ವೀರ್ಯ ದಾನ ಮಾಡುವಂತೆ ಹೃತಿಕ್ ರೋಷನ್ ಗೆ ಸಲಹೆ ನೀಡಿದ ಖ್ಯಾತ ನಿರೂಪಕಿ
ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಇಷ್ಟ ಪಡದಿರುವ ಯುವತಿಯರಿಲ್ಲ. ಹುಡುಗಿಯರ ಹಾಟ್ ಫೇವರಿಟ್ ಗ್ರೀಕ್ ಗಾಡ್ ಹೃತಿಕ್ ಅಭಿನಯದ ವಾರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ನಿರ್ಮಿಸಿರುವ ವಾರ್ ಗೆ ಹೃತಿಕ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಾರ್ ಸಿನಿಮಾ ನೋಡಿದ ಮೇಲೆ ಅಭಿಮಾನಿಗಳಿಗೆ ಹೃತಿಕ್ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾದಂತೆ ಕಾಣುತ್ತಿದೆ. ಹೃತಿಕ್ ಅಭಿನಯ ನೋಡಿ ಅಭಿಮಾನಿಗಳು ಅದರಲ್ಲು ಮಹಿಳಾ ಅಭಿಮಾನಿಗಳ ತಲೆ ಗಿರಗಿರ ಎನ್ನುತ್ತಿದೆ. ಹೃತಿಕ್ ರೋಷನ್ ಗೆ ಯಂತಹ ಕ್ರೇಜಿ ಫ್ಯಾನ್ಸ್ ಇದ್ದಾರೆ ಅಂದ್ರೆ ಅಭಿಮಾನಿಯೊಬ್ಬರು ಸಿನಿಮಾ ನೋಡಿ ಫಿದಾ ಆಗಿದ್ದಲ್ಲದೆ, ವಿಚಿತ್ರ ಟ್ವೀಟ್ ಮಾಡಿದ್ದಾರೆ.
ಹೌದು, ತಮಿಳು ನಾಡಿನ ಖ್ಯಾತ ಕ್ರಿಕೆಟ್ ನಿರೂಪಕಿಯಾಗಿರುವ ಭಾವನಾ ಬಾಲಕೃಷ್ಣ, ಹೃತಿಕ್ ಗೆ ವೀರ್ಯ ದಾನ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಈ ಮಾತು ಕೇಳಿ ಹೃತಿಕ್ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ವಾರ್ ಸಿನಿಮಾದಲ್ಲಿ ಹೃತಿಕ್ ಆಕ್ಷನ್ ದೃಶ್ಯಗಳನ್ನು ನೋಡಿ ತಲೆಕೆಡಿಸಿಕೊಂಡಿರುವ ಭಾವನ ಈ ರೀತಿ ವಿಚಿತ್ರವಾಗಿ ಟ್ವೀಟ್ ಮಾಡಿದ್ದಾರೆ.

"ಚಿತ್ರದಲ್ಲಿ ಆಕ್ಷನ್ ಮತ್ತು ಕಾರ್ ಚೇಸ್ ಹಾಲಿವುಡ್ ಶೈಲಿಯಲ್ಲಿ ಮೂಡಿಬಂದಿದೆ. ಮಹಿಳೆಯರಿಗೆ ತುಂಬ ಇಷ್ಟವಾಗುವ ಎರಡು ಕಾರಣ ಅಂದ್ರೆ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್. ಹೃತಿಕ್ ಮತ್ತಷ್ಟು ಸಿನಿಮಾಗಳನ್ನು ಮಾಡಬೇಕು ಮತ್ತು ವೀರ್ಯವನ್ನು ದಾನ ಮಾಡಬೇಕು" ಎಂದು ಹೇಳಿದ್ದಾರೆ.

ಭಾವನಾ ಸ್ಪೋರ್ಟ್ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಡ್ಯಾನ್ಸರ್ ಮತ್ತು ಅಂಕಣಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಭಾವನಾ ಅವರ ಈ ವಿಚಿತ್ರವಾದ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಾರ್ ಸಿನಿಮಾ ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.


Click it and Unblock the Notifications











