For Quick Alerts
  ALLOW NOTIFICATIONS  
  For Daily Alerts

  ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ಗೀತಾ ಮಾಲಿ ನಿಧನ

  |

  ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಾಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈ ಮತ್ತು ಆಗ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ. ಮರಾಠಿಯ ಖ್ಯಾತ ಗಾಯಕಿಯಾಗಿದ್ದ ಗೀತಾ ಮಾಲಿ ಪತಿ ವಿಜಯ್ ಜೊತೆ ಅಮೆರಿಕಾದಿಂದ ಊರಿಗೆ ವಾಪಸ್ ಆಗುತ್ತಿದ್ದರು.

  ಮುಂಬೈ ಏರ್ ಪೊರ್ಟ್ ನಿಂದ ಕಾರಿನಲ್ಲಿ ಹೊರಟಿದ್ದ ಗೀತಾ ದಂಪತಿ ಮಹಾರಾಷ್ಟ್ರದ ಸಹಾಪುರ್ ಬಳಿ ಚಲಿಸುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿರವ ಪತಿ ವಿಜಯ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆ

  ಅಮೆರಿಕದಿಂದ ಸುಮಾರು ತಿಂಗಳುಗಳ ಬಳಿಕ ತಾಯ್ನಾಡಿಗೆ ವಾಪಸ್ ಆಗುತ್ತಿದ್ದ ಗೀತಾ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮುಂಬೈ ಏರ್ ಪೋರ್ಟ್ ನಲ್ಲಿ ಬಂದು ಇಳಿಯುತ್ತಿದ್ದಂತೆ, ಬಹುದಿನಗಳ ನಂತರ ಊರಿಗೆ ಮರಳುತ್ತಿದ್ದೀನಿ ಎಂದು ಫೋಟೋ ಕ್ಲಿಕ್ಕಿಸಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು.

  ಆದರೆ ಗೀತಾ ಖುುಷಿ ಹೆಚ್ಚು ಹೊತ್ತು ಉಳಿದಿರಲಿಲ್ಲ. ಕೆಲವೆ ಗಂಟೆಗಳಲ್ಲಿ ಗೀತಾ ಬಾರದ ಲೋಕದ ಕಡೆ ಪಯಣ ಬೆಳೆಸಿದ್ದಾರೆ. ಕಾರನ್ನು ಗೀತಾ ಪತಿ ವಿಜಯ್ ಚಲಾಯಿಸುತ್ತಿದ್ದರು, ಪಕ್ಕದಲ್ಲಿ ಗೀತಾ ಕುಳಿತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

  English summary
  Marathi famous singer Geetha mali died in road accident on Mumbai Agra highway.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X