For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವತ್ಸವ್‌ಗೆ ಹೃದಯಾಘಾತ: ಪರಿಸ್ಥಿತಿ ಗಂಭೀರ!

  |

  ಭಾರತದ ಸುಪ್ರಸಿದ್ಧ ಹಾಸ್ಯ ಕಲಾವಿದ ರಾಜು ಶ್ರೀವತ್ಸವ್ ಅವರಿಗೆ ಹೃದಯಾಘಾತವಾಗಿದೆ. ಇಂದು (ಆಗಸ್ಟ್ 10) ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ರಾಜು ಶ್ರೀವತ್ಸವ್ ಅವರುಗೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ರಾಜು ಶ್ರೀವತ್ಸವ್ ಬದುಕಿನುದ್ದಕ್ಕೂ ತನ್ನ ವಿಶಿಷ್ಟ ಹಾಸ್ಯದಿಂದ ಜನರು ನಗಿಸುತ್ತಲೇ ಬಂದಿದ್ದಾರೆ. ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ರಾಜು ಶ್ರೀವತ್ಸವ್ ಹಾಸ್ಯಕ್ಕೆ ನಗದವರೇ ಇಲ್ಲ. ಹಲವು ವರ್ಷಗಳ ಕಾಲ ರಾಜು ಹಾಸ್ಯದಿಂದಲೇ ಜನಪ್ರಿಯತೆಯನ್ನು ಪಡೆದಿದ್ದರು. ಅದರಲ್ಲೂ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರನ್ನು ನಕ್ಕು ನಲಿಸಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ v/s ಬಾಲಿವುಡ್: ಪ್ರಶಾಂತ್ ನೀಲ್ ಬಗ್ಗೆ ಕರಣ್ ಜೋಹರ್ ಮಾತುದಕ್ಷಿಣ ಭಾರತ ಚಿತ್ರರಂಗ v/s ಬಾಲಿವುಡ್: ಪ್ರಶಾಂತ್ ನೀಲ್ ಬಗ್ಗೆ ಕರಣ್ ಜೋಹರ್ ಮಾತು

  ಹೊಟೇಲ್‌ನಲ್ಲಿ ರಾಜು ಶ್ರೀವತ್ಸವ್ ಜಿಮ್

  ರಾಜು ಶ್ರೀವತ್ಸವ್ ದಕ್ಷಿಣ ದೆಹಲಿಯ ಹೊಟೇಲ್‌ವೊಂದರಲ್ಲಿ ತಂಗಿದ್ದರು. ಅದೇ ಹೊಟೇಲ್‌ನಲ್ಲಿದ್ದ ಜಿಮ್‌ನಲ್ಲಿ ರಾಜು ಶ್ರೀವತ್ಸವ್ ಜಿಮ್ ಮಾಡುತ್ತಿದ್ದರು. ಇದೇ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಕಣವೇ ಜಿಮ್‌ನಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿಯಿತು.

  ರಾಜು ಶ್ರೀವತ್ಸವ್ ದೆಹಲಿಯಲ್ಲಿ ರಾಜಕೀಯ ಮುಖಂಡನನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದರು. ಹೀಗಾಗಿ ಅವರು ದೆಹಲಿಯಲ್ಲಿ ತಂಗಿದ್ದು, "ಸದಾ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದರು. ದಿನ ಬೆಳಗಾದರೆ ಆರೋಗ್ಯದ ಬಗ್ಗೆನೇ ಕಾಳಜಿ ವಹಿಸುತ್ತಿದ್ದರು. ಇಷ್ಟೊಂದು ಫಿಟ್ ಆಗಿದವರಿಗೆ ಹೀಗಾಗಿದ್ದು ಆಶ್ಚರ್ಯ ತಂದಿದೆ." ಎಂದು ರಾಜು ಶ್ರೀವತ್ಸವ್ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ರಾಜು ಶ್ರೀವತ್ಸವ್ ಸ್ಥಿತಿ ಗಂಭೀರ

  58 ವರ್ಷದ ರಾಜು ಶ್ರೀವತ್ಸವ್‌ಗೆ ಹೃದಯಾಘಾತವಾಗಿದ್ದು ಅವರ ಅಭಿಮಾನಿಗಳಿಗೆ ಹಾಗೂ ಆಪ್ತರಿಗೆ ಆತಂಕ ತಂದೊಡ್ಡಿದೆ. ಮೂಲಗಳ ಪ್ರಕಾರ, ರಾಜು ಶ್ರೀವತ್ಸವ್ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ ಎಂದು ವರದಿಯಾಗಿದೆ. ಸದ್ಯ ಹಾಸ್ಯ ಕಲಾವಿದ ಏಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

  ರಾಜು ಶ್ರೀವತ್ಸವ್ ಡಿಸೆಂಬರ್ 25, 1963ಯಂದು ಕಾನ್ಪುರದಲ್ಲಿ ಜನಿಸಿದರು. ಇವರ ತಂದೆ ರಮೇಶ್ ಚಂದ್ರ ಶ್ರೀವತ್ಸವ್ ಸಾಹಿತಿಯಾಗಿದ್ದರು. ಬಾಲ್ಯದಿಂದಲೇ ರಾಜು ಅವರಿಗೆ ಹಾಸ್ಯ ಕಲಾವಿದ ಆಗಬೇಕು ಎಂಬ ಆಸೆ ಇತ್ತು. ಆ ನಿಟ್ಟಿನಲ್ಲಿಯೇ ರಾಜು ಹಲವು ಬಾಲಿವುಡ್ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ್ದರು.

  Famous Comedian Raju Srivastav Suffers Cardiac Arrest: Condition Critical

  ಕಿರುತೆರೆ- ಸಿನಿಮಾಗಳಲ್ಲಿ ರಾಜು ಫೇಮಸ್

  ಸ್ಟೇಜ್ ಮೇಲೆ ರಾಜು ಶ್ರೀವತ್ಸವ್ ಹೆಸರು ಗಜೋಧರ್. ಈ ಹೆಸರಿನಿಂದಲೇ ರಾಜ ಜನಪ್ರಿಯರಾಗಿದ್ದರು. ಕಿರುತೆರೆಯಲ್ಲಿ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಮೂಲಕ ಇವರ ಯಶಸ್ಸಿನ ಹಾದಿ ಮುಂದುವರೆದಿತ್ತು. ಈ ರಿಯಾಲಿಟಿ ಶೋನಲ್ಲಿ ರಾಜು ಗೆದ್ದು ಬೀಗಿದ್ದರು. ಕಪಿಲ್ ಶರ್ಮಾ ಶೋನಲ್ಲಿ ಕಪಿಲ್ ಜೊತೆ ಕೆಲಸ ಮಾಡಿದ್ದರು. ಬಿಗ್‌ ಬಾಸ್‌ಗೂ ಹೋಗಿ ಬಂದಿದ್ದರು.

  ನೋಡುವುದಕ್ಕೆ ರಾಜು ಶ್ರೀವತ್ಸವ್ ಥೇಟ್ ಅಮಿತಾಬ್ ಬಚ್ಚನ್ ಅವರನ್ನು ಹೋಲುತ್ತಿದ್ದದ್ದು ಅವರ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ ಮೈನೇ ಪ್ಯಾರ್ ಕಿಯಾ, ಮೇ ಪ್ರೇಮ್ ಕಿ ದಿವಾನಿ ಹೂಂ, ಬಾಜೀಗರ್, ಬಾಂಬೆ ಟು ಗೋವಾ ದಂತಹ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

  English summary
  Famous Comedian Raju Srivastav Suffers Cardiac Arrest: Condition Critical, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X