»   » ಸ್ಟಾರ್ ನಟರನ್ನ ಹೋಲುವ 'ಡ್ಯೂಪ್ಲಿಕೇಟ್' ಕಲಾವಿದರು ಇವರೇ ನೋಡಿ!

ಸ್ಟಾರ್ ನಟರನ್ನ ಹೋಲುವ 'ಡ್ಯೂಪ್ಲಿಕೇಟ್' ಕಲಾವಿದರು ಇವರೇ ನೋಡಿ!

Posted By:
Subscribe to Filmibeat Kannada

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಎಲ್ಲ ಸಾಹಸವನ್ನ ನಾಯಕ ನಟರೇ ಮಾಡುವುದಿಲ್ಲ. ಕೆಲವೊಂದು ದೃಶ್ಯಗಳಿಗೆ ಡ್ಯೂಪ್ ಆರ್ಟಿಸ್ಟ್ ಗಳನ್ನ ಬಳಸುತ್ತಾರೆ. ಅದರಲ್ಲು ದ್ವಿಪಾತ್ರದ ಸಿನಿಮಾಗಳು ಅಂದ್ರೆ ಅಲ್ಲಿ ಖಂಡಿತವಾಗಿಯೂ ಡ್ಯೂಪ್ ಆರ್ಟಿಸ್ಟ್ ಗಳು ಬೇಕೇ ಬೇಕು.

ಹಾಗಾದ್ರೆ, ಆ ನಟರನ್ನೇ ಹೋಲುವಂತಹ ಕಲಾವಿದರು ಸಿಕ್ತಾರ? ಎಸ್, ಕೆಲವು ಸ್ಟಾರ್ ರಂತೆ ಫೀಟ್ನೆಸ್ ಮಾಡಿ, ಲುಕ್ ನಲ್ಲು ಅವರಂತೆ ಹೋಲಿಕೆಯನ್ನ ಹೊಂದಿರುವ ಕೆಲವು ಕಲಾವಿದರು ಚಿತ್ರರಂಗದಲ್ಲಿ ಇದ್ದಾರೆ. ಇವರು ನೋಡಲು ಸೇಮ್ ಟು ಸೇಮ್ ಸ್ಟಾರ್ ನಟರಂತೆ ಕಾಣುತ್ತಾರೆ.

ಹಾಗಾದ್ರೆ, ಯಾವೆಲ್ಲಾ ನಟರಿಗೆ ಡ್ಯೂಪ್ ಆರ್ಟಿಸ್ಟ್ ಗಳು ಇದ್ದಾರೆ ಎಂಬುದನ್ನ ಚಿತ್ರಗಳ ಸಮೇತ ಮುಂದೆ ನೋಡಿ.....

ಅಮೀರ್ ಖಾನ್

ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಅಮೀರ್ ಖಾನ್ ಅವರನ್ನೇ ಹೋಲುವಂತಹ ಕಲಾವಿದ ಇವರು. ಅಮೀರ್ ಅಭಿನಯದ ಕೆಲವು ಚಿತ್ರಗಳಿಗೆ ಕೆಲಸ ಕೂಡ ಮಾಡಿದ್ದಾರೆ.

ಸೈಫ್ ಅಲಿಖಾನ್

ಈ ವ್ಯಕ್ತಿ ನೋಡಲು ಥೇಟ್ ನಟ ಸೈಫ್ ಅಲಿಖಾನ್ ಅವರನ್ನೇ ಹೋಲುತ್ತಾರೆ. ಇಬ್ಬರ ನಡುವೆ ದೊಡ್ಡ ಮಟ್ಟದ ವ್ಯತ್ಯಾಸ ಕಾಣುವುದು ಕಮ್ಮಿ.

ನಾನಾ ಪಟೇಕರ್

ಹಿರಿಯ ನಟ ನಾನಾ ಪಟೇಕರ್ ಅವರಿಗೂ ಡ್ಯೂಪ್ಲಿಕೇಟ್ ಆರ್ಟಿಸ್ಟ್ ಇದ್ದಾರೆ. ಗಂಭೀರ ನೋಟು, ಸೂಕ್ಷ್ಮವಾದ ಮುಖ ಭಾವ ಒಂದು ಕ್ಷಣ ನೋಡಿದವರು ಆಶ್ಚರ್ಯವಾಗುವುದಂತೂ ಖಂಡಿತಾ.

ಕತ್ರಿನಾ ಕೈಫ್

ಈಕೆ ಬಾಲಿವುಡ್ ಆಕ್ಷನ್ ಕ್ವೀನ್ ಕತ್ರಿನಾ ಕೈಫ್ ಅವರ ಸಹೋದರಿಯಂತೆ ಕಾಣುತ್ತಾರೆ. ಹೇರ್ ಸ್ಟೈಲ್, ಫಿಟ್ನೆಸ್, ನೋಟ ಹೀಗೆ ಎಲ್ಲ ಅಂಶಗಳಲ್ಲೂ ಹೋಲಿಕೆ ಹೊಂದಿದ್ದಾರೆ.

ಸಲ್ಮಾನ್ ಖಾನ್

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರನ್ನೆ ಹೋಲುವ ಡ್ಯೂಪ್ಲಿಕೇಟ್ ಒಬ್ಬರು ಹಿಂದಿ ಚಿತ್ರರಂಗದಲ್ಲಿ ಇದ್ದಾರೆ. ಇವರನ್ನ ಜೂನಿಯರ್ ಸಲ್ಮಾನ್ ಎಂದೇ ಕರೆಯುತ್ತಾರೆ.

ರಣ್ಬೀರ್ ಕಪೂರ್

ಒಂದು ಈ ಫೋಟೋ ನೋಡಿದ್ರೆ, ಇವರಿಬ್ಬರಲ್ಲಿ ರಣ್ಬೀರ್ ಕಪೂರ್ ಯಾರು ಎಂಬ ಆಲೋಚನೆ ಬರುತ್ತೆ. ಅಷ್ಟರ ಮಟ್ಟಿಗೆ ಇವರಿಬ್ಬರಲ್ಲಿ ಸಾಮ್ಯತೆ ಇದೆ.

ಶಾರೂಖ್ ಖಾನ್

ಕಿಂಗ್ ಖಾನ್, ಬಾದ್ ಶಾ ಶಾರೂಖ್ ಖಾನ್ ಅವರಿಗೂ ಡ್ಯೂಪ್ಲಿಕೇಟ್ ಕಲಾವಿದರು ಇದ್ದಾರೆ.

ಜಾನ್ ಅಬ್ರಾಹಿಂ

ಬಾಲಿವುಡ್ ಹ್ಯಾಂಡ್ ಸಮ್ ನಟ ಜಾನ್ ಅಬ್ರಾಹಿಂ ಅವರನ್ನ ಹೋಲುವಂತಹ ನಕಲಿ ಕಲಾವಿದ ಕೂಡ ಗಮನ ಸೆಳೆದಿದ್ದಾರೆ.

English summary
Have a look at the Famous DoppelGangers In bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada