For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಪಂಜಾಬಿ ಗಾಯಕ ಶಾರ್ದುಲ್ ಸಿಕಂದರ್ ನಿಧನ

  |

  ಪಂಜಾಬಿನ ಖ್ಯಾತ ಹಾಡುಗಾರ ಶಾರ್ದುಲ್ ಸಿಖಂದರ್ ನಿಧನ ಹೊಂದಿದ್ದಾರೆ. ಶಾರ್ದುಲ್ ಸಿಕಂದರ್ ಅವರು ಕೆಲವು ದಿನಗಳಿಂದ ಕೊರೊನಾ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು.

  ಶಾರ್ದುಲ್ ಸಿಕಂದರ್‌ ಗೆ 60 ವರ್ಷ ವಯಸ್ಸಾಗಿತ್ತು. ಅವರು ಕೆಲವು ದಿನಗಳಿಂದಲೂ ಮೊಹಾಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

  ಪಂಜಾಬಿನಲ್ಲಿ ಶಾರ್ದುಲ್ ಅವರ ಹಾಡುಗಳು ಸಖತ್ ಹಿಟ್ ಆಗಿದ್ದವು. ಅವರ ನಿಧನಕ್ಕೆ ಬಾಲಿವುಡ್ ಹಾಗೂ ಪಂಜಾಬಿ ಸಂಗೀತ ಲೋಕ ಹಾಗೂ ಹಲವು ನಟ-ನಟಿಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  ಖ್ಯಾತ ಗಾಯಕರಾದ ದಲೇರ್ ಮೆಹಂದಿ, ಮಿಕ್ಕಾ ಸಿಂಗ್, ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ಗಾಯಕಿ ಹರ್ಷದೀಪ್ ಕೌರ್, ಖ್ಯಾತ ಗಾಯಕ ಮಿಕ್ಕಾ ಸಿಂಗ್ ಇನ್ನೂ ಹಲವರು ಸಾಮಾಜಿಕ ಜಾಲತಾಣದಲ್ಲಿ ಶಾರ್ದುಲ್ ಸಿಖಂದರ್ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

  ನೆಟ್ಟಿಗರಿಗೆ ಪ್ರಿಯಾಂಕ ಚೋಪ್ರಾ ಏನ್ ಹೇಳಿದ್ದಾರೆ ಗೊತ್ತಾ? | Priyanka Chopra | Filmibeat Kannada

  ನಟರಾದ ಆಯುಷ್ಮಾನ್ ಖುರಾನಾ, ಇನ್ನೂ ಹಲವಾರು ನಟರು ಶಾರ್ದುಲ್ ಸಿಖಂದರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಮಿಡಿಯನ್ ಕಪಿಲ್ ಶರ್ಮಾ ಸಹ ಸತಾಪ ಸೂಚಿಸಿದ್ದು, ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಶಾರ್ದುಲ್ ಅವರು ಕಪಿಲ್ ಅವರ ಸಣ್ಣ ಮಗುವನ್ನು ಕೈಯಲ್ಲಿ ಹಿಡಿದು ಕಣ್ಣು ಮುಚ್ಚಿಕೊಂಡು ಆಲಾಪ ಮಾಡುತ್ತಿರುವ ವಿಡಿಯೋ ಅದಾಗಿದೆ.

  English summary
  Famous Punjabi Singer Sardool Sikander Passed Away. Punjabi and Bollywood music celebrities mourns.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X