾರೆ. ಆದರೆ, ಆರೋಗ್ಯ ಸ್ಥಿತಿ ಮಾತ್ರ ತೀರಾ ಗಂಭಿರವಾಗಿಯೇ ಇದೆ ಎಂದು ಹೇಳಲಾಗಿತ್ತಿದೆ.

  ರಾಜು ಶ್ರೀವತ್ಸವ್ ಅವರ ಸಂಬಂಧಿ ಕುಶಾಲ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ರಾಜು ಶ್ರೀವತ್ಸವ್ ಆರೋಗ್ಯದಲ್ಲಿ ಪವಾಡವೇ ನಡೆಯಬೇಕಿದೆ. ಡಾ. ಪದ್ಮ ಶ್ರೀವತ್ಸವ್ ಅವರು ದೆಹಲಿ ಬರುತ್ತಿದ್ದು, ರಾಜು ಶ್ರೀವತ್ಸವ್ ಅವರ ಆರೋಗ್ಯ ಸ್ಥಿತಿ ತುಂಬಾನೇ ಕ್ರಿಟಿಕಲ್ ಆಗಿದ್ದಾ ಎಂದು ಮಾಹಿತಿ ನೀಡಿದ್ದಾರೆ.

  Famous Comedian Raju Srivastav Brain Not Responding After Heart Attack

  ಹೊಟೇಲ್‌ನಲ್ಲಿ ಜಿಮ್ ಮಾಡುವಾಗ ಹೃದಯಾಘಾತ

  ರಾಜು ಶ್ರೀವತ್ಸವ್ ದಕ್ಷಿಣ ದೆಹಲಿಯ ಹೊಟೇಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ಹೊಟೇಲ್‌ನಲ್ಲಿದ್ದ ಜಿಮ್‌ನಲ್ಲಿ ರಾಜು ಶ್ರೀವತ್ಸವ್ ಜಿಮ್ ಮಾಡುತ್ತಿದ್ದರು. ಇದೇ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡು ಜಿಮ್‌ನಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ರಾಜು ಶ್ರೀವತ್ಸವ್ ದೆಹಲಿಯಲ್ಲಿ ರಾಜಕೀಯ ಮುಖಂಡರನ್ನು ಭೇಟಿ ಮಾಡಲು ಹೋಗಿದ್ದರು ಎನ್ನಲಾಗಿತ್ತು. ಹೀಗಾಗಿ ಅವರು ದೆಹಲಿಯಲ್ಲಿ ತಂಗಿದ್ದರು. ರಾಜು ಶ್ರೀವತ್ಸವ್ ಸದಾ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದರು. ದಿನ ಬೆಳಗಾದರೆ ಆರೋಗ್ಯದ ಬಗ್ಗೆನೇ ಕಾಳಜಿ ವಹಿಸುತ್ತಿದ್ದರು. ಇಷ್ಟೊಂದು ಫಿಟ್ ಆಗಿದವರಿಗೆ ಹೀಗಾಗಿದ್ದಕ್ಕೆ ಆಪ್ತರು ಆಶ್ಚರ್ಯ ವ್ಯಕ್ತಪಡಿಸಿದ್ದರು.

  English summary
  Famous Comedian Raju Srivastav Brain Not Responding After Heart Attack, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X